Site icon Vistara News

Navaratri Fashion | ನವರಾತ್ರಿ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ದುರ್ಗಾ ದೇವಿ ವಿನ್ಯಾಸ

Navaratri Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ದಸರಾ ಫೆಸ್ಟೀವ್‌ ಸೀಸನ್‌ನಲ್ಲಿ ಭಕ್ತಿ ಹೆಚ್ಚಿಸುವ ನವದುರ್ಗಾ (Navaratri Fashion), ಕಾಳಿ ದೇವಿಯ ವಿನ್ಯಾಸ ಇಲ್ಲವೇ ಚಿತ್ತಾರವನ್ನೊಳಗೊಂಡ ಬ್ಲೌಸ್‌ ಹಾಗೂ ಆಕ್ಸೆಸರೀಸ್‌ಗಳು ಫ್ಯಾಷನ್‌ ಲೋಕಕ್ಕೆ ಕಾಲಿಟ್ಟಿವೆ.

ದಸರಾ ಫ್ಯಾಷನ್‌ನಲ್ಲಿ ಸ್ಥಾನ
“ನವದುರ್ಗೆ ಹಾಗೂ ಕಾಳಿ ಮಾತೆಯ ಚಿತ್ತಾರಗಳು ಇರುವ ಬ್ಲೌಸ್‌ಗಳು ಮೊದಲಿನಿಂದಲೇ ಮಾರುಕಟ್ಟೆಯಲ್ಲಿದ್ದವು. ಆದರೆ, ಇದೀಗ ದಸರಾ ಆಚರಣೆ ಆರಂಭವಾಗುತ್ತಿದ್ದಂತೆ ಇವುಗಳ ಬೇಡಿಕೆ ಹೆಚ್ಚಾಯಿತು. ಅದರಲ್ಲೂ ಬಂಗಾಲಿ ಶೈಲಿಯ ದುರ್ಗಾ ಮಾತೆಯ ಮುಖ ಇರುವಂತಹ ಸೀರೆಯ ಬ್ಲೌಸ್‌ಗಳು ಹೆಚ್ಚು ಡಿಮ್ಯಾಂಡ್‌ ಪಡೆದುಕೊಂಡವು. ಎಲ್ಲದಕ್ಕಿಂತ ಹೆಚ್ಚಾಗಿ ಈ ಬಂಗಾಲಿ ಸೀರೆಗಳಿಗೆ ಮ್ಯಾಚ್‌ ಆಗುವಂತಹ ದೇವಿ ಮುಖವಿರುವ ಸರಗಳು ಹಾಗೂ ಪೆಂಡೆಂಟ್‌ವನ್ನೊಳಗೊಂಡ ಉದ್ದುದ್ದದ ಹಾರಗಳು ಕೂಡ ಪ್ರಚಲಿತಕ್ಕೆ ಬಂದವು” ಎನ್ನುತ್ತಾರೆ ಪಾಯಲ್‌ಸೇನ್‌ ಗುಪ್ತಾ. ಅವರ ಪ್ರಕಾರ, ಬಂಗಾಲಿ ಡಿಸೈನ್‌ನ ಈ ಸೀರೆಯ ಬ್ಲೌಸ್‌ಗಳ ಜತೆಗೆ ಅವುಗಳಿಗೆ ಹೊಂದುವಂತಹ ದೇಸಿ ಲುಕ್‌ ನೀಡುವ ಬಾರ್ಡರ್‌ ಇರುವಂತಹ ಸೀರೆಗಳಿಗೂ ಇದೀಗ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ದೇವಿ ಮುಖವಿರುವ ಕತ್ತಿನ ಹಾರಗಳು ಸಹ ಹೊಸ ವಿನ್ಯಾಸದಲ್ಲಿ ಮಾರುಕಟ್ಟೆಗೆ ಬಂದಿವೆ ಎನ್ನುತ್ತಾರೆ.

ದೇವಿ ಮುಖವಿರುವ ಸೀರೆ ಬ್ಲೌಸ್‌ಗಳ ಚಿತ್ತಾರ
ದೇವಿಯ ಸುಂದರ ಮುಖವಿರುವ ಬ್ಲೌಸ್‌ಗಳ ಚಿತ್ತಾರ ಬ್ಲೌಸ್‌ನ ಬೆನ್ನ ಭಾಗಕ್ಕೆ ಚಿತ್ರಿಸಲಾಗಿರುತ್ತದೆ. ಕೆಲವು ಪ್ರಿಂಟ್‌ನಲ್ಲಿ ಇದ್ದರೇ ಕೆಲವು ಹ್ಯಾಂಡ್‌ವರ್ಕ್ ಅಥವಾ ಪ್ಯಾಚ್‌ ವರ್ಕ್ನಲ್ಲಿ ದೊರೆಯುತ್ತವೆ. ಇವು ಆಯಾ ಕಾಂಟ್ರಾಸ್ಟ್‌ ಸೀರೆ ಇಲ್ಲವೇ ಕಾಟನ್‌, ಸೆಮಿ ಕಾಟನ್‌ ಸೀರೆಗಳಿಗೆ ಸೂಟ್‌ ಆಗುವಂತೆ ದೊರೆಯುತ್ತವೆ. ಈ ಶೈಲಿಯ ರೆಡಿಮೇಡ್‌ ಬ್ಲೌಸ್‌ಗಳು ಹೆಚ್ಚು ಟ್ರೆಂಡಿಯಾಗಿವೆ. ಈ ನವರಾತ್ರಿಯಲ್ಲಿ ಆನ್‌ಲೈನ್‌ನಲ್ಲಿ ಇವುಗಳ ಖರೀದಿ ಹೆಚ್ಚಾಗಿದೆ ಎನ್ನುತ್ತಾರೆ ಫ್ಯಾಷನ್‌ ಆಕ್ಸೆಸರೀಸ್‌ಗಳ ಉದ್ಯಮಿ ಪಾಯಲ್‌.

ದೇವಿ ಮುಖದ ಹಾರ
ಮೊದಲೆಲ್ಲ ನಾರ್ತ್ ಇಂಡಿಯಾದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ದೇವಿ ಮುಖದ ಹಾರಗಳು ಇದೀಗ ಇಲ್ಲಿಯೂ ಸದ್ದು ಮಾಡುತ್ತಿವೆ. ಇಲ್ಲಿಯ ಮಾನಿನಿಯರಿಗೆ ಪ್ರಿಯವಾಗುವಂತಹ ಡಿಸೈನ್‌ನಲ್ಲಿ ದುರ್ಗಾ ಮಾತೆಯ ಪೆಂಡೆಂಟ್‌ ಇರುವಂತಹ ಹಾರಗಳು ಜೂಟ್‌ ಹಾಗೂ ಥ್ರೆಡ್‌ನಲ್ಲಿ ದೊರೆಯುತ್ತಿವೆ. ಕಸ್ಟಮೈಸ್ಡ್‌ ಹಾರಗಳು ಇದೀಗ ಲಭ್ಯ. ಜಾನಪದ ಕಲೆಯನ್ನು ಬಿಂಬಿಸುವ ಈ ಹಾರಗಳು ಇದೀಗ ಹೆಣ್ಣುಮಕ್ಕಳನ್ನು ಹೆಚ್ಚು ಸೆಳೆಯುತ್ತಿವೆ ಎನ್ನುತ್ತಾರೆ ತಯಾರಕರು.

ದೇವಿ ಬ್ಲೌಸ್‌ ಹಾಗೂ ಆಕ್ಸೆಸರೀಸ್‌ ಪ್ರಿಯರಿಗಾಗಿ ಸಲಹೆಗಳು

Exit mobile version