-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫ್ರೆಂಡ್‌ಶಿಪ್ ಸೆಲೆಬ್ರೇಷನ್ ಮಾಡುವವರಿಗೂ ಇದೀಗ ಟ್ರೆಂಡಿ ಫ್ಯಾಷನ್‌ವೇರ್ಸ್ ಕಾಲಿಟ್ಟಿವೆ. ಸ್ನೇಹಿತರ ಗ್ಯಾಂಗ್‌ನ ಅಭಿರುಚಿ ಹಾಗೂ ಅವರವರ ಆಯ್ಕೆಗೆ ಅನುಗುಣವಾಗಿ ಲೆಕ್ಕವಿಲ್ಲದಷ್ಟು ಬಗೆಯ ಉಡುಪುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಫ್ರೆಂಡ್‌ಶಿಪ್ ಡೇ ಸೆಲೆಬ್ರೇಷನ್ ಔಟ್‌ಫಿಟ್ಸ್
ಇದೇನಿದು! ಫ್ರೆಂಡ್‌ಶಿಪ್ ಡೇ ಸೆಲೆಬ್ರೇಷನ್‌ಗೂ ಫ್ಯಾಷನ್‌ವೇರ್ಸ್ ಎಂದುಕೊಳ್ಳುತ್ತಿದ್ದೀರಾ! ಖಂಡಿತಾ, ಈ ಟ್ರೆಂಡ್ ಇತ್ತೀಚಿನ ವರ್ಷಗಳಲ್ಲಿ ಆರಂಭವಾಗಿದೆ. ಆಯಾ ವಯಸ್ಸಿಗೆ ಅನುಗುಣವಾಗಿ ಹೊಂದುವಂತಹ ಡಿಸೈನರ್‌ವೇರ್‌ಗಳು ಕಾಲಿಟ್ಟಿವೆ. ಇವುಗಳಲ್ಲಿ ಅತಿ ಹೆಚ್ಚಾಗಿ ಟ್ವಿನ್ನಿಂಗ್ ಡ್ರೆಸ್‌ಗಳು ಹೆಚ್ಚು ಪಾಪ್ಯುಲರ್ ಆಗಿವೆ. ಇನ್ನು ಯೂನಿಫಾರ್ಮಿಟಿ ನೀಡುವಂತಹ ಒಂದೇ ಬಗೆಯ ಟೀ ಶಟ್ರ್ಸ್ ಹಾಗೂ ಪ್ಯಾಂಟ್‌ಗಳು ಅತಿ ಹೆಚ್ಚು ಸೇಲ್ ಆಗುತ್ತಿವೆ. ಜೆನ್ ಜಿಯವರ ಅಭಿರುಚಿಯಲ್ಲಂತೂ ಕಂಪ್ಲೀಟ್ ಡಿಫರೆಂಟ್ ವೆಸ್ಟರ್ನ್ ಡ್ರೆಸ್‌ಗಳು ಕಾಲಿಟ್ಟಿವೆ. ಬಹುತೇಕ ಕ್ರಾಪ್ ಟಾಪ್‌ನಂತವು, ಟೊರ್ನ್, ಪ್ಯಾಚ್ ಜೀನ್ಸ್ ಶಾಟ್ಸ್, ಪ್ಯಾಂಟ್‌ಗಳು ಟ್ವಿನ್ನಿಂಗ್ ರೂಪದಲ್ಲಿ ದೊರೆಯುತ್ತಿವೆ. ಹುಡುಗರು ಎಂದಿನಂತೆ ಜೀನ್ಸ್ ಹಾಗೂ ಕ್ರಾಪ್ ಪ್ಯಾಂಟ್‌ಗಳನ್ನು ಕೊಳ್ಳುವುದು ಹೆಚ್ಚಾಗಿದೆ.
ಜೋಷ್‌ಗೆ ತಕ್ಕಂತೆ ಥೀಮ್ ವೇರ್ಸ್
ಪ್ರತಿ ವರ್ಷ ಅಗಸ್ಟ್‌ನ ಮೊದಲ ಭಾನುವಾರ ಆಚರಿಸಲಾಗುವ ಫ್ರೆಂಡ್‌ಶಿಪ್ ಡೇ, ಇದೀಗ ಅಪರೆಲ್ಸ್ ಹಾಗೂ ಫ್ಯಾಷನ್ ಮಾರುಕಟ್ಟೆಯನ್ನು ವೃದ್ಧಿಸುತ್ತಿದೆ. ಸ್ನೇಹಿತರ ದಿನಾಚಾರಣೆ ಸೆಲೆಬ್ರೇಷನ್ ಮಾಡುವ ಹುಡುಗ-ಹುಡುಗಿಯರು, ಮಹಿಳೆಯರು -ಪುರುಷರು ತಾವು ಮಾಡುವ ಪಾರ್ಟಿ ಹಾಗೂ ಸೆಲೆಬ್ರೇಷನ್‌ಗೆ ತಕ್ಕಂತೆ ತಮ್ಮ ಡ್ರೆಸ್‌ಕೋಡ್ ಕೂಡ ಆಯ್ಕೆ ಮಾಡುವುದು ಕಾಮನ್ ಆಗಿದೆ. ಟೀಮ್ ಜೋಷ್‌ಗೆ ಈ ಫ್ಯಾಷನ್‌ವೇರ್ಸ್ ಕೂಡ ಜತೆಯಾಗುತ್ತಿವೆ. ಪರಿಣಾಮ, ಈ ಸೆಲೆಬ್ರೇಷನ್‌ಗೂ ನಾನಾ ಥೀಮ್ ಹಾಗೂ ಕಾನ್ಸೆಪ್ಟ್‌ನ ಫ್ಯಾಷನ್‌ವೇರ್‌ಗಳು ಆನ್‌ಲೈನ್ ಹಾಗೂ ಆಫ್‌ಲೈನ್ ಶಾಪಿಂಗ್ ಸೆಂಟರ್‌ಗಳಿಗೆ ಲಗ್ಗೆ ಇಟ್ಟಿವೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಇದನ್ನೂ ಓದಿ: Friendship Day 2023: ನೀವು ಒಳ್ಳೆಯ ಗೆಳೆಯರೇ? ರಾಶಿಗನುಗುಣವಾಗಿ ನಿಮ್ಮ ಗೆಳೆತನದ ಗುಣ ಹೀಗಿದೆ!
ಆಯಾ ವಯಸ್ಸಿಗೆ ತಕ್ಕಂತೆ ಖರೀದಿ
ಇನ್ನು ಫ್ರೆಂಡ್‌ಶಿಪ್ ಸೆಲೆಬ್ರೇಟ್ ಮಾಡುತ್ತಿರುವ ಮಹಿಳೆಯರು ಒಂದೇ ಬಗೆಯ ಸೀರೆಗಳನ್ನು ಖರೀದಿಸತೊಡಗಿದ್ದಾರೆ. ಇದೇ ರೀತಿ ಸೆಟ್‌ನಲ್ಲಿ ಹಾಗೂ ಬಂಚ್‌ನಲ್ಲಿ ಕುರ್ತಾಗಳಿಗೂ ಡಿಮ್ಯಾಂಡ್ ಹೆಚ್ಚಾಗಿದೆ. ಒಟ್ನಲ್ಲಿ, ಒಂದೇ ಬಗೆಯ ಫ್ಯಾಷನ್‌ವೇರ್‌ಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಅದು ವೆಸ್ಟರ್ನ್ ಔಟ್‌ಫಿಟ್ ಆಗಬಹುದು ಅಥವಾ ಸೆಮಿ ಎಥ್ನಿಕ್ ಇಲ್ಲವೇ ಫಾರ್ಮಲ್ ಡ್ರೆಸ್‌ಕೋಡ್ ಆಗಬಹುದು ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಈ ಕುರಿತಂತೆ ಟಿಪ್ಸ್ ಕೂಡ ನೀಡಿದ್ದಾರೆ.
- ಸದ್ಯಕ್ಕೆ ಟ್ವಿನ್ನಿಂಗ್ ಕಾನ್ಸೆಪ್ಟ್ ಟ್ರೆಂಡ್ನಲ್ಲಿದೆ.
- ಟೀಮ್ ಗಾದಲ್ಲಿ ಯೂನಿಫಾರ್ಮ್ ಲುಕ್ ನೀಡುವ ಟ್ರೆಂಡಿ ಡ್ರೆಸ್‌ಗಳು ಹೊಂದುತ್ತವೆ.
- ವಯಸ್ಸಿಗನುಗುಣವಾಗಿ ಡಿಸೈನರ್ವೇರ್ಸ್ ಕೂಡ ಲಭ್ಯ.
- ಸೀಸನ್ಗೆ ತಕ್ಕಂತೆ ಸೆಲೆಕ್ಟ್ ಮಾಡುವುದು ಅಗತ್ಯ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)