Site icon Vistara News

Monsoon Star Fashion: ಬದಲಾಯ್ತು ರಾಮಾಚಾರಿ ಸೀರಿಯಲ್‌ ಖ್ಯಾತಿಯ ನಟ ಋತ್ವಿಕ್‌ ಲುಕ್‌!

actor Rithvik Krupakar Ramachari serial fame

ಶೀಲಾ ಸಿ. ಶೆಟ್ಟಿ

ಕಿರುತೆರೆಯ ರಾಮಾಚಾರಿ ಎಂದೇ ಖ್ಯಾತಿ ಗಳಿಸಿರುವ ನಟ ಋತ್ವಿಕ್‌ ಕ್ರುಪಾಕರ್‌ ಅವರ ಕಂಪ್ಲೀಟ್‌ ಲುಕ್‌ ಬದಲಾಗಿದೆ. ಡಿಸೆಂಟ್‌ ಹುಡುಗನ ಹಾಗೇ ಕಾಣುತ್ತಿದ್ದ ಈ ನಟ ಇದೀಗ ಕಂಪ್ಲೀಟ್‌ ಸೂಪರ್‌ ಮಾಡೆಲ್‌ನಂತೆ ಕಾಣಿಸಿಕೊಂಡಿದ್ದಾರೆ. ಅದು ಮಾನ್ಸೂನ್‌ಗೆ ತಕ್ಕಂತೆ ತಮ್ಮ ಫ್ಯಾಷನ್‌ ಸ್ಟೇಟ್‌ಮೆಂಟ್‌ ಬದಲಿಸಿಕೊಂಡಿದ್ದಾರೆ. ಅದು ಯಾಕೆ? ಎಂದು ಯೋಚಿಸುತ್ತಿದ್ದೀರಾ! ಈ ಬಗ್ಗೆ ಅವರೇ ಹೇಳಿದ್ದಾರೆ. ವಿಸ್ತಾರ ನ್ಯೂಸ್‌ನೊಂದಿಗೆ ತಮ್ಮ ನಯಾ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ ಬಗ್ಗೆ ಮಾತನಾಡಿರುವ ಅವರು ಖುಲ್ಲಾಂ ಖುಲ್ಲಾ ತಮ್ಮ ಫ್ಯಾಷನ್‌ ಚಾಯ್ಸ್‌ ಹಾಗೂ ಇನ್ನೀತರೇ ವಿಷಯಗಳ ಬಗ್ಗೆ ಹಂಚಿಕೊಂಡಿದ್ದಾರೆ.

ವಿಸ್ತಾರ ನ್ಯೂಸ್‌ : ಡಿಸೆಂಟ್‌ ಲುಕ್‌ನಲ್ಲಿದ್ದ ರಾಮಾಚಾರಿ ಅಲಿಯಾಸ್‌ ರಿತ್ವಿಕ್‌ ಲುಕ್‌ ಇದ್ದಕ್ಕಿದ್ದ ಹಾಗೇ ಬದಲಾಗಿದ್ದು ಹೇಗೇ?

ಋತ್ವಿಕ್‌ : ಸದಾ ಒಂದೇ ಲುಕ್‌ನಲ್ಲಿ ಸಿಂಪಲ್‌ ಹಾಗೂ ಡಿಸೆಂಟ್‌ ಆಗಿ ಕಾಣಿಸಿಕೊಳ್ಳುತ್ತಿದ್ದ ನನ್ನ ಲುಕ್‌ ಕೊಂಚ ಬದಲಿಸಬೇಕೆನಿಸಿತು. ಯಾಕೆ ನಾನು ಕೂಡ ಕೊಂಚ ವೆಸ್ಟರ್ನ್ ಲುಕ್‌ನಲ್ಲಿ ಕಾಣಿಸಿಕೊಳ್ಳಬಾರದು. ಹಾಗಾಗಿ ಡಿಫರೆಂಟ್‌ ಇಮೇಜ್‌ನಲ್ಲಿ ಕಾಣಿಸಿಕೊಂಡು ಫೋಟೊಶೂಟ್‌ ಮಾಡಿಸಿದೆ.

ವಿಸ್ತಾರ ನ್ಯೂಸ್‌ : ನಿಮ್ಮ ಈ ಹೊಸ ಲುಕ್‌ಗೆ ಸ್ಟೈಲಿಶ್‌ ಯಾರು? ಹೇಗೆಲ್ಲಾ ಲುಕ್‌ ಬದಲಿಸಲು ಪ್ಲಾನ್‌ ಮಾಡಿದಿರಿ?

ಋತ್ವಿಕ್‌ : ಸ್ಟೈಲಿಶ್‌ ಎಲ್ಲವೂ ನಾನೇ! ಇದಕ್ಕಾಗಿ ಇದೀಗ ಸ್ಟ್ರೀಟ್‌ವೇರ್‌ ಟ್ರೆಂಡ್‌ನಲ್ಲಿರುವ ಹಿಪ್‌ ಹಾಪ್‌ ಲುಕ್‌ ನೀಡುವ ಓವರ್‌ಸೈಝ್‌ನ ಕಾರ್ಗೋ ಶರ್ಟ್ ಜಾಕೆಟ್‌ನೊಂದಿಗೆ ಮ್ಯಾಚಿಂಗ್‌ ಪ್ಯಾಂಟ್‌ ಧರಿಸಿದೆ. ವರ್ಕೌಟ್‌ ಆಯಿತು. ಸಖತ್ತಾಗಿ ಲುಕ್‌ ಬದಲಾಯಿತು.

ಇದನ್ನೂ ಓದಿ: Fashion Factory: ಹಳೆ ಬಟ್ಟೆ, ಶೂ ಕೊಟ್ರೆ, ಹೊಸ ಬಟ್ಟೆ ಕೊಡ್ತಾರೆ! ಇದು ಫ್ಯಾಷನ್ ಫ್ಯಾಕ್ಟರಿ ಕಮಾಲ್

ವಿಸ್ತಾರ ನ್ಯೂಸ್‌ :ನಿಮ್ಮ ಸಿಗ್ನೇಚರ್‌ ಸ್ಟೈಲ್‌ ಏನು ?

ಋತ್ವಿಕ್‌ : ಇದುವರೆಗೂ ನಾನು ಈ ಬಗ್ಗೆ ಯೋಚಿಸಿಯೇ ಇಲ್ಲ! ಆದರೂ ನನ್ನ ಸ್ಮೈಲ್‌, ಆಲ್‌ಟೈಮ್‌ ನನ್ನ ಸಿಗ್ನೇಚರ್‌ ಸ್ಟೈಲ್‌ ಎನ್ನಬಹುದು.

ವಿಸ್ತಾರ ನ್ಯೂಸ್‌ : ನಿಮಗೆ ಫ್ಯಾಷನ್‌ ಐಕಾನ್‌ ಎಂದೆನಿಸುವ ಸ್ಟಾರ್‌ ಯಾರು?ಯಾಕೆ?

ಋತ್ವಿಕ್‌ : ಪ್ರಯೋಗಾತ್ಮಕ ಫ್ಯಾಷನ್‌ವೇರ್‌ ಧರಿಸುವ ಬಾಲಿವುಡ್‌ ನಟ ರಣವೀರ್‌ ಸಿಂಗ್‌.

ವಿಸ್ತಾರ ನ್ಯೂಸ್‌ : ಯಾವತ್ತಾದರೂ ನೀವು ವಿಚಿತ್ರ ಫ್ಯಾಷನ್‌ ಮಾಡಿದ್ದುಂಟಾ?

ಋತ್ವಿಕ್‌ : ಇದೆ. ಕಾಲೇಜಿನಲ್ಲಿದ್ದಾಗ ಒಂದು ಕಾಲಿಗೆ ಯೆಲ್ಲೋ ಮತ್ತೊಂದು ಕಾಲಿಗೆ ರೆಡ್‌ ಸಾಕ್ಸ್‌ ಧರಿಸಿದ್ದೆ. ಮಿಸ್‌ ಮ್ಯಾಚ್‌ ಫ್ಯಾಷನ್‌ ಮಾಡಿದ್ದೆ. ಇದೀಗ ಅದು ಫಂಕಿ ಫ್ಯಾಷನ್‌ ಟ್ರೆಂಡ್‌ ಎಂದೆನಿಸಿಕೊಳ್ಳುತ್ತಿದೆ.

ವಿಸ್ತಾರ ನ್ಯೂಸ್‌ : ನೀವು ಬ್ರ್ಯಾಂಡ್‌ ಫ್ರೀಕಾ ?

ಋತ್ವಿಕ್‌ : ಖಂಡಿತಾ ಇಲ್ಲ! ನನಗೆ ಯಾವುದು ಇಷ್ಟವಾಗುತ್ತದೋ ಅಥವಾ ನೋಡಲು ಚೆನ್ನಾಗಿ ಕಾಣಿಸುತ್ತದೆಯೋ ಆ ಔಟ್‌ಫಿಟ್‌ ಧರಿಸುತ್ತೇನೆ.

ವಿಸ್ತಾರ ನ್ಯೂಸ್‌ : ನಿಮ್ಮ ಅಭಿಮಾನಿಗಳಿಗೆ ನೀವು ನೀಡುವ 3 ಫ್ಯಾಷನ್‌ ಟಿಪ್ಸ್‌ ಏನು ?

ಋತ್ವಿಕ್‌ : ಮಾನ್ಸೂನ್‌ಗೆ ತಕ್ಕಂತೆ ಬೆಚ್ಚಗಿಡಬಹುದಾದ ಸ್ಟೈಲ್‌ ಮಾಡಿ.

ಇತರರನ್ನು ನೋಡಿ ಅನುಕರಿಸಬೇಡಿ,

ಏನೇ ಧರಿಸಿದರೂ ಕಾನ್ಫಿಡೆನ್ಸ್‌ ಸದಾ ನಿಮ್ಮದಾಗಿರಲಿ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

Photography : Ratstudio7

Exit mobile version