ಸಂದರ್ಶನ: ಶೀಲಾ ಸಿ. ಶೆಟ್ಟಿ
ಬಿಂದಾಸ್ ಫ್ಯಾಷನೆಬಲ್ ಔಟ್‌ಫಿಟ್‌ಗಳಲ್ಲೆ ಕಾಣಿಸಿಕೊಳ್ಳುವ ಸ್ಯಾಂಡಲ್‌ವುಡ್ ನಟಿ (Sandalwood Star Fashion) ಸಂಯುಕ್ತಾ ಹೆಗ್ಡೆಯ ಫ್ಯಾಷನ್ ಸ್ಟೇಟ್‌ಮೆಂಟ್ ಸೀಸನ್‌ನಂತೆ ಬದಲಾಗುತ್ತಿರುತ್ತದಂತೆ. ಒಮ್ಮೆ ಇದ್ದ ಹಾಗೆ ಮತ್ತೊಮ್ಮೆ ಇರುವುದಿಲ್ಲವಂತೆ! ಟ್ರೆಂಡ್ ಫಾಲೋವರ್ ಶಬ್ದಕ್ಕೂ ನನಗೂ ಸಂಬಂಧವೇ ಇಲ್ಲ! ಬದಲಿಗೆ ನಾನೇ ಟ್ರೆಂಡ್ ಸೆಟ್ ಮಾಡುತ್ತೇನೆ. ಫ್ಯಾಷನ್ ಎಂದು ತಲೆಕೆಡಿಸಿಕೊಳ್ಳುವುದಿಲ್ಲ. ಬದಲಿಗೆ ನನಗಿಷ್ಟವಾದುದದನ್ನು ಧರಿಸುತ್ತೇನೆ ಎನ್ನುತ್ತಾರೆ.
ಉದ್ಯಾನನಗರಿಯಲ್ಲಿ ನಡೆದ ಹೈ ಫ್ಯಾಷನ್ ಮೆಟ್ ಗಾಲಾ ಶೋನಲ್ಲಿ ಸೆಲೆಬ್ರೆಟಿ ಶೋ ಸ್ಟಾಪರ್ ಆಗಿ ಹೆಜ್ಜೆ ಹಾಕಿದ ನಂತರ ವಿಸ್ತಾರ ನ್ಯೂಸ್‌ನೊಂದಿಗೆ ಅವರು ತಮ್ಮ ಫ್ಯಾಷನ್ ಅಭಿರುಚಿಯ ಬಗ್ಗೆ ಮಾತನಾಡಿದರು. ಶೋನಲ್ಲಿ ಧರಿಸಿದ್ದ ಅತ್ಯಾಕರ್ಷಕ ಡಿಸೈನರ್‌ವೇರ್ ಬಗ್ಗೆಯೂ ತಿಳಿಸಿದರು.
ಸೋಷಿಯಲ್ ಮೀಡಿಯಾದಲ್ಲಿ ಬಿಂದಾಸ್ ಫ್ಯಾಷನ್ ಸ್ಟೇಟ್‌ಮೆಂಟ್‌ಗಳಲ್ಲಿ ಕಾಣಿಸಿಕೊಳ್ಳುವ ನಿಮ್ಮ ಫ್ಯಾಷನ್ ಮಂತ್ರ ಏನು?
ಬಿಂದಾಸ್ ಆಗಿ ಕಾಣಿಸಿಕೊಳ್ಳುವುದು ಸುಲಭ. ಆದರೆ, ಒಂದೊಂದಕ್ಕೂ ಫ್ಯಾಷನ್ ಸ್ಟೇಟ್‌ಮೆಂಟ್ ವಿವರಿಸುವುದು ತುಸು ಕಷ್ಟ. ಆದರೂ ನನ್ನದು ಇಷ್ಟೇ! ಏನೇ ಫ್ಯಾಷನ್ ಮಾಡು ಅದು ನಮ್ಮ ಲೈಫ್‌ಸ್ಟೈಲ್‌ಗೆ ಹೊಂದಿಕೊಳ್ಳಬೇಕಷ್ಟೇ!
ಹೈ ಫ್ಯಾಷನ್ ಮೆಟ್ ಗಾಲಾ ಶೋನಲ್ಲಿ ವಿಭಿನ್ನ ಡಿಸೈನರ್‌ವೇರ್ ಧರಿಸಿ ಶೋ ಸ್ಟಾಪರ್ ಆಗಿ ವಾಕ್ ಮಾಡಿದಾಗ ಅನಿಸಿದ್ದೇನು?
ಫ್ಯಾಷನ್ ಅಂದ್ರೆ ಕೇವಲ ನಾವು ಧರಿಸುವ ಔಟ್‌ಫಿಟ್ ಅಲ್ಲ, ಅದರಲ್ಲಿ ನಾನ್‌ವೇರಬಲ್ ಡಿಸೈನರ್‌ವೇರ್ ಸಹಿತ ಇರುತ್ತವೆ. ಒಂದೊಂದು ಫ್ಯಾಷನ್‌ವೇರ್ ಒಂದೊಂದು ಕಥೆಯನ್ನೊಳಗೊಂಡಿರುತ್ತದೆ. ನೋಡುಗರ ಹುಬ್ಬೇರಿಸುತ್ತವೆ. ಇಲ್ಲಿ ನಾನು ಧರಿಸಿದ ಡಿಸೈನರ್‌ವೇರ್ ಕೂಡ ಹಾಗೆಯೇ ಇತ್ತು.
ನೀವು ಧರಿಸಿದ ವಿಭಿನ್ನವಾಗಿದ್ದ ಡಿಸೈನರ್‌ವೇರ್ ಬಗ್ಗೆ ವಿವರಿಸಿ?
ಬ್ಲ್ಯಾಕ್ ಶೋಲ್ಡರ್‌ಲೆಸ್ ಟಾಪ್ ಮೇಲೆ ಮೆಶ್ ಪ್ಲಸ್ ಲೇಸ್‌ನಂತಹ ಫ್ಯಾಬ್ರಿಕ್‌ವನ್ನೊಳಗೊಂಡ ರೆಕ್ಕೆಗಳನ್ನೊಳಗೊಂಡ ವಿಂಗ್ಸ್ ಸ್ಲೀವ್ಸ್ ಜೊತೆಗೆ ರಾಶಿ ರಾಶಿ ಬ್ಲ್ಯಾಕ್ ರೋಸ್‌ಗಳಿಂದ ಸ್ಕರ್ಟ್ ವಿನ್ಯಾಸಗೊಳಿಸಲಾಗಿತ್ತು. ಇನ್ನು ಸ್ಟಾಕಿಂಗ್ಸ್ ಹಾಗೂ ಗ್ಲೌವ್ಸ್ ಸಾಥ್ ನೀಡಿತ್ತು. ಎಮರಾಲ್ಡ್ ಸ್ಟೋರ್ ಈ ಡಿಸೈನರ್‌ವೇರ್ ಸಿದ್ಧಪಡಿಸಿತ್ತು. ಇನ್ನು ಸ್ಕರ್ಟನ್ನು ಅಂಬ್ರೆಲ್ಲಾದಂತೆ ಫ್ರಿಂಝ್ ಸ್ಟೈಲ್‌ನಲ್ಲಿ ಸುತ್ತಲೂ ವಿನ್ಯಾಸಗೊಳಿಸಲಾಗಿತ್ತು. ಸಾಫ್ಟ್ ತಂತಿಯಿಂದ ವಿನ್ಯಾಸ ಮಾಡಿದ ಹೆಡ್ ಆ್ಯಕ್ಸೆಸರೀಸ್ ಮುಖವನ್ನು ಪಾರದರ್ಶಕವಾಗಿ ಕವರ್ ಮಾಡಿತ್ತು.
ನಟಿಯರು ಫ್ಯಾಷನ್ ಶೋಗಳಲ್ಲಿ ವಾಕ್ ಮಾಡುವುದು ಸಾಮಾನ್ಯವಾಗಿಯಲ್ಲ?
ಹೌದು. ಇದೀಗ ಇದು ಟ್ರೆಂಡ್ ಕೂಡ ಆಗಿದೆ. ಆದರೆ, ಇದು ನನ್ನ ಮೊದಲ ಫ್ಯಾಷನ್ ಶೋ ಎಂದರೇ ಸಾಕಷ್ಟು ಮಂದಿ ನಂಬಲಿಕ್ಕಿಲ್ಲ!
ಸೀಸನ್ ಫ್ಯಾಷನ್ ಫಾಲೋ ಮಾಡುತ್ತೀರಾ?
ಹಾಗೇನಿಲ್ಲ! ಆಯಾ ಸಂದರ್ಭಕ್ಕೆ ಮ್ಯಾಚ್ ಮಾಡುತ್ತೇನೆ. ಅಷ್ಟೇ!
ನಿಮ್ಮ ಸ್ಟೈಲ್ ಸ್ಟೇಟ್‌ಮೆಂಟ್?
ಯಾವುದೇ ಫ್ಯಾಷನ್ ಆಗಬಹುದು. ಧರಿಸಿದಾಗ ಕಂಫರ್ಟಬಲ್ ಆಗಿರಬೇಕು. ಅದಕ್ಕೆ ಮಾತ್ರ ಆದ್ಯತೆ. ಇನ್ನು ಸಿನಿಮಾ ಹಾಗೂ ಶೋಗಳಲ್ಲಿ ಧರಿಸುವುದು ಆಯಾ ಸನ್ನಿವೇಶಕ್ಕೆ ತಕ್ಕಂತೆ ಮಾತ್ರ ತಾನೇ!
(ಲೇಖಕಿ ಫ್ಯಾಷನ್ ಪತ್ರಕರ್ತೆ)