-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದರ್ಸ್ ಡೇಗೆ ನಿಮ್ಮ ಅಮ್ಮನೊಂದಿಗೆ ಟ್ವಿನ್ನಿಂಗ್ ಫ್ಯಾಷನ್‌ಗೆ (Mothers Day Twinning Fashion) ಸೈ ಎನ್ನಿ! ಆಕರ್ಷಕವಾಗಿ ಕಾಣಿಸಿಕೊಳ್ಳಿ ಎನ್ನುತ್ತಿದ್ದಾರೆ ಸ್ಟೈಲಿಸ್ಟ್‌ಗಳು. ಹೌದು. ಅಮ್ಮನೊಂದಿಗೆ ಟ್ವಿನ್ನಿಂಗ್ ಮಾಡುವ ಫ್ಯಾಷನ್ ಈ ಬಾರಿ ಟ್ರೆಂಡಿಯಾಗಲಿದೆ. ಕೇವಲ ಅಮ್ಮನ ದಿನಾಚರಣೆಯಂದು ಮಾತ್ರವಲ್ಲ, ಇತರೇ ಯಾವುದೇ ಸಂದರ್ಭಗಳಲ್ಲೂ ಅಮ್ಮನೊಂದಿಗೆ ಟ್ವಿನ್ನಿಂಗ್ ಮಾಡುವ ಕಾನ್ಸೆಪ್ಟ್ ಜೀವನದಲ್ಲಿ ನವೋಲ್ಲಾಸ ತುಂಬಲಿದೆ ಎನ್ನುತ್ತಾರೆ.
ಅಂದಹಾಗೆ, ಟ್ವಿನ್ನಿಂಗ್ ಕಾನ್ಸೆಪ್ಟ್ ಮೊದಲಿನಿಂದಲೂ ಇತ್ತು. ಅತಿ ಹೆಚ್ಚಾಗಿ ಕಪಲ್ ಗೋಲ್‌ಗೆ ಮಾತ್ರ ಸೀಮಿತವಾಗಿತ್ತು. ಇನ್ನು ಹಾಲಿವುಡ್‌ನಲ್ಲಿ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಟ್ವಿನ್ನಿಂಗ್ ಫ್ಯಾಷನ್ ಕ್ಯಾಶುವಲ್ ಉಡುಪುಗಳಲ್ಲಿ ಹೆಚ್ಚು ಚಾಲ್ತಿಯಲ್ಲಿತ್ತು. ತಮ್ಮ ಪ್ರೀತಿ ಪಾತ್ರರಾದವರೊಂದಿಗೆ ಟ್ವಿನ್ನಿಂಗ್ ಫ್ಯಾಷನ್ ಫಾಲೋ ಮಾಡಲು ಕೇವಲ ಒಂದು ಜೀನ್ಸ್ ಹಾಗೂ ಒಂದೇ ಬಗೆಯ ಟೀ ಶರ್ಟ್ ಧರಿಸುವುದು ಸಾಮಾನ್ಯವಾಗಿತ್ತು. ಇದೀಗ ನಮ್ಮ ರಾಷ್ಟ್ರದಲ್ಲೂ ಇದು ಕಾಮನ್ ಆಗಿದೆ. ಆದರೆ ಕೊಂಚ ರೂಪ ಬದಲಿಸಿದೆ. ಅಷ್ಟೇ! ಕ್ಯಾಶುವಲ್ ಫ್ಯಾಷನ್‌ನಲ್ಲಿ ಮಾತ್ರವಲ್ಲ, ಎಥ್ನಿಕ್, ಟ್ರೆಡಿಷನಲ್ ಉಡುಪುಗಳಲ್ಲೂ ಟ್ವಿನ್ನಿಂಗ್ ಮಾಡುವುದು ಟ್ರೆಂಡಿಯಾಗಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಅಮ್ಮನೊಂದಿಗೆ ಟ್ವಿನ್ನಿಂಗ್ ಫ್ಯಾಷನ್
ಅಮ್ಮನೊಂದಿಗೆ ಟ್ವಿನ್ನಿಂಗ್ ಮಾಡುವಾಗ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮೊದಲಿಗೆ ಅವರ ವಯಸ್ಸು ಹಾಗೂ ಅಭಿರುಚಿಗೆ ಅನುಗುಣವಾಗಿ ಪ್ಲಾನ್ ಮಾಡಬೇಕು. ಮಕ್ಕಳು ಚಿಕ್ಕವರಾಗಿದ್ದಲ್ಲಿ ಇಲ್ಲಿ ಅಮ್ಮನೇ ಔಟ್‌ಫಿಟ್ ಆಯ್ಕೆ ಮಾಡಬೇಕಾಗುತ್ತದೆ. ದೊಡ್ಡವರಾದಲ್ಲಿ ಮಕ್ಕಳೇ ಪ್ಲಾನ್ ಮಾಡಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ದಿಯಾ.
ಮೊದಲಿಗೆ ಉಡುಪಿನ ಆಯ್ಕೆ
ಟ್ವಿನ್ನಿಂಗ್ ಫ್ಯಾಷನ್‌ನಲ್ಲಿ ಮೊದಲಿಗೆ ಕ್ಯಾಶುವಲ್ ಔಟ್‌ಫಿಟ್ ಧರಿಸುವುದೋ ಅಥವಾ ಎಥ್ನಿಕ್ ಶೈಲಿಯ ಉಡುಪೋ ಎಂಬುದನ್ನು ನಿರ್ಧರಿಸಬೇಕಾಗುತ್ತದೆ. ಯಾಕೆಂದರೇ, ಕ್ಯಾಶುವಲ್ ಟ್ವಿನ್ನಿಂಗ್ ಫ್ಯಾಷನ್ ಮಾಡುವುದು ಬಲು ಸುಲಭ, ಅದೇ ಎಥ್ನಿಕ್ ಟ್ರೆಡಿಷನಲ್ ಉಡುಪುಗಳನ್ನು ಟ್ವಿನ್ನಿಂಗ್ ಮಾಡುವಾಗ ಸಾಕಷ್ಟು ತಯಾರಿ ಬೇಕಾಗುತ್ತದೆ. ಬೋಟಿಕ್‌ನ ಸಹಾಯ ಪಡೆಯಬೇಕಾಗುತ್ತದೆ. ಉಡುಪಿನ ವಿನ್ಯಾಸ ಹಾಗೂ ಸ್ಟಿಚ್ಚಿಂಗ್ ಎಲ್ಲವನ್ನೂ ಪ್ಲಾನ್ ಮಾಡಬೇಕಾಗುತ್ತದೆ. ಇನ್ನು ಹೆಣ್ಣುಮಕ್ಕಳು ಅಮ್ಮನೊಂದಿಗೆ ಟ್ವಿನ್ನಿಂಗ್ ಫ್ಯಾಷನ್ ಮಾಡುವುದಾದಲ್ಲಿ ಟ್ರೆಂಡ್‌ಗೆ ತಕ್ಕಂತೆ ಅಮ್ಮನ ಅಭಿರುಚಿ ಹಾಗೂ ಕಂಫರ್ಟಬಲಿಟಿಗೆ ತಕ್ಕಂತೆ ಆಯ್ಕೆ ಒಂದೇ ಬಗೆಯ ಉಡುಪನ್ನು ಮಾಡಬಹುದು. ಉದಾಹರಣೆಗೆ., ಜೀನ್ಸ್ ಪ್ಲಸ್ ಟೀ ಶರ್ಟ್, ಒಂದೇ ಬಗೆಯ ಟಾಪ್, ಫ್ರಾಕ್, ಮ್ಯಾಕ್ಸಿ ಹೀಗೆ ಸೆಲೆಕ್ಟ್ ಮಾಡಬಹುದು. ಮಗನೊಂದಿಗೆ ಟ್ವಿನ್ನಿಂಗ್ ಮಾಡುವಾಗ ಆದಷ್ಟೂ ಕ್ಯಾಶುವಲ್ ಉಡುಪುಗಳ ಆಯ್ಕೆ ಸೂಕ್ತ ಎನ್ನುತ್ತಾರೆ ಸ್ಟೈಲಿಸ್ಟ್. ಉದಾಹರಣೆಗೆ., ಪ್ಯಾಂಟ್‌ನೊಂದಿಗೆ ಒಂದೇ ಬಗೆಯ ಟೀ ಶರ್ಟ್ ಅಥವಾ ಶರ್ಟ್ ಧರಿಸಿದಲ್ಲಿ ಸಿಂಪಲ್ ಹಾಗೂ ಎಲಿಗೆಂಟ್ ಲುಕ್ ದೊರೆಯುತ್ತದೆ ಎನ್ನುತ್ತಾರೆ.
ಇದನ್ನೂ ಓದಿ: Motherʼs Day Fashion: ಮದರ್ಸ್ ಡೇ ವಿಶೇಷ ಆಚರಣೆಗೆ ಎಂಟ್ರಿ ಕೊಟ್ಟ ಫ್ಯಾಷನ್‌ವೇರ್ಸ್
ಅಮ್ಮ ಮಕ್ಕಳ ಟ್ವಿನ್ನಿಂಗ್ ಫ್ಯಾಷನ್ ರೂಲ್ಸ್
- ಒಬ್ಬರು ಫಾರ್ಮಲ್ನಲ್ಲಿದ್ದು , ಮತ್ತೊಬ್ಬರು ಕ್ಯಾಶುಯಲ್ ಲುಕ್ನಲ್ಲಿದ್ದರೇ ಅದು ಟ್ವಿನ್ನಿಂಗ್ ಅಲ್ಲ!
- ಅಮ್ಮನ ಅಭಿರುಚಿಗೆ ತಕ್ಕಂತೆ ಟ್ವಿನ್ನಿಂಗ್ ಮಾಡಿ.
- ಹುಡುಗಾರದಲ್ಲಿ ಆದಷ್ಟೂ ಕ್ಯಾಶುವಲ್ ಜೀನ್ಸ್-ಟೀ ಶರ್ಟ್ ಟ್ವಿನ್ನಿಂಗ್ ಮಾಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)