-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ನಮ್ರತಾ ಗೌಡ (Namratha Gowda) ರೆಡ್ ಕಲರ್‌ನ ರಫಲ್ ಲೇಯರ್ ಮ್ಯಾಕ್ಸಿಯಲ್ಲಿ ಬಿಂದಾಸ್ ಹಾಲಿ ಡೇ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಮ್ಮರ್ ಸೀಸನ್‌ನ ಹಾಲಿ ಡೇ ಲುಕ್‌ಗೆ ಸೈ ಎಂದಿದ್ದು, ಸಾಮಾನ್ಯವಾದ ಔಟ್‌ಫಿಟ್‌ಗೆ ಮೊರೆ ಹೋಗದೇ ಕೊಂಚ ಡಿಫರೆಂಟ್ ಲುಕ್ ನೀಡುವ ಡ್ರೆಸ್ ಧರಿಸಿ, ಹಾಲಿ ಡೇ ಫ್ಯಾಷನ್ ಪ್ರಿಯರ ಗಮನ ಸೆಳೆದಿದ್ದಾರೆ.
ಬೀಚ್ ಸೈಡ್ ಹಾಲಿ ಡೇ ಲುಕ್
“ಹಾಲಿ ಡೇ ಫ್ಯಾಷನ್ ಎಂದಾಕ್ಷಣ ಅದರಲ್ಲೂ ನಟಿ ಎಂದಾಕ್ಷಣಾ ಬಿಕಿನಿ ಇಲ್ಲವೇ ತೀರಾ ಎಕ್ಸ್ಪೋಸಿಂಗ್ ಉಡುಪುಗಳನ್ನು ಊಹಿಸುತ್ತಾರೆ. ಆದರೆ, ಈ ಬಾರಿ ನಟಿ ಸಮ್ರತಾ ಗೌಡ ಕೊಂಚ ಡಿಫರೆಂಟ್ ಆಗಿ ಬಿಂಬಿಸುವ ಡ್ರೆಸ್ ಧರಿಸಿದ್ದಾರೆ. ಇದು ಬೀಚ್ ಸೈಡ್ ಹಾಲಿಡೇ ಫ್ಯಾಷನ್‌ಗೆ ಮ್ಯಾಚ್ ಮಾಡಿದ್ದಾರೆ. ಅದರಲ್ಲೂ ಬಿಸಿಲಲ್ಲಿ ಕೊಂಚ ತಿಳಿ ವರ್ಣದ ಉಡುಪಿನ ಬದಲಾಗಿ ರೆಡ್ ಕಲರ್ ಆಯ್ಕೆ ಮಾಡಿದ್ದಾರೆ. ಇದು ಅವರ ಬದಲಾದ ಹಾಲಿಡೇ ಫ್ಯಾಷನ್ ಹೈಲೈಟ್ ಮಾಡುತ್ತದೆ” ಎಂದು ಹೇಳುತ್ತಾರೆ ಫ್ಯಾಷನ್ ವಿಮರ್ಶಕರಾದ ಜಾನ್. ಅವರ ಪ್ರಕಾರ, ನಮ್ರತಾ ಈ ಬಾರಿ ಡಾರ್ಕ್ ಶೇಡ್ ಔಟ್‌ಫಿಟ್ಸ್ ಆಯ್ಕೆ ಮಾಡಿರುವುದು ವಿಭಿನ್ನ ಲುಕ್‌ಗಾಗಿ ಎಂಬುದು ತಿಳಿದು ಬರುತ್ತದೆ ಎಂದಿದ್ದಾರೆ.
ಏನಿದು ಹಾಲ್ಟರ್ ನೆಕ್ ರಫಲ್ ಲೇಯರ್ ಮ್ಯಾಕ್ಸಿ ?
ನೋಡಲು ಸ್ಟ್ರಾಪ್‌ನಂತೆ ಕಾಣುವ ಹಾಲ್ಟರ್ ನೆಕ್‌ಲೈನ್ ಇರುವ ರಫಲ್ ಲೇಯರ್ ಮ್ಯಾಕ್ಸಿಯು ಅಸ್ಸೆಮ್ಮಿಟ್ರಿಕಲ್ ಡಿಸೈನ್ ಒಳಗೊಂಡಿರುತ್ತದೆ. ಇದೊಂದು ಸಮ್ಮರ್ ಸೀಸನ್ ಫ್ಯಾಷನ್‌ವೇರ್ ಆಗಿದೆ. ಬಾಲಿವುಡ್‌ಗರ ಫೇವರೇಟ್ ಹಾಲಿಡೇ ಫ್ಯಾಷನ್‌ನಲ್ಲಿದೆ. ನಾನಾ ಶೇಡ್‌ಗಳಲ್ಲಿ ದೊರೆತರೂ, ಇದೀಗ ರೆಡ್ ಕಲರ್‌ನವು ಅತಿ ಹೆಚ್ಚು ಟ್ರೆಂಡಿಯಾಗಿವೆ. ಪದರ ಪದರದಂತೆ ಕಾಣುವ ಈ ಲೇಯರ್ ಶಿಫಾನ್ ರೆಕ್ಕೆ ಪುಕ್ಕದಂತಹ ಡಿಸೈನ್ಸ್ ಹಾಗೂ ಸೈಡ್ ಸ್ಲಿಟ್ ಜೊತೆಗೆ ಶೋಲ್ಡರ್ ಎಕ್ಸ್ಪೋಸ್ ಮಾಡುವ ನೆಕ್‌ಲೈನ್ಸ್ ಎಲ್ಲವೂ ಈ ಸಮ್ಮರ್ ಬಿಸಿಲಿಗೆ ಹೊಂದುತ್ತದೆ ಎಂದು ಡಿಟೇಲ್ ನೀಡುತ್ತಾರೆ ಫ್ಯಾಷನಿಸ್ಟಾಗಳು. ಅವರ ಪ್ರಕಾರ, ಈ ಬಗೆಯ ನೆಕ್‌ಲೈನ್ ಸಮ್ಮರ್ ಸೀಸನ್‌ನ ಬೆಸ್ಟ್ ಡಿಸೈನ್ಸ್. ಇನ್ನು, ರಫಲ್ ಡಿಸೈನ್ಸ್ ಶಿಫಾನ್‌ದ್ದಾದರಿಂದ ಲೈಟ್‌ವೈಟ್ ಆಗಿರುತ್ತವೆ. ಸ್ಲಿಟ್ ಕಾಲಿನ ಅಂದಕ್ಕೆ ಬಿಂದಾಸ್ ಟಚ್ ನೀಡುತ್ತವೆ ಎನ್ನುತ್ತಾರೆ.
ಇದನ್ನೂ ಓದಿ: Cannes 2024 Fashion: ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸೆಲೆಬ್ರೆಟಿಗಳ ಫ್ಯಾಷನ್ ಟ್ರೆಂಡ್ ಹೇಗಿದೆ ನೋಡಿ!
ನಮ್ರತಾ ಹಾಲಿಡೇ ಫ್ಯಾಷನ್ ಲವ್
ನಟಿ ನಮ್ರತಾ ಕೂಡ ಹಾಲಿ ಡೇ ಫ್ಯಾಷನ್ ಲವ್ವರ್ ಎನ್ನಬಹುದು. ಯಾಕೆಂದರೇ, ಅವರು ಎಲ್ಲೇ ಹೋಗಲಿ ಆಯಾ ಸ್ಥಳಗಳಿಗೆ ತಕ್ಕಂತೆ ಇಲ್ಲವೇ, ಟ್ರೆಂಡಿಯಾಗಿರುವ ಬಿಂದಾಸ್ ಉಡುಪುಗಳನ್ನೇ ಧರಿಸುತ್ತಾರೆ. ಮುಲಾಜು ನೋಡದೇ ತಮ್ಮ ಆಸೆ-ಅಭಿಲಾಷೆಗೆ ತಕ್ಕಂತೆ ಬಿಂದಾಸ್ ಔಟ್‌ಫಿಟ್ಸ್ ಧರಿಸುತ್ತಾರೆ. ಇದು ಅವರ ಬಿಂದಾಸ್ ಫ್ಯಾಷನ್ ಸ್ಟೇಟ್‌ಮೆಂಟ್ಸ್ ಬಿಂಬಿಸುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ ಗಳು.
ಈ ಔಟ್‌ಫಿಟ್‌ನಲ್ಲಿ ನೀವೂ ನಮ್ರತಾರಂತೆ ಕಾಣಲು ಹೀಗೆ ಮಾಡಿ
- ಪ್ರಯೋಗಾತ್ಮಕ ಡಿಸೈನರ್ವೇರ್ ಸೆಲೆಕ್ಟ್ ಮಾಡಿ.
- ಹಾಲ್ಟರ್ ನೆಕ್ ಡ್ರೆಸ್ ಬಿಂದಾಸ್ ಲುಕ್ ನೀಡುತ್ತದೆ.
- ಸ್ಲಿಟ್ ಡ್ರೆಸ್ಗಳು ಕಾಲುಗಳನ್ನು ಆಕರ್ಷಕವಾಗಿ ಬಿಂಬಿಸುತ್ತವೆ.
- ಸಿಂಪಲ್ ಮೇಕಪ್ ಹಾಗೂ ಹೇರ್ಸ್ಟೈಲ್ಗೆ ಸೈ ಎನ್ನಿ.
- ಹಾಲಿಡೇಯಲ್ಲಿ ಧರಿಸುವ ಸ್ಯಾಂಡಲ್ಸ್ ಫ್ಲಾಟಾಗಿರಲಿ.
- ನಿಮ್ಮ ಸ್ಕಿನ್ ಟೋನ್ಗೆ ಮ್ಯಾಚ್ ಆಗುವ ಕಲರ್ ಡ್ರೆಸ್ ಆಯ್ಕೆ ಮಾಡಿ.
- ಶೋಲ್ಡರ್ಗೆ ಹಾಲ್ಟರ್ ನೆಕ್ ಹೊಂದುತ್ತದೆಯೇ ಎಂಬುದನ್ನು ಮೊದಲೇ ಟ್ರಯಲ್ ಮಾಡಿ ನೋಡಿ.
- ಹಾಲ್ಟರ್ ನೆಕ್ ಡ್ರೆಸ್ ಧರಿಸಿದಾ ಕತ್ತಿಗೆ ಆಕ್ಸೆಸರೀಸ್ ಧರಿಸಬೇಡಿ.
- ಹಾಲಿ ಡೇ ಫ್ಯಾಷನ್ ಟ್ರೆಂಡ್ ಫಾಲೋ ಮಾಡಿ, ನಂತರ ಡಿಸೈಡ್ ಮಾಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)