ಅನಂತ್ ಅಂಬಾನಿ (Nita Ambani) ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಅವರು ಕೈಮಗ್ಗದ ಕಾಂಚೀಪುರಂ ಸೀರೆಯನ್ನು ಧರಿಸಿದ್ದರು. ಈ ಸೀರೆಯ ವಿಶೇಷತೆ ಏನೆಂದರೆ, ಇದು ದಕ್ಷಿಣ ಭಾರತದ ನೇಕಾರರು ಕೈಯಿಂದಲೇ ಸಿದ್ಧಪಡಿಸಿದ್ದಾಗಿದೆ. ಇದನ್ನು ಕೈ ಮಗ್ಗದ ಸೀರೆ ಎನ್ನಲಾಗುತ್ತದೆ. ಯಂತ್ರಗಳಿಂದ ಅಲ್ಲದೆ, ಕುಶಲಕರ್ಮಿಗಳು ತಮಗೆ ತಲೆತಲಾಂತರದಿಂದ ಬಂದಂಥ ಅದ್ಭುತ ಕಲೆಯನ್ನು ಮೂಡಿಸಿರುವಂಥ ಮೇರು ಕಲಾಕೃತಿ ಇದು. ಭಾರತೀಯ ಸಾಂಪ್ರದಾಯಿಕ ಕರಕುಶಲತೆ ಬಗ್ಗೆ ನೀತಾ ಅಂಬಾನಿ ಅವರಿಗೆ ಇರುವಂಥ ಗೌರವ, ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕೆ ಇದು ಇನ್ನೊಂದು ಸುಮಧುರ ಕ್ಷಣವಾಗಿತ್ತು.
ಭಾರತೀಯ ಕಲೆ ಮತ್ತು ಸಂಸ್ಕೃತಿಯ ಅಪ್ಪಟ ಪ್ರೇಮಿಯಾಗಿರುವ ನೀತಾ ಅಂಬಾನಿ ಅವರು ಅನಂತ್- ರಾಧಿಕಾ ವಿವಾಹ ಪೂರ್ವ ಕಾರ್ಯಕ್ರಮದ ಸಂದರ್ಭದಲ್ಲೂ ಸ್ಥಳೀಯ ಕಲಾವಿದರ ಅಮೋಘ ಕಲಾ ಕೌಶಲದ ಕಡೆಗೆ ಗಮನ ಸೆಳೆಯುವುದಕ್ಕೆ ಪ್ರಯತ್ನಿಸಿದರು.
ರಿಲಯನ್ಸ್ ನ ಸ್ವದೇಶ್ ಎಂಬ ಉಪಕ್ರಮವು ಸಮುದಾಯಗಳ ಕೈ ಬಲಪಡಿಸುತ್ತದೆ ಹಾಗೂ ಪಾರಂಪರಿಕ ಕರಕುಶಲತೆಯ ಸಂರಕ್ಷಣೆ ಮಾಡುತ್ತದೆ.
ಇದನ್ನೂ ಓದಿ: Nita Ambani: ಅನಂತ್ ಅಂಬಾನಿ ಮದುವೆ: ವಿಶ್ವಂಭರಿ ಸ್ತುತಿಗೆ ನೀತಾ ಅಂಬಾನಿ ಅದ್ಭುತ ನೃತ್ಯ!
ವಿಶ್ವಂಭರಿ ಸ್ತುತಿಗೆ ಅದ್ಭುತ ನೃತ್ಯ ಪ್ರದರ್ಶನ ನೀಡಿದ ನೀತಾ ಅಂಬಾನಿ
ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಮಗ ಅನಂತ್ ಹಾಗೂ ರಾಧಿಕಾ ಮರ್ಚಂಟ್ ವಿವಾಹ ಪೂರ್ವ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನಡೆದಿದೆ. ನೀತಾ ಅಂಬಾನಿ ಹಾಗೂ ಅವರ ಜತೆಗೆ ಇತರರು ಸೇರಿ ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಿದ್ದಾರೆ. ವಿಶ್ವಂಭರಿ ಸ್ತುತಿಗೆ ನೃತ್ಯ ಮಾಡಿದ್ದು, ವಿಶಾಲವಾದ ವೇದಿಕೆಯಲ್ಲಿ ಈ ಸಮಾರಂಭಕ್ಕೆ ಇನ್ನಷ್ಟು ಕಳೆ ಕಟ್ಟುವಂತೆ ಮಾಡಿದ್ದಾರೆ.
ಅಂದ ಹಾಗೆ, ಅನಂತ್ ಅಂಬಾನಿ ಅವರ ಭಾವೀ ಪತ್ನಿ ರಾಧಿಕಾ ಮರ್ಚಂಟ್ ಸಹ ಅತ್ಯುತ್ತಮ ನೃತ್ಯಪಟು. ಹಾಗೂ ಕುಟುಂಬದ ಕಾರ್ಯಕ್ರಮಗಳಲ್ಲಿ ಸ್ವತಃ ನೀತಾ ಅಂಬಾನಿ ಅವರು ಈ ಹಿಂದೆಯೂ ಸಹ ನೃತ್ಯ ಪ್ರದರ್ಶನವನ್ನು ನೀಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಭಾರತೀಯ ಸಂಪ್ರದಾಯದಂತೆ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಅತಿಥಿ ಸತ್ಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ದೇವತಾ ಆರಾಧನೆ ಹೀಗೆ ವಿವಿಧ ರೀತಿಯ ಆಚರಣೆಗಳನ್ನು ಮಾಡಲಾಗುತ್ತದೆ.