Site icon Vistara News

Navaratri Pink Colour Styling Tips: ಹೆಣ್ಣುಮಕ್ಕಳನ್ನು ಆಕರ್ಷಕವಾಗಿ ಬಿಂಬಿಸಬಲ್ಲ ನವರಾತ್ರಿಯ 9ನೇ ದಿನದ ಗುಲಾಬಿ ಬಣ್ಣ

Navaratri Pink Colour Styling Tips

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ನವರಾತ್ರಿಯ 9 ನೇ ದಿನ ಎಲ್ಲೆಡೆ (Navaratri Pink Colour Styling Tips) ಗುಲಾಬಿಮಯ. ಹೌದು. ಈ ದಿನದ ಬಣ್ಣ ಗುಲಾಬಿ. ಅದರಲ್ಲೂ ಯುವತಿಯರ ಹಾಗೂ ಮಹಿಳೆಯರ ಫೇವರೇಟ್‌ ಲಿಸ್ಟ್‌ನಲ್ಲಿರುವ ಕಲರ್‌ ಇದು. ಧರಿಸಿದಾಗ ಹೆಚ್ಚು ಅಲಂಕಾರಗೊಳ್ಳದೇ ಎಂತಹವರನ್ನು ಸುಂದರವಾಗಿ ಬಿಂಬಿಸುವ ಬಣ್ಣವಿದು.

ಹೆಣ್ಣು ಮಕ್ಕಳ ಫೇವರೇಟ್‌ ಬಣ್ಣ

ಸಮೀಕ್ಷೆಯೊಂದರ ಪ್ರಕಾರ, ಪದೇ ಪದೇ ಟ್ರೆಂಡಿಯಾಗುವ ವರ್ಣದಲ್ಲಿ ಗುಲಾಬಿ ಸೇರಿದೆಯಂತೆ. ವರ್ಷದಲ್ಲಿ ಕನಿಷ್ಠ ಎಂದರೂ ಸುಮಾರು ಬಾರಿ ಸೀಸನ್‌ನಲ್ಲಿ ನಾನಾ ಗುಲಾಬಿ ವರ್ಣಗಳ ಶೇಡ್‌ಗಳು ಪರಿಚಯಗೊಳ್ಳುವಂತೆ. ಅಷ್ಟು ಮಾತ್ರವಲ್ಲ, ಅಪರೇಲ್‌ ಸಂಸ್ಥೆಯೊಂದರ ಸಮೀಕ್ಷಾ ವರದಿ ಪ್ರಕಾರ, ಪ್ರತಿ ಯುವತಿಯ ಬಳಿ ಕಡಿಮೆ ಎಂದರೂ ಐದಾರು ಸೆಟ್‌ ಗುಲಾಬಿ ಶೇಡ್‌ನ ಉಡುಪುಗಳು ವಾರ್ಡ್ರೋಬ್‌ನಲ್ಲಿರುತ್ತವಂತೆ. ಆ ಮಟ್ಟಿಗೆ ಗುಲಾಬಿ ಕ್ರೇಝ್‌ ಶೇಕಡಾ 70 ರಷ್ಟು ಹೆಣ್ಣು ಮಕ್ಕಳಲ್ಲಿ ಕಂಡು ಬರುತ್ತದಂತೆ. ಆಯಾ ವ್ಯಕ್ತಿಯ ವ್ಯಕ್ತಿತ್ವದ ಆಧರಾದ ಮೇಲೆ ಶೇಡ್‌ಗಳಲ್ಲಿ ಬದಲಾವಣೆ ಕಂಡು ಬರುತ್ತದಂತೆ. ಅದನ್ನು ಹೊರತುಪಡಿಸಿದರೇ ಯೂನಿವರ್ಸಲ್‌ ಫೇವರೇಟ್‌ ಕಲರ್‌ನಲ್ಲಿ ಈ ಬಣ್ಣಕ್ಕೆ ಸ್ಥಾನವಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು. ಅವರ ಪ್ರಕಾರ, ವೆಸ್ಟರ್ನ್ ಅಥವಾ ಎಥ್ನಿಕ್‌ವೇರ್‌ ಎಂಬುದಷ್ಟೇ ಭಿನ್ನವಾಗಿರುತ್ತದಂತೆ.

ಟ್ರೆಂಡ್‌ನಲ್ಲಿರುವ ಶಿಫಾನ್‌ ಗುಲಾಬಿ ಸೀರೆಗಳು

ಬಾಲಿವುಡ್‌ ನಟಿ ಅಲಿಯಾ ಭಟ್‌ ಧರಿಸಿದ ಶಿಫಾನ್‌ ಸೀರೆ ಯಾವ ಮಟ್ಟಿಗೆ ಟ್ರೆಂಡ್‌ನಲ್ಲಿತ್ತೆಂದರೇ ಈಗಲೂ ಮುಂದುವರೆದಿದೆ. ಯುವತಿಯರು ಇಂದಿಗೂ ಈ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಈ ಸೀರೆ ಉಟ್ಟರೇ ಹೆಚ್ಚಿನ ಮೇಕಪ್‌ ಅಗತ್ಯವಿಲ್ಲ.

ಇದನ್ನೂ ಓದಿ: Navaratri Celebration : ಚಿಕ್ಕೋಡಿಯಲ್ಲಿ ತಲವಾರ್‌ನಿಂದ ಬೆರಳು ಕೊಯ್ದು ದೇವಿಗೆ ರಕ್ತದ ಅಭಿಷೇಕ!

ರೇಷ್ಮೆಯ ಪಿಂಕ್‌ ಸೀರೆಗಳಲ್ಲಿ ಹೀಗೆ ಕಾಣಿಸಿಕೊಳ್ಳಿ

ರೇಷ್ಮೆಯ ಪಿಂಕ್‌ ಸೀರೆ ಉಡುವುದಾದಲ್ಲಿ ಕಾಂಟ್ರಾಸ್ಟ್ ಬ್ಲೌಸ್‌ ಆವಾಯ್ಡ್‌ ಮಾಡಿ. ಸಿಂಪಲ್‌ ಬಂಗಾರದ ಜ್ಯುವೆಲರಿಗಳನ್ನು ಧರಿಸಿ. ಟ್ರೆಡಿಷನಲ್‌ ಹೇರ್‌ಸ್ಟೈಲ್‌ ಮಾಡಿ. ಆಕರ್ಷಕ ಲುಕ್‌ ನಿಮ್ಮದಾಗುವುದು. ಇನ್ನು ಕಾಟನ್‌ ಸಿಲ್ಕ್, ಲೆನಿನ್‌ ಹಾಗೂ ಇನ್ನಿತರೇ ಸೀರೆಯಾದಲ್ಲಿ ಆಯಾ ಫ್ಯಾಬ್ರಿಕ್‌ಗೆ ತಕ್ಕಂತೆ ಡ್ರೇಪ್‌ ಮಾಡಿ.

ಪಿಂಕ್‌ ಗ್ರ್ಯಾಂಡ್‌ ಎಥ್ನಿಕ್‌ವೇರ್ಸ್

ಇನ್ನು ಎಥ್ನಿಕ್‌ವೇರ್‌ ವಿಷಯಕ್ಕೆ ಬಂದಲ್ಲಿ ಗ್ರ್ಯಾಂಡ್‌ ಇರುವ ಉಡುಪುಗಳಿಗೆ ಮೇಕಪ್‌ ಹೊಂದುವಂತಿರಬೇಕು. ಹೇರ್‌ ಆಕ್ಸೆಸರೀಸ್‌ ಧರಿಸಿದಲ್ಲಿ ಮತ್ತಷ್ಟು ಗ್ರ್ಯಾಂಡ್‌ ಆಗಬಹುದು. ಲೆಹೆಂಗಾ, ಗಾಗ್ರಾ, ಶರಾರ, ಅನಾರ್ಕಲಿ. ಲಾಂಗ್‌ ಸ್ಕರ್ಟ್, ಲಾಂಗ್‌ ಕುರ್ತಾ ಹೀಗೆ ಆಯಾ ಔಟ್‌ಫಿಟ್‌ನ ನೆಕ್‌ಲೈನ್‌ಗೆ ಹೊಂದುವಂತಹ ಸ್ಟೇಟ್‌ಮೆಂಟ್‌ ಜ್ಯುವೆಲರಿ ಧರಿಸಿ. ಮೇಕಪ್‌ನಲ್ಲಿ ಪಿಂಕ್‌ ಲಿಪ್‌ಸ್ಟಿಕ್‌ ಬಳಸಿ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

Exit mobile version