-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಉದ್ಯಾನನಗರಿಯ ಫ್ಯಾಷನ್‌ಲೋಕದಲ್ಲಿ (Celebrity Fashion corner) ತಾಯಿ -ಮಗಳು ಇಬ್ಬರೂ ಒಟ್ಟಿಗೆ ಸಕ್ರಿಯವಾಗಿರುವವರ ಟಾಪ್ ಲಿಸ್ಟ್‌ನಲ್ಲಿ ಸಂಧ್ಯಾ ಜೈನ್ ಹಾಗೂ ವೀಣಾ ಜೈನ್ ಇದೀಗ ಮೊದಲ ಸ್ಥಾನದಲ್ಲಿದ್ದಾರೆ. `ನೂಲಿನಂತೆ ಸೀರೆ, ಅಮ್ಮನಂತೆ ಮಗಳು’ ಎಂಬ ಗಾದೆಯ ಮಾತಿನಂತೆ ನೋಡಲು ಅಪೂರ್ವ ಸುಂದರಿಯಂತಿರುವ ಸಂಧ್ಯಾ ಜೈನ್ ಮಿಸೆಸ್ ಇಂಟರ್‌ನ್ಯಾಷನಲ್ ಸೂಪರ್ ಕ್ವೀನ್ ಟೈಟಲ್ ವಿಜೇತೆ ಕೂಡ. ಕನ್ನಡಿಗರಾಗಿರುವ ಇವರು ಇತ್ತೀಚೆಗಷ್ಟೇ ಪ್ರಾದೇಶಿಕ ಮಟ್ಟದ ಪೇಜೆಂಟ್ ಕೂಡ ನಡೆಸಿ , ಯಶಸ್ವಿಯಾಗಿದ್ದಾರೆ. ಈ ಬಾರಿಯ ಸೆಲೆಬ್ರೆಟಿ ಫ್ಯಾಷನ್ ಕಾರ್ನರ್‌ನಲ್ಲಿ ವಿಸ್ತಾರದ ನ್ಯೂಸ್‌ನೊಂದಿಗೆ ಫ್ಯಾಷನ್ ಲೋಕದ ಬಗ್ಗೆ ಮಾತನಾಡಿದ್ದಾರೆ.
ನಿಮ್ಮ ತಾಯಿ ವೀಣಾ ಜೈನ್ ಕೂಡ ಫ್ಯಾಷನ್ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆ. ಇದೀಗ ನೀವು ಕೂಡ ಟೈಟಲ್ ವಿಜೇತರಾಗಿ ಪೇಜೆಂಟ್‌ಗಳನ್ನು ನಡೆಸಿದ್ದೀರಾ? ಈ ಕ್ಷೇತ್ರದ ಅನುಭವವೇನು ?
ಫ್ಯಾಷನ್ ಕ್ಷೇತ್ರದಲ್ಲಿ ನನಗೆ ನಮ್ಮ ತಾಯಿ ನನಗೆ ಮಾದರಿ ಎನ್ನಬಹುದು. ಅವರು ಸಾಕಷ್ಟು ವರ್ಷಗಳಿಂದಲೇ ಈ ಕ್ಷೇತ್ರದಲ್ಲಿದ್ದವರು. ಮಿಸೆಸ್ ಇಂಡಿಯಾ ಗ್ಲೋಬ್ ಟೈಟಲ್ ವಿಜೇತರು. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಇದೀಗ ಅವರೊಂದಿಗೆ ಜಂಟಿಯಾಗಿ ಪೇಜೆಂಟ್ ಕೂಡ ನಡೆಸಿ ಯಶಸ್ವಿಯಾಗಿದ್ದೇನೆ ಎಂದು ಹೇಳಲು ಸಂತೋಷವಾಗುತ್ತದೆ.
ಫ್ಯಾಷನ್ ಕ್ಷೇತ್ರದಿಂದ ನೀವು ಕಲಿತಿದ್ದೇನು ?
ಫ್ಯಾಷನ್ ಕ್ಷೇತ್ರದಲ್ಲಿ ನಾನು ಹೆಚ್ಚಾಗಿ ಕಲಿತಿರುವುದು ನನ್ನ ತಾಯಿಯಿಂದ, ಅವರು ಈ ಕ್ಷೇತ್ರವನ್ನು ಪರಿಚಯಿಸಿದರು.
ಇದನ್ನೂ ಓದಿ: Summer Fashion 2023: ಬೇಸಿಗೆಯ ನವೋಲ್ಲಾಸಕ್ಕೆ ಬಂತು 2023 ಸಮ್ಮರ್ ಫ್ಯಾಷನ್
ನಿಮ್ಮ ಸಮ್ಮರ್ ಫ್ಯಾಷನ್ ಮಂತ್ರ ಏನು ?
ಕಂಫರ್ಟಬಲ್ ವೇರ್ ನನ್ನ ಸಮ್ಮರ್ ಫ್ಯಾಷನ್ ಮಂತ್ರ. ಅದರಲ್ಲೂ ನನಗೆ ಆರಾಮ ಏನಿಸುವಂತಹ ಔಟ್‌ಫಿಟ್‌ಗಳನ್ನು ನಾನು ಪ್ರಿಫರ್ ಮಾಡುತ್ತೇನೆ. ಅದು ಟ್ರೆಂಡಿ ಔಟ್‌ಫಿಟ್ ಆಗಬಹುದು ಅಥವಾ ಸೀಸನ್ ಉಡುಗೆಯಾಗಬಹುದು.
ನಿಮ್ಮ ಪೇಜೆಂಟ್‌ಗಳಲ್ಲಿ ಭಾಗವಹಿಸಿದ ವಿವಾಹಿತ ಮಹಿಳೆಯರು ನಿಮಗೆ ನೀಡಿದ ಬೆಸ್ಟ್ ಕಾಂಪ್ಲಿಮೆಂಟ್ ಏನು ?
ಪೇಜೆಂಟ್ ನಡೆಯುವವರೆಗೂ ನಾವು ಸ್ಫರ್ಧಿಗಳ ಬಗ್ಗೆ ವಹಿಸಿದ್ದ ಕಾಳಜಿ ಹಾಗೂ ಅಕ್ಕರೆಗೆ ಪ್ರತಿಫಲವಾಗಿ ಮೊದಲಿಗಿಂತ ನಮ್ಮ ಆತ್ಮವಿಶ್ವಾಸ ಹೆಚ್ಚಾಗಲು ನೀವೇ ಕಾರಣ ಎಂದರು.
ಇದನ್ನೂ ಓದಿ: Celebrity Fashion Corner: ಪೇಜೆಂಟ್‌ಗಳು ಆತ್ಮವಿಶ್ವಾಸ ಹೆಚ್ಚಿಸುತ್ತವೆ: ಮಿಸೆಸ್ ಇಂಡಿಯಾ ಗ್ಲೋಬ್ ವೀಣಾ ಜೈನ್
ನಿಮ್ಮ ಪ್ರಕಾರ ಪೇಜೆಂಟ್‌ಗಳು ಮಹಿಳೆಯರನ್ನು ಪ್ರೋತ್ಸಾಹಿಸುವ ಕಾರ್ಯಕ್ರಮವೇ?
ಖಂಡಿತ. ಸೋಲು –ಗೆಲುವು ಎಲ್ಲೆಡೆ ಇದ್ದಿದ್ದೇ, ಆದರೆ, ಪಾಲ್ಗೊಳ್ಳುವ ಮಹಿಳೆಯರ ಟ್ಯಾಲೆಂಟ್ ಹಾಗೂ ಹೆಚ್ಚು ಜೀವನೋತ್ಸಾಹಕ್ಕೆ ಬೆಲೆ ಕಟ್ಟಲಾಗುವುದಿಲ್ಲ! ಅಲ್ಲವೇ!
(ಲೇಖಕಿ : ಫ್ಯಾಷನ್ ಪತ್ರಕರ್ತೆ)