ಶೀಲಾ ಸಿ. ಶೆಟ್ಟಿ, ಬೆಂಗಳೂರು
“ಬ್ಯೂಟಿ ಪೇಜೆಂಟ್‌ಗಳು ಭಾಗವಹಿಸಿದವರ ಸೌಂದರ್ಯವನ್ನು ಎತ್ತಿ ಹಿಡಿಯುವುದು ಮಾತ್ರವಲ್ಲ, ಸ್ಪರ್ಧಾಳುಗಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಸೂಕ್ತ ವೇದಿಕೆ ಕಲ್ಪಿಸುತ್ತದೆ” ಎಂದು ನಟಿ ಪ್ರಿಯಾಂಕಾ ಉಪೇಂದ್ರ ಅಭಿಪ್ರಾಯಪಟ್ಟರು.
“ಮಹಿಳೆಯರು ಇತ್ತೀಚೆಗೆ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವುದರ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳುತ್ತಿರುವುದು ನಿಜಕ್ಕೂ ಸಂತಸದ ವಿಚಾರ” ಎಂದು ಅವರು ತಿಳಿಸಿದರು.
ಅಂದ ಹಾಗೆ, ನಟಿ ಪ್ರಿಯಾಂಕಾ ಉಪೇಂದ್ರ ಅವರು ಉದ್ಯಾನನಗರಿಯಲ್ಲಿ ಪಂಚತಾರಾ ಹೋಟೆಲ್‌ವೊಂದರಲ್ಲಿ ಸುಧಾ ವೆಂಚರ್ಸ್ ಹಮ್ಮಿಕೊಂಡಿದ್ದ ಮಿಸ್ಟರ್, ಮಿಸ್ ಹಾಗೂ ಮಿಸೆಸ್ ಸೌತ್ ಇಂಡಿಯಾ ಇಂಟರ್‌ನ್ಯಾಷನ್ 2022 ಬ್ಯೂಟಿ ಪೇಜೆಂಟ್‌ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಿಜೇತರಿಗೆ ಕಿರೀಟ ಮುಡಿಗೇರಿಸಿ ಮಾತನಾಡಿದರು.
ಒಂದೇ ವೇದಿಕೆಯಲ್ಲಿ ಮೂರು ಸ್ಪರ್ಧೆ
ಮಿಸ್ಟರ್, ಮಿಸ್ ಹಾಗೂ ಮಿಸೆಸ್ ಈ ಮೂರು ವಿಭಾಗಗಳಿಗೂ ಒಂದೇ ವೇದಿಕೆಯಲ್ಲಿ ಸ್ಪರ್ಧೆ ನಡೆಸಲಾಯಿತು. ಟ್ರೆಡಿಷನಲ್, ಗೌನ್ ರೌಂಡ್ ಹಾಗೂ ಯುವಕರ ಫಾರ್ಮಲ್ಸ್ ರೌಂಡ್‌ನಲ್ಲಿ ಮಿನುಗುವ ಕಲರ್‌ಫುಲ್ ದೀಪಗಳ ನಡುವೆ ಭಾವಿ ಮಾಡೆಲ್‌ಗಳು ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಿದರು. ಒಂದರ ನಂತರ ಮತ್ತೊಂದು ರೌಂಡ್ ಹೀಗೆ ಸರದಿಯಂತೆ ರ‍್ಯಾಂಪ್ ವಾಕ್ ಇಲ್ಲಿ ನಡೆದಿತ್ತು.
ಸೋನಿ ಹಾಗೂ ಲಾವಣ್ಯ ಶೆಟ್ಟಿ ವಿಜೇತರು
ಮಿಸ್ ಸೌತ್ ಇಂಡಿಯಾ ಇಂಟರ್‌ನ್ಯಾಷನಲ್ ಕಿರೀಟವನ್ನು ಸೋನಿ ತಮ್ಮದಾಗಿಸಿಕೊಂಡರೆ, ಮಿಸೆಸ್ ಗೆಲುವಿನ ಪಟ್ಟವನ್ನು ಲಾವಣ್ಯ ಶೆಟ್ಟಿ ತಮ್ಮದಾಗಿಸಿಕೊಂಡರು.
ಸ್ಪರ್ಧಾಳುಗಳ ಭವಿಷ್ಯ ರೂಪಿಸುವ ಸ್ಪರ್ಧೆ
“ಮಿಸ್, ಮಿಸ್ಟರ್ ಹಾಗೂ ಮಿಸೆಸ್ ಗಾಗಿ ನಡೆದ ಈ ಸೌಂದರ್ಯ ಸ್ಪರ್ಧೆಗೆ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರ , ಕೇರಳ ಸೇರಿದಂತೆ 5 ರಾಜ್ಯಗಳಿಂದ ಆಗಮಿಸಿದ ಸ್ಪರ್ಧಾಳುಗಳು ಭಾಗವಹಿಸಿದ್ದರು. ವೆಸ್ಟರ್ನ್ ಹಾಗೂ ಎಥ್ನಿಕ್ ಸೇರಿದಂತೆ ಮೂರು ಸುತ್ತಿನಲ್ಲೂ ಎಲ್ಲಾ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು.
ಮೇಕಪ್ ಆರ್ಟಿಸ್ಟ್‌ಗಳಿಗೂ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಫ್ಯಾಷನ್ ಕ್ಷೇತ್ರದಲ್ಲಿ ಮುಂದುವರಿಯುವವರಿಗೆ ನಾವು ಒಂದು ಉತ್ತಮ ವೇದಿಕೆ ಕಲ್ಪಿಸಿ ಕೊಟ್ಟಿದ್ದೇವೆ” ಎಂದು ಪೇಜೆಂಟ್‌ನ ಮುಖ್ಯಸ್ಥೆ ಸುಧಾ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಟಿ ಪ್ರಿಯಾಂಕ ಉಪೇಂದ್ರ ಶೋ ಕೊನೆಯಲ್ಲಿ ವಿಜೇತರಿಗೆ ಕಿರೀಟ ತೊಡಿಸಿ, ಅವರೊಂದಿಗೆ ರ‍್ಯಾಂಪ್ ವಾಕ್ ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಮಾಸ್ಟರ್ ಆನಂದ್ ಹಾಗೂ ನಿರಂಜನ್ ದೇಶಪಾಂಡೆ ಮಾಡಿದರು.
ಲೇಖಕಿ : ಫ್ಯಾಷನ್ ಪತ್ರಕರ್ತೆ
ಇದನ್ನೂ ಓದಿ| Ramp News: ರ‍್ಯಾಂಪ್‌ನಲ್ಲಿ ಮಿನುಗಿದ ಸೌತ್ ಇಂಡಿಯಾ ಕ್ರೌನ್ ವಿಜೇತರು