Site icon Vistara News

Navaratri white colour styling : ನವರಾತ್ರಿಯ 2ನೇ ದಿನಕ್ಕೆ ಶ್ವೇತ ವರ್ಣದ ಸ್ಟೈಲಿಂಗ್‌

White Sree women

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬಿಳಿ ವರ್ಣ ಶಾಂತಿಯ ಪ್ರತೀಕ. ಬಿಳಿ ಬಣ್ಣದಲ್ಲೂ ನಾನಾ ಶೇಡ್‌ಗಳನ್ನು ಕಾಣಬಹುದು. ನವರಾತ್ರಿಯ ಎರಡನೇ ದಿನ ಬಿಳಿ ಬಣ್ಣದ ಉಡುಪು ಅಥವಾ ಸೀರೆ ಧರಿಸುವವರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು (Navaratri white colour styling). ಬಿಳಿ ಬಣ್ಣವು ಇತರೇ ಬಣ್ಣಗಳಂತಲ್ಲ. ಹಾಗಾಗಿ ಫ್ಯಾಬ್ರಿಕ್‌ ಆಯ್ಕೆಯ ಆಧಾರದ ಮೇಲೆ ಔಟ್‌ಲುಕ್‌ ನಿರ್ಧರಿತವಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ಗಳು. ಈ ಕುರಿತಂತೆ ಸಿಂಪಲ್‌ ಟಿಪ್ಸ್‌ ನೀಡಿದ್ದಾರೆ. ಶ್ವೇತ ವರ್ಣದ ಸೀರೆಗಳನ್ನು ಉಡುವುದು ತೀರಾ ಕಡಿಮೆ. ಕೇವಲ ಸೆಲೆಬ್ರೆಟಿಗಳು ಇಲ್ಲವೇ ತಾರೆಯರು ಪ್ರಿಫರ್‌ ಮಾಡುತ್ತಾರೆ. ಇನ್ನು ಸಾಮಾನ್ಯ ಮಹಿಳೆಯರಾದಲ್ಲಿ ಕಾಟನ್‌ ಅಥವಾ ಲೆನಿನ್‌ ಬಿಳಿ ಬಣ್ಣದ ಅದರಲ್ಲೂ ಪ್ರಿಂಟ್ಸ್‌ ಅಥವಾ ಕೊಂಚ ಅಬ್‌ಸ್ಟ್ರಾಕ್ಟ್ ಇಲ್ಲವೇ ಜಿಯಾಮೆಟ್ರಿಕಲ್‌ ಡಿಸೈನ್‌ನ ಸೀರೆಯನ್ನು ಕಾಂಟ್ರಸ್ಟಾ ಶೇಡ್‌ ಅಥವಾ ಇತರೇ ಕಲರ್‌ ಮಿಕ್ಸ್‌ ಆಗಿರುವ ಸೀರೆಯನ್ನು ಆಯ್ಕೆ ಮಾಡುತ್ತಾರೆ.

ಇನ್ನು ಸಾಟಿನ್‌ನ ವೈಟ್‌ ಸ್ಟ್ರೈಪ್ಸ್‌ ಶಿಫಾನ್‌ನ ಡಬ್ಬಲ್‌ ವೈಟ್‌, ಕ್ರೇಪ್‌ನ ಫ್ಲೋರಲ್‌ ಪ್ರಿಂಟ್ಸ್ ವೈಟ್‌ ಸೀರೆಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಈ ಸೀರೆಯನ್ನು ಉಡುವವರು ಹೆಚ್ಚು ಜ್ಯುವೆಲರಿ ಧರಿಸುವ ಅಗತ್ಯವಿಲ್ಲ. ಇಂಡೋ-ವೆಸ್ಟರ್ನ್ ಲುಕ್‌ ನೀಡುವ ಜ್ಯುವೆಲರಿ ಧರಿಸಬಹುದು. ಸಿಂಪಲ್‌ ಸೀರೆಯಾದಲ್ಲಿ ಮೇಕಪ್‌ನಿಂದಿಡಿದು ಎಲ್ಲವನ್ನೂ ಸಿಂಪಲ್‌ ಆಗಿ ಮ್ಯಾಚ್‌ ಮಾಡಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ ದಿಯಾ. ಅವರ ಪ್ರಕಾರ, ಬಿಳಿಯಲ್ಲಿ ಹಾಫ್‌ ವೈಟ್‌, ಕ್ರೀಮಿಶ್‌ ವೈಟ್‌, ಐವರಿ ವೈಟ್‌ನ ಸೀರೆ ಶೇಡ್‌ಗಳು ಲಭ್ಯ. ಸೀರೆ ತಕ್ಕಂತೆ ಸ್ಟೈಲಿಂಗ್‌ ಮಾಡಿದಾಗ ಮಾತ್ರ ಎಲಿಗೆಂಟ್‌ ಲುಕ್‌ ನೀಡುತ್ತದೆ ಎನ್ನುತ್ತಾರೆ.

ಇದನ್ನೂ ಓದಿ : Navaratri Saffron Colour Outfit Tips: ನವರಾತ್ರಿ ಮೊದಲ ದಿನ ಕೇಸರಿ ಎಥ್ನಿಕ್‌ವೇರ್‌ ಧರಿಸುತ್ತಿದ್ದೀರಾ? ಇಲ್ಲಿದೆ ಸ್ಟೈಲಿಂಗ್‌ ಐಡಿಯಾ

ಬಿಳಿಯ ಬಣ್ಣದ ಎಥ್ನಿಕ್‌ವೇರ್ಸ್

ಮೊದಲೇ ಹೇಳಿದಂತೆ ಸೀರೆಗಿಂತ, ಬಿಳಿ ಬಣ್ಣದ ಉಡುಪುಗಳನ್ನು ಧರಿಸುವವರು ಹೆಚ್ಚು. ಅದರಲ್ಲೂ ಪ್ರತಿ ಮಹಿಳೆಯ ಬಳಿ ಒಂದಲ್ಲ ಒಂದು ಬಿಳಿ ಬಣ್ಣದ ಕುರ್ತಾ, ಚೂಡಿದಾರ್‌, ಸಲ್ವಾರ್‌ ಅಥವಾ ಸ್ಕರ್ಟ್ ಇದ್ದೇ ಇರುತ್ತದೆ. ಇನ್ನು ಹೊಸತನ್ನು ಕೊಳ್ಳದೇ ಹಳೆಯ ವೈಟ್‌ ಡ್ರೆಸ್‌ ಧರಿಸುವುದಾದಲ್ಲಿ ಹೊಸ ಜ್ಯುವೆಲರಿ ಧರಿಸುವುದರ ಮೂಲಕ ನ್ಯೂ ಲುಕ್‌ ನೀಡಬಹುದು. ಸಿಂಪಲ್‌ ಲುಕ್‌ಗಾಗಿ ಪರ್ಲ್ ಸೆಟ್‌ ಅಥವಾ ಕ್ರಿಸ್ಟಲ್‌ ಸೆಟ್‌ ಧರಿಸಬಹುದು. ಎದ್ದು ಕಾಣಬೇಕಿದ್ದಲ್ಲಿ ಬ್ಲಾಕ್ ಮೆಟಲ್‌ ಸೆಟ್‌ ಧರಿಸಬಹುದು. ಲೈಟ್‌ ಪ್ರಿಂಟ್ಸ್‌ ಇರುವ ವೈಟ್‌ ವನ್‌ ಪೀಸ್‌ ಅನಾರ್ಕಲಿ ಗೌನ್‌ ಕೂಡ ಇದೀಗ ಟ್ರೆಂಡ್‌ನಲ್ಲಿದೆ. ಲಾಂಗ್‌ ಸ್ಟ್ರೇಟ್‌ ಕಟ್‌ ಕುರ್ತಾಗಳು ಲಭ್ಯ ಎನ್ನುತ್ತಾರೆ ಸ್ಟೈಲಿಸ್ಟ್‌ ದಿವಿಜಾ.

Exit mobile version