-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ವೆಡ್ಡಿಂಗ್ ಸೀಸನ್‌ನಲ್ಲಿ ಆಫ್ ಶೋಲ್ಡರ್ ಬ್ಲೌಸ್‌ನ ಫ್ಲೋರಲ್ ಲೆಹೆಂಗಾಗಳು ಫ್ಯಾಷನ್ ಲೋಕಕ್ಕೆ ಲಗ್ಗೆ ಇಟ್ಟಿವೆ. ಧರಿಸಿದಾಗ ನೋಡಲು ಮನ ಮೋಹಕವಾಗಿ ಕಾಣುವ ಈ ಲೆಹೆಂಗಾಗಳು ಯುವತಿಯರ ಗ್ಲಾಮರಸ್ ಲುಕ್‌ಗೆ ಸಾಥ್ ನೀಡುತ್ತಿವೆ.
ಏನಿದು? ಆಫ್ ಶೋಲ್ಡರ್ ಬ್ಲೌಸ್ ಲೆಹೆಂಗಾ
ಇಂದು ಲೆಹೆಂಗಾಗಳಲ್ಲಿ ನಾನಾ ಬಗೆಯ ಲೆಕ್ಕವಿಲ್ಲದಷ್ಟು ವಿನ್ಯಾಸದವು ಟ್ರೆಂಡ್‌ನಲ್ಲಿವೆ. ಅವುಗಳಲ್ಲಿ ಈ ಸೀಸನ್‌ಗೆ ಮ್ಯಾಚ್ ಆಗುವ ಒಂದಿಷ್ಟು ಡಿಸೈನ್‌ನವು ಪಾಪ್ಯುಲರ್ ಆಗಿವೆ. ಅವುಗಳಲ್ಲಿ ಇದೀಗ ಈ ಮೇ ತಿಂಗಳಲ್ಲಿ ಆಫ್ ಶೋಲ್ಡರ್ ಬ್ಲೌಸ್ ಇರುವಂತಹ ಫ್ಲೋರಲ್ ಲೆಹೆಂಗಾಗಳು ಬಂದಿವೆ. ಎಂಬ್ರಾಯ್ಡರಿ, ಥ್ರೆಡ್ ವರ್ಕ್ ಹಾಗೂ ಹೆವ್ವಿ ಡಿಸೈನ್‌ನ ಲೆಹೆಂಗಾಗಳು ಸದ್ಯಕ್ಕೆ ಸೈಡಿಗೆ ಸರಿದಿದ್ದು, ಸೀಸನ್ ಫ್ಲೋರಲ್ ವಿನ್ಯಾಸದವು ಬೇಡಿಕೆ ಹೆಚ್ಚಿಸಿಕೊಂಡಿವೆ. ಅದರಲ್ಲೂ ಪ್ರಿಂಟೆಡ್ ಲೆಹೆಂಗಾಗಳು ಯುವತಿಯರನ್ನು ಸೆಳೆದಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರೈನಾ. ಅವರ ಪ್ರಕಾರ, ಈ ಪ್ರಿಂಟೆಡ್ ಲೆಹೆಂಗಾಗಳು ಕೇವಲ ವೆಡ್ಡಿಂಗ್‌ಫ್ಯಾಷನ್‌ಗೆ ಮಾತ್ರವಲ್ಲ, ಇತರೇ ಸಮಾರಂಭಗಳಿಗೂ ಧರಿಸಬಹುದು ಎಂದು ಸಲಹೆ ನೀಡುತ್ತಾರೆ.
ಲೆಹೆಂಗಾಗೂ ಗ್ಲಾಮರಸ್ ಟಚ್
ಸ್ಲೀವ್ ಇಲ್ಲದಂತಿರುವ ಆಫ್ ಶೋಲ್ಡರ್ ಲೆಹೆಂಗಾ ಬ್ಲೌಸ್‌ಗಳು ಈ ಸೀಸನ್‌ಗೆ ಹೊಂದುವುದು ಮಾತ್ರವಲ್ಲ, ಗ್ಲಾಮರಸ್ ಲುಕ್ ನೀಡುತ್ತವೆ. ದೇಹವನ್ನು ಕೊಂಚ ಎಕ್ಸ್‌ಪೋಸ್ ಮಾಡುವ ಈ ಬ್ಲೌಸ್‌ಗಳು ಜೆನ್ ಜಿ ಹುಡುಗಿಯರನ್ನು ಸೆಳೆದಿವೆ. ಆದರೆ, ಈ ಬ್ಲೌಸ್ ಧರಿಸುವವರು ಆದಷ್ಟೂ ಫಿಟ್ಟಿಂಗ್ ಇರುವಂತದ್ದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುತ್ತಾರೆ ಫ್ಯಾಷನಿಸ್ಟಾ ರಿಚಾ.
ಫ್ಲೋರಲ್ ಲಹೆಂಗಾ
ಇದುವರೆಗೂ ಹೆವ್ವಿ ಡಿಸೈನ್‌ನದ್ದನ್ನು ಧರಿಸಿ ಬೇಸರವಾದವರು ಈ ಫ್ಲೋರಲ್ ಪ್ರಿಂಟ್ಸ್‌ನ ಲೆಹೆಂಗಾ ಇಷ್ಟಪಡತೊಡಗಿದ್ದಾರೆ. ಕ್ಯಾಶುವಲ್ ಔಟ್‌ಫಿಟ್ ಕೆಟಗರಿಗೂ ಸೇರುವ ಇವು ಮಿಕ್ಸ್ ಮ್ಯಾಚ್ ಕೂಡ ಮಾಡಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಇದನ್ನೂ ಓದಿ: Star Travel Fashion: ಸ್ವಿಟ್ಜರ್‌ಲ್ಯಾಂಡ್ ಸ್ಟ್ರೀಟ್ ಸ್ಟೈಲ್ ಟ್ರಾವೆಲ್ ಫ್ಯಾಷನ್‌ಗೆ ಸೈ ಎಂದ ನಟಿ ಅದಿತಿ ಪ್ರಭುದೇವ
ಆಫ್ ಶೋಲ್ಡರ್ ಬ್ಲೌಸ್ ಫ್ಲೋರಲ್ ಲೆಹೆಂಗಾ ಧರಿಸುವವರಿಗೆ 3 ಟಿಪ್ಸ್
- ಲೈಟ್ವೈಟ್ನದ್ದನ್ನು ಆಯ್ಕೆ ಮಾಡಿ.
- ಬ್ಲೌಸ್ಗೆ ಹೆವ್ವಿ ವಿನ್ಯಾಸ ಬೇಡ. ಜಾರಬಹುದು.
- ಹೆಚ್ಚು ಆಕ್ಸೆಸರೀಸ್ ಅಗತ್ಯವಿಲ್ಲ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)