-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಜೆನ್ ಜಿ ಹುಡುಗಿಯರ ಕತ್ತಲ್ಲಿ ನೇಮ್‌ಪ್ಲೇಟ್ ನೆಕ್‌ಚೈನ್‌ಗಳು (Nameplate Neck Chain Jewel Trend) ನೇತಾಡುತ್ತಿವೆ. ಹೌದು. ಇಂದಿನ ಯುವತಿಯರ ಅಭಿರುಚಿ ಬಿಂಬಿಸುವ ನಾನಾ ಶೈಲಿಯ ನೇಮ್‌ಪ್ಲೇಟ್ ನೆಕ್‌ಚೈನ್‌ಗಳು ಇಂದು ಫ್ಯಾಷನ್ ಜ್ಯುವೆಲರಿ ಲೋಕದಲ್ಲಿ ಟ್ರೆಂಡಿಯಾಗಿವೆ. ಹೌದು. ಬಗೆಬಗೆಯ ವೈವಿಧ್ಯಮಯ ಡಿಸೈನ್‌ನ ಇಂಗ್ಲೀಶ್ ಪದ ಹಾಗೂ ಅಕ್ಷರಗಳಿರುವ ಈ ಚೈನ್‌ಗಳು ಇಂದು ಪಾಪ್ಯುಲರ್ ಆಗಿವೆ.
ಏನಿದು ನೇಮ್ ಪ್ಲೇಟ್ ನೆಕ್‌ಚೈನ್ ?
ಧರಿಸುವವರ ಹೆಸರಿರುವ ಪುಟ್ಟದಾದ ನೇಮ್ ಪ್ಲೇಟ್ ಇರುವಂತಹ ನೆಕ್‌ಚೈನ್‌ಗಳಿವು. ಕೆಲವೊಮ್ಮೆ ಕಿಂಗ್, ಕ್ವೀನ್ ಇಲ್ಲವೇ ಇನ್ಯಾವುದೇ ಉತ್ತಮ ಅರ್ಥ ನೀಡುವ ಹಾಗೂ ಪದಗಳಿರುವ ನೇಮ್‌ಪ್ಲೇಟ್ ಆದರೂ ಆಗಿರಬಹುದು. ಅಥವಾ ಒಂದೇ ಅಕ್ಷರದಲ್ಲಿ ಅರ್ಥವನ್ನು ಬಿಂಬಿಸುವಂತಹ ಆಕರ್ಷಕ ಅಕ್ಷರವಾಗಿದ್ದರೂ ಇರಬಹುದು. ಒಟ್ಟಿನಲ್ಲಿ, ಸಿಂಪಲ್ ಆಗಿ ಹೇಳಬೇಕೆಂದರೇ ನಾನಾ ಬಗೆಯ ಅರ್ಥಗಳನ್ನು ಬಿಂಬಿಸುವ ಇಲ್ಲವೇ ಅವರವರ ಹೆಸರುಗಳನ್ನು ಪೆಂಡೆಂಟ್ ಬದಲು ಆಕರ್ಷಕವಾಗಿ ಬಿಂಬಿಸುವ ನೇಮ್‌ಪ್ಲೇಟ್ ಇರುವಂತವೇ ಇವು ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರಿತನ್ಯಾ ಶರ್ಮಾ. ಅವರ ಪ್ರಕಾರ, ಈ ಡಿಸೈನ್‌ನವು ಈ ಸೀಸನ್‌ನ ಫ್ಯಾಷನ್ ಜ್ಯುವೆಲರಿಗಳಲ್ಲಿ ಅತಿ ಹೆಚ್ಚು ಟ್ರೆಂಡ್‌ನಲ್ಲಿವೆಯಂತೆ.
ಫ್ಯಾಷನ್ ಜ್ಯುವೆಲರಿ ಲಿಸ್ಟ್‌ನಲ್ಲಿ ನೇಮ್ ಪ್ಲೆಟ್ ನೆಕ್‌ಚೈನ್
ವೈಟ್ ಮೆಟಲ್, ಪ್ಲಾಟಿನಂ ರಿಪ್ಲೀಕಾ ಚೈನ್, ಗೋಲ್ಡ್ ಪ್ಲೇಟೆಡ್, ಸಿಲ್ವರ್ ನೇಮ್ ಪ್ಲೇಟ್ ಚೈನ್‌ಗಳು ಇಂದು ಫ್ಯಾಷನ್ ಜ್ಯುವೆಲರಿ ಲಿಸ್ಟ್‌ನಲ್ಲಿವೆ. ಕೆಲವು ಸಿಂಗಲ್ ಲೇಯರ್ ಚೈನ್‌ನಲ್ಲಿ ದೊರಕಿದರೇ, ಇನ್ನು ಕೆಲವು ಸಾದಾ ಚೈನ್‌ನೊಂದಿಗೆ ಇರುವಂತಹ ಡಬ್ಬಲ್ ಹಾಗೂ ತ್ರಿಬ್ಬಲ್ ಲೇಯರ್‌ನಲ್ಲಿ ಲಭ್ಯ. ಮಿಕ್ಸ್ ಮ್ಯಾಚ್ ಡಿಸೈನ್‌ನಲ್ಲೂ ದೊರೆಯುತ್ತಿವೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ಸ್.
ಇದನ್ನೂ ಓದಿ: Party Fashion: ಬಿಹೈವ್ ಹೈ ಪಾರ್ಟಿ ಫ್ಯಾಷನ್ ಶೋನಲ್ಲಿ ಬಾಲಿವುಡ್ ನಟಿ ನೇಹಾ ದುಪಿಯಾ
ಮಿಕ್ಸ್ ಮ್ಯಾಚ್ ಮಾಡುವುದು ಹೇಗೆ?
ಎಥ್ನಿಕ್ ಲುಕ್‌ಗಿಂತ ಹೆಚ್ಚಾಗಿ ವೆಸ್ಟೆರ್ನ್ ವೇರ್‌ಗಳಿಗೆ ಈ ನೇಮ್‌ಪ್ಲೇಟ್ ನೆಕ್‌ಚೈನ್‌ಗಳು ಮ್ಯಾಚ್ ಆಗುತ್ತವೆ. ಇವುಗಳಲ್ಲೆ ಕೊಂಚ ಲೇಯರ್ ಲುಕ್ ಇರುವಂತಹ ನೇಮ್‌ಪ್ಲೇಟ್ ನೆಕ್ಲೇಸ್‌ಗಳು ದೊರೆಯುತ್ತವೆ. ಅವು ಸೆಮಿ ಎಥ್ನಿಕ್ ಹಾಗೂ ಎಥ್ನಿಕ್ ವೇರ್‌ಗೆ ಮಿಕ್ಸ್ ಮ್ಯಾಚ್ ಮಾಡಬಹುದು. ಎಲ್ಲದಕ್ಕಿಂತ ಬಿಂದಾಸ್ ಸ್ಟೈಲ್ ಸ್ಟೇಟ್‌ಮೆಂಟ್ ಹುಡುಗಿಯರಿಗೆ ಇವು ಆಕರ್ಷಕವಾಗಿ ಕಾಣಿಸುತ್ತವೆ. ಅಂದಹಾಗೆ, ಬಂಗಾರದಲ್ಲಿ ಮಾಡಿಸುವುದಾದಲ್ಲಿ ತಮ್ಮದೇ ಹೆಸರನ್ನು ಹೊಂದಿರುವ ನೆಕ್‌ಚೈನ್‌ಗಳನ್ನು ಕಸ್ಟಮೈಸ್ ಮಾಡಿಸಬೇಕಾಗುತ್ತದೆ. ಇನ್ನುಳಿದಂತೆ ಜನರಲ್ ಹೆಸರಿರುವಂತವು ಮಾತ್ರ ದೊರೆಯುತ್ತವೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರಾಣಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)