– ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೀಸನ್ ವಿಂಟರ್ ಆದರೂ ನೈಕಾ ಫೆಮೀನಾ ಬ್ಯೂಟಿ ಅವಾರ್ಡ್ ಸಮಾರಂಭದಲ್ಲಿ (Stars Fashion) ಪಾಲ್ಗೊಂಡಿದ್ದ ಎಲ್ಲಾ ಬಾಲಿವುಡ್ ತಾರೆಯರು ತಮ್ಮ ಗ್ಲಾಮರಸ್ ಉಡುಪುಗಳಲ್ಲಿ ಕಾಣಿಸಿಕೊಂಡು ನೆರೆದಿದ್ದವರ ಕಿಚ್ಚು ಹೆಚ್ಚಿಸಿದ್ದರು. ಇಲ್ಲಿ ಒಬ್ಬೊಬ್ಬರದು ಒಂದೊಂದು ಬಗೆಯ ಗ್ಲಾಮರಸ್ ಹಾಗೂ ಸ್ಟೈಲಿಶ್ ಟ್ರೆಂಡಿ ಡಿಸೈನರ್‌ವೇರ್‌ಗಳು ಫ್ಯಾಷನ್ ಪ್ರೇಮಿಗಳ ಗಮನ ಸೆಳೆದಿತ್ತು.
ನಟಿಯರ ಆಕರ್ಷಕ ಡಿಸೈನರ್‌ವೇರ್ಸ್
ಈ ವರ್ಷದ ಕೊನೆಯ ತಿಂಗಳಲ್ಲಿ ಮುಂಬಯಿಯಲ್ಲಿ ನಡೆದ ಈ ವರ್ಣರಂಜಿತ ಕಾರ್ಯಕ್ರಮಕ್ಕೆ ಬಾಲಿವುಡ್ ತಾರೆಯರ ದಂಡೇ ಬಂದಿತ್ತು. ಒಬ್ಬರಿಗಿಂತ ಒಬ್ಬರು ನೋಡಲು ಆಕರ್ಷಕವಾಗಿ ಕಾಣುತ್ತಿದ್ದರು. ನಟ-ನಟಿಯರ ಚಿತ್ರ-ವಿಚಿತ್ರ ವಿನ್ಯಾಸದ ಉಡುಪುಗಳು ಎಲ್ಲರ ಕಣ್ಣು ಕುಕ್ಕುವಂತಿದ್ದವು. ಆಯಾ ಡಿಸೈನರ್‌ಗಳ ಕೈಚಳಕಕ್ಕೆ ಈ ಡಿಸೈನರ್‌ವೇರ್‌ಗಳು ಸಾಕ್ಷಿ ಎಂಬಂತಿದ್ದವು. ಇದು ನೈಕಾ ಫೆಮೀನಾ ಬ್ಯೂಟಿ ಅವಾರ್ಡ್‌ನ ಝಲಕ್‌ನ ಚಿತ್ರಣವಾಗಿತ್ತು.
ನಟಿಯರಾದ ಜಾಹ್ನವಿ ಕಪೂರ್, ಕಿಯಾರಾ ಆಡ್ವಾನಿ, ಅನನ್ಯಾ, ಊರ್ವಶಿ ರೌತೆಲಾ, ಮಲೈಕಾ ಅರೋರಾ ಖಾನ್, ಕೃತಿ ಸನೂನ್, ಆರ್ಯನ್, ಕತ್ರೀನಾ ಕೈಫ್, ನಟ ಕಾರ್ತಿಕ್, ಆಯುಷ್ಮಾನ್ ಖುರಾನಾ, ವಿಜಯ್ ವರ್ಮಾ, ತೇಜಸ್ವಿನಿ ಶರ್ಮಾ, ಶಮಿತಾ ಶೆಟ್ಟಿ ಸೇರಿದಂತೆ ಬಾಲಿವುಡ್‌ನ ನಾನಾ ನಟಿಯರು ಭಾಗವಹಿಸಿದ್ದರು.
ಇದನ್ನೂ ಓದಿ | Weekend Style | ಗಾಯತ್ರಿ ಸಂದೀಪ್ ಸೀಸನ್ ಫ್ಯಾಷನ್ ಸೂತ್ರ ಏನು?
ನಟಿಯರ ಗ್ಲಾಮರಸ್ ಲುಕ್
ಎಂದಿನಂತೆ ಮಲೈಕಾ ಅರೋರಾ ಖಾನ್ ತಮ್ಮ ಗ್ಲಾಮರಸ್ ಸಿಂಗಲ್ ಶೋಲ್ಡರ್‌ನ ಗೌನ್‌ನಲ್ಲಿ ಹಾಟ್ ಆಗಿ ಕಾಣಿಸುತ್ತಿದ್ದರು. ಕೃತಿ ಸನೋನ್ ಕೂಡ ವೈಟ್ ವಿಭಿನ್ನ ವಿನ್ಯಾಸದ ಕಟೌಟ್ ಗೌನ್‌ನಲ್ಲಿ ಕಾಣಿಸಿಕೊಂಡರು. ಅನನ್ಯಾ ಪಾಂಡೆ ಲ್ಯಾವೆಂಡರ್ ಶೇಡ್‌ನ ಶೋಲ್ಡರ್‌ಲೆಸ್ ಮಿನಿ ನಾನ್ ಫ್ಲೆಕ್ಸಿಬಲ್ ಶೈನಿಂಗ್ ಫ್ರಾಕ್‌ನಲ್ಲಿ ಅತ್ಯಾಕರ್ಷಕವಾಗಿ ಕಂಡರು. ಊರ್ವಶಿ ಶ್ವೇತ ವರ್ಣದ ಸಿಂಗಲ್ ಶೋಲ್ಡರ್ ಫ್ರಿಂಝ್ ಫ್ರಾಕ್‌ನಲ್ಲಿದ್ದರು. ಜಾಹ್ನವಿ ಕಪೂರ್ ಲೆಮೆನ್ ಗ್ರೀನ್ ಶೇಡ್‌ನ ಕಂಪ್ಲೀಟ್ ಡಿಫರೆಂಟ್ ಲುಕ್ ನೀಡುವ ಬಿಕಿನಿ ಶೈಲಿಯ ಕಟೌಟ್ ಡ್ರೆಸ್‌ನಲ್ಲಿದ್ದರು. ಕತ್ರೀನಾ ಕೈಫ್ ಮಾತ್ರ ಪಾರ್ಟಿ ಲುಕ್ ನೀಡುವ ಶೈನಿಂಗ್ ಸ್ಲಿಪ್ ಡ್ರೆಸ್‌ನಲ್ಲಿ ಮಿಂಚುತ್ತಿದ್ದರು.
ನಟರ ಸ್ಟೈಲ್ ಸ್ಟೇಟ್‌ಮೆಂಟ್
ನಟ ವಿಕ್ಕಿ ಕೌಶಲ್ ಹಾಫ್ ಶೈನಿಂಗ್ ಬ್ಲ್ಯಾಕ್ ಸೂಟ್‌ನಲ್ಲಿ ಕಾಣಿಸಿಕೊಂಡರು. ಕಾರ್ತಿಕ್ ಆರ್ಯನ್ ಟೀ ಶರ್ಟ್ ಜತೆ ಬ್ಲ್ಯೂ ಪ್ಯಾಂಟ್ ಸೂಟ್ ಧರಿಸಿದ್ದರು. ಡೆನಿಮ್ ಜಾಕೆಟ್ ದೊಗಲೆ ಪ್ಯಾಂಟ್‌ನಲ್ಲಿ ವಿಜಯ್ ವರ್ಮಾ ಫಂಕಿ ಲುಕ್‌ನಲ್ಲಿದ್ದರು. ಟ್ರಾನ್ಸ್‌ಪರೆಂಟ್ ವೈಟ್ ಜಾಕೆಟ್‌ಗೆ ಸೂಟ್ ಮಿಕ್ಸ್ ಮ್ಯಾಚ್ ಮಾಡಿದ್ದ ಆಯುಷ್ಮಾನ್ ಖುರಾನಾ ಸಖತ್ ಫ್ಯಾಷೆನಬಲ್ ಆಗಿ ಕಾಣಿಸಿಕೊಂಡರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ | Denim Fashion | ಚಳಿಗಾಲಕ್ಕೆ ಟ್ರೆಂಡಿಯಾದ ಆಕರ್ಷಕ ಡೆನಿಮ್ ಫ್ಯಾಷನ್