Site icon Vistara News

Republic day Men’s Fashion : ಗಣರಾಜ್ಯೋತ್ಸವದ ಸಂಭ್ರಮಕ್ಕೆ ಲಗ್ಗೆ ಇಟ್ಟ ಮೆನ್ಸ್ ಕಾಲರ್‌ ಕುರ್ತಾ ಫ್ಯಾಷನ್‌

Republic day Men's Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಗಣರಾಜ್ಯೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಗಬಲ್ಲ ಹಾಗೂ ಸಾಥ್‌ ನೀಡುವಂತಹ ಕಲರ್‌ ಕಾಲರ್‌ ಕುರ್ತಾಗಳು ಫ್ಯಾಷನ್‌ ಲೋಕಕ್ಕೆ (Republic day Men’s Fashion) ಎಂಟ್ರಿ ನೀಡಿವೆ. ಮೊದಲೆಲ್ಲ ಲಿಮಿಟೆಡ್‌ ವರ್ಣದಲ್ಲಿ ಮಾತ್ರ ದೊರೆಯುತ್ತಿದ್ದ ಈ ಪುರುಷರ ಕಾಲರ್‌ ಕುರ್ತಾಗಳು ಇದೀಗ ಸಾಕಷ್ಟು ಶೇಡ್‌ಗಳಲ್ಲಿ ಲಭ್ಯವಿದೆ.

ಕಾಲರ್‌ ಕುರ್ತಾಗೆ ಹೆಚ್ಚಿದ ಮಾನ್ಯತೆ

ಇದೀಗ ಮೊದಲಿನ ಹಾಗಿಲ್ಲ! ಪುರುಷರು ಕೂಡ ಧರಿಸಬಹುದಾದ ಮ್ಯಾನ್ಲಿ ಲುಕ್‌ ನೀಡುವ ಕುರ್ತಾಗಳು ಕಾಲಿಟ್ಟಿವೆ. ಮೊದಲಿನಂತೆ ವಿ ನೆಕ್‌ ಹಾಗೂ ರೌಂಡ್‌ ನೆಕ್‌ಗೆ ಮಾತ್ರ ಮೊರೆ ಹೋಗಬೇಕಾಗಿಲ್ಲ. ಕತ್ತನ್ನು ಬಳಸುವ ಹಾಗೂ ಯುವಕರನ್ನು ನೋಡಲು ಆಕರ್ಷಕವಾಗಿ ಬಿಂಬಿಸುವ ಕಾಲರ್‌ ನೆಕ್‌ ಕುರ್ತಾಗಳಿಗೆ ಬೇಡಿಕೆ ಹೆಚ್ಚಿದೆ. ಇವುಗಳಲ್ಲಿ ಚೈನಾ ಕಾಲರ್‌ ಹಾಗೂ ಬಟನ್‌ ಕಾಲರ್‌ಗಳಿಗೆ ಬೇಡಿಕೆ ಹೆಚ್ಚಿದೆ.

ಕಲರ್‌ಫುಲ್‌ ಕುರ್ತಾಗಳ ಅಬ್ಬರ

ಮೊದಲೆಲ್ಲ ಕುರ್ತಾ ಎಂದಾಕ್ಷಣ ಕೇವಲ ವೈಟ್‌ ಅಥವಾ ಆರೆಂಜ್‌ ವರ್ಣದ್ದು ಮಾತ್ರ ಹೆಚ್ಚು ಕಂಡು ಬರುತ್ತಿದ್ದವು. ಈಗ ಎಲ್ಲಾ ವರ್ಣದವು ಲಭ್ಯ. ಅದರಲ್ಲೂ ಕಪಲ್ಸ್‌ ಮ್ಯಾಚ್‌ ಮಾಡಬಹುದಾದ ಟ್ವಿನ್ನಿಂಗ್‌ ಶೇಡ್‌ನವು ದೊರೆಯುತ್ತಿವೆ.

ಇದನ್ನೂ ಓದಿ: Fall/winter Paris Fashion Week 2023: ಬೆರಗು ಮೂಡಿಸಿದ ವರ್ಷದ ಮೊದಲ ಪ್ಯಾರೀಸ್‌ ಫ್ಯಾಷನ್‌ ವೀಕ್‌

ಸಿಂಪಲ್‌ ಕುರ್ತಾ ಕಮಾಲ್‌

ಕಾಲರ್‌ ಕುರ್ತಾ ನೋಡಲು ಸಿಂಪಲ್‌ ಆಗಿದ್ದರೂ ಧರಿಸಿದಾಗ ಸಖತ್‌ ಆಗಿ ಕಾಣುತ್ತದೆ. ಅದರಲ್ಲೂ ಯುವಕರು ಅದನ್ನು ಯಾವುದೇ ಬಗೆಯ ಪ್ಯಾಂಟ್‌ಗಾದರೂ ಮ್ಯಾಚ್‌ ಮಾಡಬಹುದು. ಉದಾಹರಣೆಗೆ, ಧೋತಿ, ಜೀನ್ಸ್‌, ನ್ಯಾರೋ ಪ್ಯಾಂಟ್‌, ಸಲ್ವಾರ್‌, ಚೂಡಿದಾರ್‌ ಹೀಗೆ ಸಾಕಷ್ಟು ಆಪ್ಷನ್‌ ದೊರೆಯುತ್ತವೆ. ಇನ್ನು ಇತ್ತೀಚೆಗೆ ಎಲ್ಲಾ ವಯಸ್ಸಿನ ಪುರುಷರು ಇವನ್ನು ಜೀನ್ಸ್‌ ಪ್ಯಾಂಟ್‌ಗೆ ಮ್ಯಾಚ್‌ ಮಾಡುತ್ತಾರೆ. ಇದಕ್ಕೆ ಕಾರಣ ಕಂಫರ್ಟಬಲ್‌ ಫೀಲಿಂಗ್‌. ಪರಿಣಾಮ, ಕಾಲರ್‌ ಕುರ್ತಾ ಕೊಳ್ಳುವವರ ಸಂಖ್ಯೆ ಮೊದಲಿಗಿಂತ ಹೆಚ್ಚಿದೆ ಎನ್ನುತ್ತಾರೆ ಮಾರಾಟಗಾರರು.

ಡೀಸೆಂಟ್‌ ಲುಕ್‌ ನೀಡುವ ಕಾಲರ್‌ ಕುರ್ತಾ

ಕಾಲರ್‌ ಕುರ್ತಾ ಧರಿಸಿದಾಗ ಯಾವುದೇ ಕಾರಣಕ್ಕೂ ಫಂಕಿ ಹೇರ್‌ಸ್ಟೈಲ್‌ ಬೇಡ.

ಇನ್ನು ಹುಡುಗರು ಕುರ್ತಾ ಧರಿಸಿದಾಗ ತಮ್ಮ ಸ್ಟೈಲ್‌ಸ್ಟೇಟ್‌ಮೆಂಟನ್ನು ಆಯಾ ಸಭೆ-ಸಮಾರಂಭಗಳಿಗೆ ತಕ್ಕಂತೆ ಮ್ಯಾಚ್‌ ಮಾಡಿಕೊಂಡಾಗ ಮತ್ತಷ್ಟು ಆಕರ್ಷಕವಾಗಿ ಕಾಣಬಹುದು.

ಇದನ್ನೂ ಓದಿ: Weekend Style : ಆತ್ಮವಿಶ್ವಾಸ ಹೆಚ್ಚಿಸುವ ಫ್ಯಾಷನ್‌ ನನ್ನದು ಎನ್ನುವ ಪೂಜಾ ಸಾಲಿಮಠ್‌

ಕಾಲರ್‌ ಕುರ್ತಾ ಪ್ರಿಯರಿಗಾಗಿ

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Exit mobile version