-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಸ್ವಾತಂತ್ರ್ಯೋತ್ಸವದಲ್ಲಿ ಎಲ್ಲಿ ನೋಡಿದರೂ ವೈವಿಧ್ಯಮಯ ಸೀರೆಗಳನ್ನು ಉಟ್ಟ ಮಾನಿನಿಯರೇ ಕಾಣಿಸುತ್ತಿದ್ದರು. ಶಾಲಾ ಮಕ್ಕಳು ಯೂನಿಫಾರ್ಮ್ ನಲ್ಲಿ ಕಂಡರೇ, ಹುಡುಗಿಯರು ಎಥ್ನಿಕ್‌ವೇರ್‌ನಲ್ಲಿದ್ದರು. ಇನ್ನು ಶಾಲಾ ಟೀಚರ್ಗಳಿಂದ ಹಿಡಿದು ಮಹಿಳಾ ಸಂಘ-ಸಂಸ್ಥೆಗಳು, ಲೇಡಿಸ್ ಕ್ಲಬ್‌ಗಳು, ಎಂಟರ್‌ಪ್ರೈನರ್ಸ್, ಹ್ಯಾಂಡ್‌ಲೂಮ್ ಪ್ರಿಯರು ಸೇರಿದಂತೆ ನಾನಾ ನಾರಿಯರ ಟೀಮ್‌ಗಳು ಸಂಸ್ಕೃತಿ ಬಿಂಬಿಸುವ ಸೀರೆಗಳಲ್ಲಿ ಸಂಭ್ರಮಿಸಿದರು. ಗೋಲ್ಡನ್, ಕ್ರೀಮ್, ಹಾಫ್ ವೈಟ್, ಕೇಸರಿ-ಬಿಳಿ-ಹಸಿರು ತ್ರಿವರ್ಣ ಒಟ್ಟಾಗಿರುವ ಸೀರೆ, ಝರಿ ಬಾರ್ಡರ್ ಇರುವ ಖಾದಿ-ಕಾಟನ್ ಸೀರೆ, ಅರ್ಗಾನ್ಜಾ ಸೇರಿದಂತೆ ಬಗೆಬಗೆಯ ಹ್ಯಾಂಡ್‌ಲೂಮ್ ಸೀರೆ ಉಟ್ಟ ನಾರಿಯರು ತಮ್ಮದೇ ಆದ ಡಿಫರೆಂಟ್ ಸ್ಯಾರಿ ಡ್ರೇಪಿಂಗ್‌ನಲ್ಲಿ ಕಾಣಿಸಿಕೊಂಡು ಮನಸೆಳೆದರು.
· ವುಮೆನ್ ಎಂಟರ್‌ಪ್ರೇನರ್ಸ್ ಲಾಡರ್ಸ್ ವೆಲ್ – ರೇವತಿ ಕೃಷ್ಣ ಕುಮಾರ್ ಟೀಮ್
“ಸ್ವಾತಂತ್ರ್ಯ ದಿನಾಚಾರಣೆಯ ಸಂಭ್ರಮಕ್ಕೆ ಸೀರೆ ಧರಿಸಿದ ನಾವೆಲ್ಲರೂ ರಾಷ್ಟ್ರಪ್ರೇಮ ಬಿಂಬಿಸುವ ಫೋಟೋಗಳಿಗೆ ಪೋಸ್ ನೀಡಿದೆವು. ತ್ರಿವರ್ಣ ಶೇಡ್ಸ್ ಮಾತ್ರವಲ್ಲ, ಇತರೇ ಸೀರೆಗಳಲ್ಲೂ ಆಕರ್ಷಕವಾಗಿ ಕಾಣಬಹುದು ಎಂಬುದನ್ನು ತೋರ್ಪಡಿಸಿದೆವು. ನಮ್ಮೆಲ್ಲರ ಸೀರೆ ಪ್ರೇಮ ಬಿಂಬಿಸಲು ಇದೊಂದು ಕಾರಣವೂ ಇರಬಹುದು” ಎನ್ನುತ್ತಾರೆ ವುಮೆನ್ ಎಂಟರ್‌ಪ್ರೇನರ್ಸ್ ಲಾಡೆರ್ಸ್ ವೆಲ್‌ನ ರೇವತಿ ಕೃಷ್ಣ ಕುಮಾರ್.
ವೇರ್ ಯುವರ್ ವೀವ್ಸ್ – ಭಾವನಾ ಪ್ರವೀಣ್ ಟೀಮ್
ಇನ್ನು ವೇರ್ ಯುವರ್ ವೀವ್ಸ್ ನ ಭಾವನಾ ಪ್ರವೀಣ್ ಅವರ ಟೀಮ್‌ನವರ ಸೀರೆ ಪ್ರೇಮ ಕೂಡ ಮಹಿಳೆಯರ ಸೆಲೆಬ್ರೇಷನ್‌ನಲ್ಲಿ ಕಂಡು ಬರುತ್ತದೆ. ನೋಡಲು ಆಕರ್ಷಕವಾಗಿ ಕಾಣುವ ಟೀಮ್ ಸದಸ್ಯರೆಲ್ಲರೂ ಸೀರೆಯಲ್ಲಿ ಧರೆಗಿಳಿದ ದೇವತೆಯರಂತೆ ಕಾಣಿಸುತ್ತಿದ್ದರು.
· ಫ್ಯಾಷನ್ ಡಿಸೈನರ್ ರೇಣುಕಾ ಪ್ರಕಾಶ್ ಟೀಮ್ :
ಹ್ಯಾಂಡ್‌ಲೂಮ್ ಸೀರೆ ಪ್ರೇಮಿ ರೇಣುಕಾ ಪ್ರಕಾಶ್ ಕೂಡ ತಮ್ಮ ಟೀಮ್‌ನೊಂದಿಗೆ ದೇಸಿ ಲುಕ್ ನೀಡುವ ಸೀರೆಗಳಲ್ಲಿ ದಿನಾಚಾರಣೆ ಸಂಭ್ರಮಿಸಿದರು. ಹ್ಯಾಂಡ್‌ಲೂಮ್ ಸೀರೆಗಳು ನಮ್ಮ ಸಂಸ್ಕೃತಿ ಬಿಂಭಿಸುತ್ತವೆ ಎಂಬುದು ಅವರ ಅಭಿಪ್ರಾಯವಾಗಿತ್ತು.
ಇದನ್ನೂ ಓದಿ : Independence day 2023 : ರಾಷ್ಟ್ರಪ್ರೇಮ ಬಿಂಬಿಸುವ ಔಟ್‌ಫಿಟ್‌ನಲ್ಲಿ ಫ್ಯಾಷನ್ ಸೆಲೆಬ್ರೆಟಿಗಳು
ಇದೇ ರೀತಿ, ಉದ್ಯಾನನಗರಿಯ ಒಂದೊಂದು ಕಡೆಯೂ ನಡೆದ ಸ್ವಾತಂತ್ರ್ಯ ದಿನಾಚಾರಣೆಯ ಸಂಭ್ರಮದಲ್ಲಿ ಸ್ತ್ರಿಯರು ತಿರಂಗಾ ಶೇಡ್‌ನ ಸೀರೆಯಿಂಡಿದು ಕಾಟನ್-ಖಾದಿ ಸೇರಿದಂತೆ ನಾನಾ ಶೈಲಿಯ ಸೀರೆಗಳಲ್ಲಿ ಕಾಣಿಸಿಕೊಂಡು ಸಂಭ್ರಮಿಸಿದರು.