Site icon Vistara News

Monsoon kids Fashion: ಮಾನ್ಸೂನ್‌ನಲ್ಲೂ ಮಕ್ಕಳು ಮುದ್ದುಮುದ್ದಾಗಿ ಕಾಣಿಸಬೇಕೇ! ಕ್ಯೂಟ್‌ ಔಟ್‌ಫಿಟ್ಸ್ ಸೆಲೆಕ್ಟ್‌ ಮಾಡಿ

Monsoon kids Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮಳೆಗಾಲದ ಫ್ಯಾಷನ್‌ನಲ್ಲಿ (Monsoon kids Fashion) ಇದೀಗ ಮಕ್ಕಳ ಸರದಿ. ಮುದ್ದುಮುದ್ದಾಗಿರುವ ಮಕ್ಕಳನ್ನು ಮತ್ತಷ್ಟು ಆಕರ್ಷಕವಾಗಿಸಬಲ್ಲ ಲೆಕ್ಕವಿಲ್ಲದಷ್ಟು ಬಗೆಯ ಕ್ಯೂಟ್‌ ಫ್ಯಾಷನ್‌ವೇರ್‌ಗಳು ಮಾರುಕಟ್ಟೆಗೆ ಕಾಲಿಟ್ಟಿವೆ.

ಮಾನ್ಸೂನ್‌ ಕಿಡ್ಸ್‌ ಡಿಸೈನರ್‌ವೇರ್ಸ್‌ನಲ್ಲಿ ಏನೇನಿವೆ ?

ಅಂದಹಾಗೆ, ಮಕ್ಕಳ ಮಾನ್ಸೂನ್‌ ಡಿಸೈನರ್‌ವೇರ್‌ಗಳಲ್ಲಿ, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ಸಾಕಷ್ಟು ಬದಲಾವಣೆಯಾಗಿದೆ. ಮೊದಲಿನ ಹಾಗೆ, ಕೇವಲ ಒಂದು ಜಾಕೆಟ್‌ ಹಾಗೂ ಸ್ವೆಟರ್‌ ಹಾಕಿದರೇ ಮಕ್ಕಳ ಮಳೆಗಾಲದ ಫ್ಯಾಷನ್‌ ಕಂಪ್ಲೀಟ್‌ ಆಗುವುದಿಲ್ಲ! ಬದಲಿಗೆ, ದೊಡ್ಡವರು ಧರಿಸುವ ಡಿಸೈನ್‌ನ ಫ್ಯಾಷನ್‌ವೇರ್‌ಗಳಂತೆಯೇ ಚಿಣ್ಣರಿಗೆ ಕೂಡ ಸೂಟ್‌ ಆಗುವಂತಹ ನಾನಾ ಬಗೆಯ ಮಿನಿ ಡಿಸೈನರ್‌ವೇರ್‌ಗಳು ಆಗಮಿಸಿವೆ.

ಸೈಡಿಗೆ ಸರಿದ ಮಿನಿ-ಮೈಕ್ರೋ ಡ್ರೆಸ್‌ಗಳು

ತೀರಾ ಪುಟ್ಟ ಪುಟ್ಟಾದಾಗಿದ್ದ ಡ್ರೆಸ್‌ಗಳು. ಮಿನಿ, ಶಾರ್ಟ್ ಮಿಡಿ, ಕ್ರಾಪ್‌ ಟಾಪ್‌, ಚಿಕ್ಕ ಫ್ರಾಕ್‌, ಹಾಲ್ಟರ್‌, ಬಾರ್ಡಟ್‌ ನೆಕ್‌ನ ಟಾಪ್‌ಗಳು ಹಾಗೂ ಉಡುಪುಗಳು ಇದೀಗ ಈ ಸೀಸನ್‌ನಲ್ಲಿ ಸೈಡಿಗೆ ಸರಿದಿದ್ದು, ಸದ್ಯಕ್ಕೆ ಮರೆಯಾಗಿವೆ. ಬೇಸಿಗೆಯಲ್ಲಿ ಮಕ್ಕಳನ್ನು ಸವಾರಿ ಮಾಡಿದ್ದ ಲೈಟ್‌ವೈಟ್‌ 2 ಪೀಸ್‌ ಡ್ರೆಸ್‌, ಮೈಕ್ರೋ, ಮಿನಿ ಸ್ಕರ್ಟ್ಗಳು ಸೈಡಿಗೆ ಸರಿದಿವೆ ಎನ್ನುತ್ತಾರೆ ಕಿಡ್ಸ್‌ ಸ್ಟೈಲಿಸ್ಟ್‌ ಅಮಿತ್‌, ಅವರ ಪ್ರಕಾರ, ಈ ಸೀಸನ್‌ಗೆ ಹೊಂದುವಂತಹ ಲೇಯರ್‌ ಲುಕ್‌ ನೀಡುವ ಔಟ್‌ಫಿಟ್‌ಗಳು ಲಗ್ಗೆ ಇಟ್ಟಿವೆ. ಉದಾಹರಣೆಗೆ., ಟಾಪ್‌, ಸ್ಕರ್ಟ್, ಅದರ ಮೇಲೊಂದು ಕ್ರಾಪ್‌ ಜಾಕೆಟ್‌, ಕಾಲಿಗೆ ಸ್ಟಾಕಿನ್ಸ್‌, ಇನ್ನು ಪುಟ್ಟದಾದ ಡೆನಿಮ್‌ ಫ್ರಾಕ್‌ ಮೇಲೊಂದು ಶೀರ್‌ ಅಥವಾ ಲೇಸ್‌ನ ಜಾಕೆಟ್‌, ಕಾಲಿಗೆ ಟೈಟ್ಸ್, ಇನ್ನು ಇಂಡೋ-ವೆಸ್ಟರ್ನ್ ಲುಕ್‌ ಕಿಡ್ಸ್‌ವೇರ್‌ನಲ್ಲಿ ಸೆಮಿ ಎಥ್ನಿಕ್‌ ಲುಕ್‌ ನೀಡುವ ಅಂಬ್ರೆಲ್ಲಾ-ಸಿಂಡ್ರೆಲ್ಲಾ ಗೌನ್‌ಗಳು ಚಾಲ್ತಿಯಲ್ಲಿವೆ. ಡೈಲಿ ಬಳಸುವ ಔಟ್‌ಫಿಟ್‌ಗಳಲ್ಲಿ ಫುಲ್‌ ಸ್ಲೀವ್‌, ತ್ರೀ ಫೋರ್ತ್, ಫ್ರಿಲ್‌, ಫ್ಲೇರ್‌ ಫ್ರಾಕ್‌ಗಳು ಟ್ರೆಂಡ್‌ನಲ್ಲಿವೆ. ಡಬ್ಬಲ್‌ ಲೈನಿಂಗ್‌ ಇರುವಂತಹ ಔಟ್‌ಫಿಟ್ಸ್, ಮಲ್ಟಿ ಲೇಯರ್‌ ಗೌನ್ಸ್‌ ಕೂಡ ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಕಿಡ್ಸ್‌ ಸ್ಟೈಲಿಸ್ಟ್‌ಗಳು.

ಇದನ್ನೂ ಓದಿ: Monsoon Fashion: ಜೆನ್ ಜಿ ಹುಡುಗಿಯರ ಫ್ಯಾಷನ್ ಲಿಸ್ಟ್‌ಗೆ ಸೇರಿದ ದೊಗಲೆ ಓವರ್ ಸೈಜ್ ಶೋಲ್ಡರ್ ಶರ್ಟ್!

ಮಾನ್ಸೂನ್‌ ಕಿಡ್ಸ್‌ವೇರ್‌ ಆಯ್ಕೆ ಹೀಗಿರಲಿ

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

Exit mobile version