-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವೆಲ್ವೆಟ್ ಸೀರೆ ಬ್ಲೌಸ್ ಫ್ಯಾಷನ್ ಇದೀಗ ಮರಳಿದೆ. ಎರಡು ದಶಕಗಳ ಹಿಂದೆ ಇದ್ದ ಈ ಸೀರೆ ಬ್ಲೌಸ್ ಫ್ಯಾಷನ್, ಇದೀಗ ಮತ್ತೊಮ್ಮೆ ಮರಳಿದ್ದು, ರೆಟ್ರೋ ಲುಕ್ ಮಾತ್ರವಲ್ಲ, ಕ್ಯಾಶುವಲ್ ಸೀರೆಗಳೊಂದಿಗೆ ಧರಿಸಬಹುದಾದ ಕಾನ್ಸೆಪ್ಟ್‌ನಲ್ಲಿ ಬಿಡುಗಡೆಗೊಂಡಿವೆ. ಹೌದು. ಸೀರೆಗಳ ಮ್ಯಾಚಿಂಗ್‌ಗಾಗಿ ರವಿಕೆ ಹೊಲೆಸುವಷ್ಟು ಸಮಯವಿಲ್ಲದವರ ಬಳಿಯ ವಾರ್ಡ್ರೋಬ್‌ಗಳಲ್ಲಿ ಈ ರೆಡಿಮೇಡ್ ವೆಲ್ವೆಟ್ ಬ್ಲೌಸ್‌ಗಳು ಎಂಟ್ರಿ ನೀಡಿವೆ.
ಹಳೆಯ ಬ್ಲೌಸ್ ಫ್ಯಾಷನ್‌ಗೆ ನಯಾ ಲುಕ್
ಎರಡು ದಶಕಗಳ ಹಿಂದೆ ನಾನಾ ಬಣ್ಣದ ವೆಲ್ವೆಟ್ ಬ್ಲೌಸ್‌ಗಳು ಟ್ರೆಂಡಿಯಾಗಿದ್ದವು. ಸಾದಾ ಸೀರೆಗಳಿಗೆ ಹಾಗೂ ಉದ್ಯೋಗಸ್ಥ ಮಹಿಳೆಯರ ಲೆಕ್ಕವಿಲ್ಲದಷ್ಟು ಸೀರೆಗಳಿಗೆ ಇವು ಸಾಥ್ ನೀಡಿದ್ದವು. ಜನರೇಷನ್ ಬದಲಾದಂತೆ ಇವುಗಳು ಫ್ಯಾಷನ್‌ನಿಂದ ಮರೆಯಾದವು. ಅಲ್ಲೊಂದು ಇಲ್ಲೊಂದು ಸೀರೆಯೊಂದಿಗೆ ಮಾತ್ರ ಕಂಡು ಬರುತ್ತಿದ್ದವು. ಫ್ಯಾಷನ್‌ನಿಂದಲೇ ಹೊರಬಿದ್ದಿದ್ದವು ಎಂದರೂ ಅತಿಶಯೋಕ್ತಿಯಾಗದು. ಆದರೆ, ಈ ವರ್ಷದ ಆರಂಭದಲ್ಲಿ ಮತ್ತೊಮ್ಮೆ ಎಂಟ್ರಿ ನೀಡಿದ ಇವು, ಇದೀಗ ಒಂದಷ್ಟು ಬದಲಾವಣೆಯೊಂದಿಗೆ ಬಂದಿವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಇದನ್ನೂ ಓದಿ: Stars Festival fashion: ಗಣೇಶ ಹಬ್ಬದ ಸೆಲೆಬ್ರೇಷನ್‌ಗೆ ಟ್ರೆಡಿಷನಲ್ ಲುಕ್‌ನಲ್ಲಿ ಮಿನುಗಿದ ತಾರೆಯರು
ಸ್ಟ್ರೆಚಬಲ್ ವೆಲ್ವೆಟ್ ಬ್ಲೌಸ್‌ಗಳು
ಸ್ಟ್ರೆಚಬಲ್ ವೆಲ್ವೆಟ್ ಬ್ಲೌಸ್‌ಗಳು ಅಂದು ಕೂಡ ಬೇಡಿಕೆ ಪಡೆದುಕೊಂಡಿದ್ದವು. ಇದೀಗ ಇದೇ ಫ್ಯಾಬ್ರಿಕ್‌ನವು ಅದರಲ್ಲೂ ಸ್ಟ್ರೆಚಬಲ್ ಬ್ಲೌಸ್‌ಗಳು ಮತ್ತೊಮ್ಮೆ ಬೇಡಿಕೆ ಪಡೆದುಕೊಂಡಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಮಹಿಳೆಯರ ಬಾಡಿ ಮಾಸ್ ಇಂಡೆಕ್ಸ್ ಬದಲಾದರೂ ಸ್ಟ್ರೀಯರು ಒಂದಿಚು ಪ್ಲಂಪಿಯಾದರೂ ಕೂಡ ಈ ಶೈಲಿಯ ಬ್ಲೌಸ್‌ಗಳನ್ನು ನಿರಾತಂಕವಾಗಿ ಧರಿಸಬಹುದು. ಇವುಗಳ ಸಾಫ್ಟ್ ಫ್ಯಾಬ್ರಿಕ್ ಟೈಟ್ ಎನಿಸದೇ ಆರಾಮ ಎಂದೆನಿಸುತ್ತದೆ. ಹಾಗಾಗಿ ಇವುಗಳಿಗೆ ಬೇಡಿಕೆ ಸದಾ ಇರುತ್ತದೆ. ಅದರಲ್ಲೂ ಉದ್ಯೋಗಸ್ಥ ಮಹಿಳೆಯರು ಅತಿ ಹೆಚ್ಚು ಸೀರೆಗಳಿಗೆ ಇವನ್ನು ಮಿಕ್ಸ್ ಮ್ಯಾಚ್ ಮಾಡಿ ಧರಿಸುತ್ತಾರೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಕಿ.
ಉದ್ದನೆಯ ಸ್ಲೀವ್ ಇರುವ ವೆಲ್ವೆಟ್ ಬ್ಲೌಸ್
ಈ ಬಾರಿ ಬಿಡುಗಡೆಯಾಗಿರುವ ಬ್ಲೌಸ್‌ಗಳಲ್ಲಿ ಅತಿ ಹೆಚ್ಚು ಉದ್ದನೆಯ ಸ್ಲೀವ್ ಇರುವ ವೆಲ್ವೆಟ್ ಬ್ಲೌಸ್‌ಗಳಿಗೆ ಹೆಚ್ಚು ಡಿಮ್ಯಾಂಡ್ ಎನ್ನುತ್ತಾರೆ. ಇನ್ನು ಡಿಸೈನ್ ಇರುವಂತವು ಸ್ಲಿವ್‌ಲೆಸ್‌ನಲ್ಲಿ ಬಂದಿವೆ ಎನ್ನುತ್ತಾರೆ ಮಾರಾಟಗಾರರು.
- ಸ್ಟ್ರೆಚೆಬಲ್ ವೆಲ್ವೆಟ್ ಬ್ಲೌಸ್ ಆಯ್ಕೆ ಸೂಕ್ತ.
- ಡಿಸೈನರ್ ವೆಲ್ವೆಟ್ ಬ್ಲೌಸ್ ಸ್ಟ್ರೆಚ್ ಆಗುವುದಿಲ್ಲ.
- ಸರಿಯಾಗಿ ನಿರ್ವಹಣೆ ಮಾಡಿದಲ್ಲಿ ಬಹುಕಾಲ ಬಾಳಿಕೆ ಬರುತ್ತವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)