ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್ ಟ್ರಾವೆಲ್ (Monsoon star fashion) ಫ್ಯಾಷನ್‌ಗೆ ಸೈ ಎಂದಿದ್ದಾರೆ ನಟಿ ಮೋಕ್ಷಿತಾ ಪೈ. ಟೊರ್ನ್ ಜೀನ್ಸ್, ಸ್ಟ್ರೈಪ್ಸ್ ಕ್ರಾಪ್ ಟಾಪ್ ಹಾಗೂ ವುಲ್ಲನ್ ಕ್ಯಾಪ್‌ನಲ್ಲಿ ರಾಯಲ್ ಬ್ಲ್ಯೂ ಕೊಡೆ ಹಿಡಿದು ಆಕರ್ಷಕವಾಗಿ ಕಾಣಿಸಿಕೊಂಡಿರುವ ಮೋಕ್ಷಿತಾಗೆ ಮಳೆಗಾಲವೆಂದರೇ ಸಖತ್ ಲವ್ ಅಂತೆ.
ಸೀಸನ್‌ಗೆ ತಕ್ಕಂತೆ ಬದಲಾಗುವ ಮೋಕ್ಷಿತಾ
ಇನ್ನು, ನಿಮಗೆಲ್ಲರಿಗೂ ಗೊತ್ತಿರುವಂತೆ ಪಾರು ಸೀರಿಯಲ್ ಮೂಲಕ ಖ್ಯಾತಿ ಗಳಿಸಿರುವ ನಟಿ ಮೋಕ್ಷಿತಾ ಪೈಗೆ ಆಗಾಗ ಟ್ರಾವೆಲ್ ಮಾಡುವುದು ಅವರಿಗೆ ಇಷ್ಟವಾದ ಸಂಗತಿಗಳಲ್ಲೊಂದಂತೆ. ಇದಕ್ಕೆ ಪೂರಕ ಎಂಬಂತೆ, ಆಯಾ ಸೀಸನ್ ಹಾಗೂ ಹವಮಾನಕ್ಕೆ ತಕ್ಕಂತೆ ನಾನಾ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರಂತೆ. ತಮ್ಮ ಮಾನ್ಸೂನ್ ಟ್ರಾವೆಲ್ ಫ್ಯಾಷನ್ ಬಗ್ಗೆ ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ ಅವರು ಒಂದಿಷ್ಟು ಸ್ಟೈಲಿಂಗ್ ಟಿಪ್ಸ್ ಹಂಚಿಕೊಂಡಿದ್ದಾರೆ.
ಮೋಕ್ಷಿತಾ ಹಿಲ್ ಸ್ಟೇಷನ್ ಲವ್
ನನಗೆ ಮೊದಲಿನಿಂದಲೂ ಹಿಲ್ ಸ್ಟೇಷನ್ ಅಂದ್ರೆ ಇಷ್ಟ. ಅದರಲ್ಲೂ ಈ ಮಳೆಗಾಲದಲ್ಲಿ ಹಿಲ್‌ಸ್ಟೇಷನ್‌ಗಳಲ್ಲಿ ಉಳಿದು ಕೊಂಡು ಪ್ರಕೃತಿ ಸೌಂದರ್ಯ ಸವಿಯುವ ಯೂನಿಕ್ ಅನುಭವವೇ ಒಂಥರ ಖುಷಿ ನೀಡುತ್ತದೆ. ಈ ಬಾರಿ ಊಟಿ ಹೋಗಿದ್ವಿ. ಅಲ್ಲಿನ ವಾತಾವರಣಕ್ಕೆ ತಕ್ಕಂತೆ, ಔಟ್‌ಫಿಟ್ಸ್ ಧರಿಸಿದ್ದೆ. ಹೋಗುವಾಗ ಜೀನ್ಸ್ ಪ್ಯಾಂಟ್ ಹಾಗೂ ಶೂನಲ್ಲಿ ಇದ್ದೆ. ಆದರೆ, ನಂತರ ನನ್ನ ಔಟ್‌ಫಿಟ್ಸ್ ಕಂಪ್ಲೀಟ್ ಬದಲಾಯಿತು. ಒದ್ದೆಯಾದ ಶೂ ಬದಲು ಚಪ್ಪಲಿ ಧರಿಸಬೇಕಾಯಿತು. ಜೊತೆಗೆ ಚಳಿಯಿಂದ ಕಾಪಾಡಿಕೊಳ್ಳಲು ಕ್ಯಾಪ್ ಬಳಸಿದೆ. ಅದು ನೋಡಲು ಕೊಂಚ ಸ್ಟೈಲಾಗಿಯೇ ಕಾಣಿಸಿತು ಎಂದು ನಗುತ್ತಾರೆ ಮೋಕ್ಷಿತಾ ಪೈ.
ಇದನ್ನೂ ಓದಿ: The Birthday Boy: ಹೆಸರು ಬದಲಾಯಿಸಿ ಕದ್ದು ಮುಚ್ಚಿ ಸಿನಿಮಾ ಮಾಡಿ, ಮಾಸ್ಕ್ ಧರಿಸಿ ಬಂದ ನಿರ್ದೇಶಕ! ಏನು ಕಥೆ?
ಟ್ರಾವೆಲ್‌ಗೆ ತಕ್ಕಂತಿರಲಿ ಫ್ಯಾಷನ್
ಮಾನ್ಸೂನ್ ಸೀಸನ್‌ನಲ್ಲಿ ಟ್ರಾವೆಲ್ ಮಾಡುವಾಗ ಆದಷ್ಟೂ, ಸೀಸನ್‌ಗೆ ತಕ್ಕಂತೆ ಉಡುಪು ಧರಿಸುವುದು ಮುಖ್ಯ. ಇಲ್ಲವಾದಲ್ಲಿ ಆರೋಗ್ಯ ಹದಗೆಡಬಹುದು. ಪ್ರಯಾಣ ಸುಖಕರವಾಗದೇ ಇರಬಹುದು. ಅಲ್ಲದೇ, ಜಿಟಿಜಿಟಿ ಮಳೆಗೆ ಕಿರಿಕಿರಿ ಎಂದೆನಿಸಬಹುದು. ಹಾಗಾಗಿ ಟ್ರಾವೆಲ್ ಸಮಯದಲ್ಲಿ ಮಾತ್ರ, ಮೊದಲೇ ನಿಮ್ಮ ಔಟ್‌ಫಿಟ್ಸ್ ಪ್ಲಾನ್ ಮಾಡಿ. ಸ್ಟೈಲಿಂಗ್‌ಗಿಂತ ಹೆಚ್ಚಾಗಿ, ನಿಮ್ಮ ದೇಹವನ್ನು ಬೆಚ್ಚಗಿಡುವಂತಹ ಉಡುಪನ್ನು ಧರಿಸಿ. ಮಿಡಿ , ಶಾರ್ಟ್ ಡ್ರೆಸ್, ಲೇಯರ್ ಡ್ರೆಸ್ ಓಕೆ. ಶೂಗಳ ಬದಲು ಚಪ್ಪಲಿ ಆಯ್ಕೆ ಮಾಡಿ ಎನ್ನುವ ಮೋಕ್ಷಿತಾ ಇನ್ನೊಂದಿಷ್ಟು ಸಿಂಪಲ್ ಸಲಹೆಗಳನ್ನು ನೀಡಿದ್ದಾರೆ.
- ಮಳೆಗಾಲಕ್ಕೆ ಮೋಕ್ಷಿತಾ ಸ್ಟೈಲಿಂಗ್ ಟಿಪ್ಸ್:
- ರೇನ್ ಕೋಟ್ ಹಾಗೂ ಅಂಬ್ರೆಲ್ಲಾ ಪ್ರಯಾಣದ ಜೊತೆಗಿರಲಿ.
- ಹುಡುಗಿಯರು ಲಾಂಗ್ ಸ್ಕರ್ಟ್ಸ್, ಮ್ಯಾಕ್ಸಿ, ಗೌನ್ ಆವಾಯ್ಡ್ ಮಾಡಿ.
- ಭಾರವೆನಿಸುವ ಹೆವ್ವಿ ಕ್ಲಾತಿಂಗ್ ಬೇಡ!
- ಜಾಕೆಟ್, ಶ್ರಗ್ಸ್, ಸ್ಕಾರ್ಫ್ ಎಲ್ಲವೂ ಜೊತೆಗಿರಲಿ.
- ತೆಳುವಾದ ಲೇಯರ್ ಲುಕ್ಗೆ ಆದ್ಯತೆ ನೀಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)