Site icon Vistara News

Republic day Dresscode : ಗಣರಾಜ್ಯೋತ್ಸವದ ಡ್ರೆಸ್‌ಕೋಡ್‌ಗೆ ಸಾಥ್ ನೀಡುವ 5 ಪ್ರಮುಖಾಂಶಗಳಿವು

Republic day Dresscode

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಗಣರಾಜ್ಯೋತ್ಸವದ ಸಂಭ್ರಮಾಚರಣೆಗೆ ನೀವು ರೆಡಿಯಿದ್ದೀರಾ? ಹಾಗಾದಲ್ಲಿ ನೀವು ನಿಮ್ಮ ರಾಷ್ಟ್ರಪ್ರೇಮವನ್ನು ಧರಿಸುವ ಔಟ್‌ಫಿಟ್‌ನಿಂದಲೂ (Republic day Dresscode) ಬಿಂಬಿಸಬಹುದು. ಇದಕ್ಕಾಗಿ ಧರಿಸುವ ಡ್ರೆಸ್‌ಕೋಡ್‌ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್‌ನಲ್ಲಿ ಒಂದಿಷ್ಟು ಬದಲಾವಣೆ ತರಬೇಕಷ್ಟೇ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಇನ್ನು ದೇಶಪ್ರೇಮ ಬಿಂಬಿಸುವ ನೆಪದಲ್ಲಿ ಯಾವುದೇ ಕಾರಣಕ್ಕೂ ರಾಷ್ಟ್ರ ಪ್ರೇಮಕ್ಕೆ ಹಾಗೂ ಸಂವಿಧಾನದ ಅಂಶಗಳಿಗೆ ಧಕ್ಕೆಯುಂಟಾಗದಂತೆ ಡಿಸೈನ್‌ವೇರ್‌ಗಳನ್ನು ಧರಿಸುವುದು ಸೂಕ್ತ. ಅದರೊಂದಿಗೆ ನಿಮ್ಮ ಸ್ಟೈಲ್ ಸ್ಟೇಟ್ಮೆಂಟ್ ಹಾಗೂ ಡಿಸೆಂಟ್ ಲುಕ್ ಎಲ್ಲವೂ ನೋಡಲು ಹಿತ-ಮಿತವಾಗಿರಬೇಕು. ಇದಕ್ಕಾಗಿ ಈ ಕೆಳಗಿನ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡಲ್ಲಿ, ಖಂಡಿತ ನಿಮ್ಮ ಡ್ರೆಸ್ಕೋಡ್ ಅತ್ಯುತ್ತಮವಾದ ಔಟ್‌ಲುಕ್‌ ನೀಡಬಲ್ಲದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಖಾದಿ-ಕಾಟನ್ ಫ್ಯಾಬ್ರಿಕ್ನದ್ದನ್ನು ಆಯ್ಕೆ ಮಾಡಿ

ಈಗಾಗಲೇ ಖಾದಿ-ಕಾಟನ್‌ನಲ್ಲಿ (khadi cotton fabric) ಸಿದ್ಧಪಡಿಸಿದ ನಾನಾ ಬಗೆಯ ಸಿಂಪಲ್ ಔಟ್‌ಫಿಟ್‌ಗಳು ಫ್ಯಾಷನ್ ಲೋಕಕ್ಕೆ ಎಂಟ್ರಿ ನೀಡಿವೆ. ಸೀರೆಗಳು ಲೆಕ್ಕವಿಲ್ಲದಷ್ಟು ಬಂದಿವೆ. ಅವುಗಳಲ್ಲಿ ಕುರ್ತಾ, ಚೂಡಿದಾರ್ ಸೆಟ್, ಲಾಂಗ್ ಸಲ್ವಾರ್ ಕಮೀಜ್‌ಗಳನ್ನು ಸೆಲೆಕ್ಟ್ ಮಾಡಿ. ಪಾಸ್ಟೆಲ್ ವರ್ಣದವು ಹಾಗೂ ಕ್ರೀಮ್, ಗೋಲ್ಡನ್ ಶೇಡ್‌ನವು ಈ ಸಂದರ್ಭಕ್ಕೆ ಸೂಟ್ ಆಗುತ್ತವೆ. ಎದ್ದು ಕಾಣುವಂತಹ ಕಾಂಬಿನೇಷನ್ ದುಪಟ್ಟಾ ಬೇಡ.

ಇದನ್ನೂ ಓದಿ:Weekend Style : ಆತ್ಮವಿಶ್ವಾಸ ಹೆಚ್ಚಿಸುವ ಫ್ಯಾಷನ್‌ ನನ್ನದು ಎನ್ನುವ ಪೂಜಾ ಸಾಲಿಮಠ್‌

ದೇಹ ಪ್ರದರ್ಶಿಸುವ ಔಟ್‌ಫಿಟ್‌ ಬೇಡ

ಯಾವುದೇ ಕಾರಣಕ್ಕೂ ದೇಹವನ್ನು ಪ್ರದರ್ಶಿಸುವ ಔಟ್‌ಫಿಟ್‌ಗಳನ್ನು ಧರಿಸುವುದು ಬೇಡ. ಉದಾಹರಣೆಗೆ ಆಫ್ ಶೋಲ್ಡರ್, ಕೋಲ್ಡ್ ಶೋಲ್ಡರ್, ಮಿನಿ ಸ್ಕರ್ಟ್, ಟೋರ್ನ್ ಜೀನ್ಸ್ ಇಂತಹ ಉಡುಪುಗಳನ್ನು ಧರಿಸಲೇಬೇಡಿ. ಇನ್ನು ಅವರವರ ವಯಸ್ಸಿಗೆ ತಕ್ಕಂತೆ ಔಟ್ಫಿಟ್ ಸೆಲೆಕ್ಷನ್ ಮಾಡುವುದು ಉತ್ತಮ. ಸಂದರ್ಭಕ್ಕೆ ತಕ್ಕಂತೆ ಸೂಟ್ ಆಗುವಂತಹ ಸಿಂಪಲ್ ಔಟ್ಫಿಟ್ ಹಾಗೂ ವರ್ಣಗಳ ಆಯ್ಕೆ ಮಾಡುವುದು ಅಗತ್ಯ.

ಆಕ್ಸೆಸರೀಸ್ ಸಿಂಪಲ್ ಆಗಿರಲಿ

ಗಣರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಧರಿಸುವ ಸಿಂಪಲ್ ಔಟ್‌ಫಿಟ್‌ ಜತೆಗೆ ಧರಿಸುವ ಆಕ್ಸೆಸರೀಸ್‌ಗಳು ಸಿಂಪಲ್ ಆಗಿರಬೇಕು. ಗ್ರ್ಯಾಂಡ್ ಲುಕ್ ನೀಡುವ ಅಥವಾ ಭಾರಿ ಎನಿಸುವ ಬಂಗಾರದ ಆಭರಣಗಳನ್ನು ಅವಾಯ್ಡ್ ಮಾಡುವುದು ಉತ್ತಮ. ಬ್ಲಾಕ್ ಮೆಟಲ್‌ನ ಸೆಟ್ ಇಲ್ಲವೇ ಸಿಂಪಲ್ ಪರ್ಲ್ ಸೆಟ್ ಅಥವಾ ಚೈನ್ ಸೆಟ್‌ಗಳನ್ನು ಧರಿಸಬಹುದು. ಇವು ನೋಡಲು ಕೂಡ ಎಲಿಗೆಂಟ್ ಲುಕ್ ನೀಡುತ್ತವೆ.

ಧಕ್ಕೆ ತರುವಂತಹ ಸ್ಟೈಲ್ ಸ್ಟೇಟ್ಮೆಂಟ್ ಬೇಡ

ಇನ್ನು ಕೆಲವರಿಗೆ ಯಾವ ಮಟ್ಟಿಗೆ ರಾಷ್ಟ್ರಾಭಿಮಾನದ ಅತಿರೇಕ ಹೆಚ್ಚಾಗಿ ಇರುತ್ತದೆ ಎಂದರೆ, ಮುಖದ ಮೇಲೆ ಮಾತ್ರವಲ್ಲ, ದೇಹದ ಇನ್ನಿತರೇ ಭಾಗದಲ್ಲೂ ಧ್ವಜ ಹಾಗೂ ಅಶೋಕ ಚಕ್ರದ ಸ್ಟಿಕ್ಕರ್ ಅಂಟಿಸಿಕೊಳ್ಳುವುದು ಕಂಡು ಬರುತ್ತದೆ. ಇದು ಅತಿರೇಕ ಎಂದೆನಿಸಬಹುದು.

ಯಾಮಿ ಗೌತಮ್ , ಮಂದಿರಾ ಬೇಡಿ,

ಫಂಕಿ ಲುಕ್‌ನಿಂದ ದೂರವಿರಿ

ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಾಗ ಆದಷ್ಟೂ ಫಂಕಿ ಲುಕ್‌ನಿಂದ ದೂರವಿರಿ. ಡಿಸೆಂಟ್ ಹಾಗೂ ಎಲಿಗೆಂಟ್ ಲುಕ್ ನೀಡುವ ಹೇರ್‌ಸ್ಟೇಲ್‌ ಮೊರೆ ಹೋಗಿ. ಆದಷ್ಟೂ ಚಿತ್ರ-ವಿಚಿತ್ರ ಸ್ಟೈಲ್ ಸ್ಟೇಟ್ಮೆಂಟ್ ಹಾಗೂ ಫ್ಯಾಷನ್ ಮಾಡಬೇಡಿ. ನೋಡುಗರಿಗೆ ನೋಡಲು ಮುಜುಗರವಾಗಬಹುದು. ನಿಮ್ಮ ಇಮೇಜಿಗೆ ತಕ್ಕಂತೆ ನಿಮ್ಮ ಇಮೇಜ್ ಇರಲಿ. ಫ್ಯಾಷನ್ ಹೆಸರಲ್ಲಿ ರಾಷ್ಟ್ರ ಪ್ರೇಮಕ್ಕೆ ಧಕ್ಕೆ ತರುವಂತ ಸ್ಟೈಲ್‌ಗೆ ಮೊರೆ ಹೋಗಬೇಡಿ.

(ಲೇಖಕಿ ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ:Fall/winter Paris Fashion Week 2023: ಬೆರಗು ಮೂಡಿಸಿದ ವರ್ಷದ ಮೊದಲ ಪ್ಯಾರೀಸ್‌ ಫ್ಯಾಷನ್‌ ವೀಕ್‌

FAQ

1. ಗಣರಾಜ್ಯೋತ್ಸವದಲ್ಲಿ ನಾವು ಯಾವ ವಿಶೇಷ ಕೆಲಸಗಳನ್ನು ಮಾಡಬೇಕು?

ಪರೇಡ್ಗೆ ಹಾಜರಾಗುವುದನ್ನು ಹೊರತುಪಡಿಸಿ, ತ್ರಿವರ್ಣ ಧ್ವಜವನ್ನು ಹಾರಿಸುವುದು ಅತ್ಯಂತ ಪ್ರಮುಖವಾದ ವಿಷಯಗಳಲ್ಲಿ ಒಂದಾಗಿದೆ.

2. ಗಣರಾಜ್ಯೋತ್ಸವದ ಈ ವರ್ಷ ಯಾವುದು?

ಭಾರತವು ತನ್ನ 74 ನೇ ಗಣರಾಜ್ಯೋತ್ಸವವನ್ನು ಈ ವರ್ಷ ಆಚರಿಸುತ್ತಿದೆ.

3. ಗಣರಾಜ್ಯೋತ್ಸವದ ಇತಿಹಾಸವೇನು?

ಗಣರಾಜ್ಯೋತ್ಸವವು ಜನವರಿ 26, 1950 ರಂದು ಭಾರತದ ಸಂವಿಧಾನದ ಅಂಗೀಕಾರವನ್ನು ನೆನಪಿಸುತ್ತದೆ.

Exit mobile version