-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇಂಡೋ-ವೆಸ್ಟರ್ನ್ ಶೈಲಿಯ ಬ್ಲಾಕ್ ಹಾಗೂ ಗೋಲ್ಡನ್ ಮೆಟಾಲಿಕ್ ಡಿಸೈನರ್ ಸಾದಾ ಸೀರೆಯಲ್ಲಿ ನಟಿ ಶ್ರುತಿ ಹಾಸನ್ ಡಿಫರೆಂಟ್ ಲುಕ್‌ನಲ್ಲಿ (Star fashion) ಕಾಣಿಸಿಕೊಂಡಿದ್ದು, ಸೀರೆ ಪ್ರಿಯರನ್ನು ಸೆಳೆದಿದೆ. ಟ್ರೆಡಿಷನಲ್ ಹಾಗೂ ವೆಸ್ಟರ್ನ್ ಮಿಕ್ಸ್ ಮ್ಯಾಚ್ ಮಾಡಿರುವ ಈ ನಯಾ ಲುಕ್ ಸದ್ಯದ ಸ್ಯಾರಿ ಸ್ವಾಗ್‌ನಲ್ಲಿ ಟಾಪ್ ಲಿಸ್ಟ್‌ನಲ್ಲಿದೆ.
ಸೀರೆಗೆ ವಿಭಿನ್ನ ಲುಕ್ ನೀಡಿದ ಬಾಡಿಕಾನ್ ಬ್ಲೌಸ್
ಅಂದಹಾಗೆ, ನಟಿ ಶ್ರುತಿ ಹಾಸನ್ ಧರಿಸಿರುವ ಕೊರವೈ ಬ್ರಾಂಡ್‌ನ ಸೀರೆಯ ಬಾರ್ಡರ್ ಜಾಗದಲ್ಲಿ ಕಂಪ್ಲೀಟ್ ಗೋಲ್ಡನ್ ಮೆಟಾಲಿಕ್ ಶೇಡ್‌ನಂತಹ ವಿನ್ಯಾಸ ಹೊಂದಿದೆ. ಸೀರೆಯ ಇಡೀ ಲುಕ್, ಧರಿಸಿರುವ ಸಾದಾ ಟರ್ಟಲ್‌ನೆಕ್‌ನ ಕ್ರಾಪ್ ಫುಲ್ ಸ್ಲೀವ್ ಬ್ಲೌಸ್‌ನಿಂದ ಬದಲಾಗಿದೆ. ಸ್ಯಾಟೀನ್‌ನಂತೆ ಕಾಣುವ ಸಾಫ್ಟ್ ಮೆಟಿರೀಯಲ್‌ನ ಬ್ಲೌಸ್ ಫ್ಯಾಬ್ರಿಕ್ ಸೀರೆಗೆ ಮ್ಯಾಚ್ ಆಗಿದೆ. ಹಾಗೆಂದು ಇದು ಟ್ರೆಡಿಷನಲ್ ಬ್ಲೌಸ್ ಅಲ್ಲ, ವೆಸ್ಟರ್ನ್ ಶೈಲಿಯ ಕ್ರಾಪ್ ಟಾಪ್ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಬ್ಲೌಸ್‌ನ ವಿನ್ಯಾಸ ಶ್ರುತಿ ಹಾಸನ್‌ರ ಲುಕ್ಕನ್ನೇ ಬದಲಿಸಿದೆ. ನೋಡಲು ವಿಭಿನ್ನ ಲುಕ್ ನೀಡಿದೆ. ಇನ್ನು ಈ ಟಾಪ್‌ನಂತೆ ಕಾಣುವ ಬ್ಲೌಸ್ ಬೆರಳುಗಳನ್ನು ಗ್ಲೌಸ್‌ನಂತೆ ಕೈಗಳನ್ನು ಕವರ್ ಮಾಡಿರುವುದು ಪ್ರಯೋಗಾತ್ಮಕ ಸ್ಟೈಲಿಂಗ್‌ಗೆ ನಾಂದಿ ಹಾಡಿದೆ. ನಯಾನಿಕಾ ಹಾಗೂ ಶಿವಾನಿ ಸ್ಟೈಲಿಂಗ್ ಶ್ರುತಿಗೆ ಸೂಪರ್ ಮಾಡೆಲ್ ಲುಕ್ ನೀಡಿದೆ.
ಇದನ್ನೂ ಓದಿ | Star Fashion | ಲಂಡನ್‌ನಲ್ಲಿ ನಟಿ ಕಾವ್ಯಾ ಶೆಟ್ಟಿ ಸ್ಟ್ರೀಟ್ ಫ್ಯಾಷನ್ ಸ್ಟೇಟ್‌ಮೆಂಟ್
ಗೋಲ್ಡನ್ ವರ್ಣದ ಜ್ಯುವೆಲರಿ ಮ್ಯಾಚ್
ಇನ್ನು ಅದ್ವೈತ ಮಾಥುರ್ ಅವರ ಸ್ಟುಡಿಯೋ ಮೆಟಲರ್ಜಿ ಬ್ರ್ಯಾಂಡ್‌ನ ಬಂಗಾರ ವರ್ಣದ ಇಯರಿಂಗ್, ಫಿಂಗರ್‌ರಿಂಗ್, ಬ್ರೇಸ್‌ಲೆಟ್‌ನಂತಹ ಕಂಗನ್ ಬ್ಲ್ಯಾಕ್ ಸೀರೆಗೆ ಸಖತ್ ಮ್ಯಾಚ್ ಆಗಿವೆ. ಇದು ಅತ್ಯಾಕರ್ಷಕವಾಗಿ ಕಾಣಲು ಸಹಕಾರಿಯಾಗಿದೆ. ಬಹಳ ದಿನಗಳ ನಂತರ ಡಿಫರೆಂಟ್ ಲುಕ್‌ನಲ್ಲಿ ಶ್ರುತಿ ಹಾಸನ್ ಕಾಣಿಸಿಕೊಳ್ಳಲು ಸಾಥ್ ನೀಡಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕಿ ದಿವಿಜಾ.
ಕಾರ್ಪೋರೇಟ್ ಮಹಿಳೆಯರು ಇಷ್ಟಪಡುವ ಲುಕ್
ಕಾರ್ಪೋರೇಟ್ ಮಹಿಳೆಯರು ಅತಿ ಹೆಚ್ಚಾಗಿ ಇಷ್ಟಪಡುವುದು ಇಂಡೋ-ವೆಸ್ಟರ್ನ್ ಸ್ಟೈಲ್‌ನ ಸೀರೆಗಳು. ಡ್ರೇಪಿಂಗ್ ಹಾಗೂ ಆಕ್ಸೆಸರೀಸ್ ಕೂಡ ಇದೇ ರೀತಿ ಧರಿಸಲು ಇಷ್ಟಪಡುತ್ತಾರೆ. ಅಂದಹಾಗೆ, ನಟಿ ಶ್ರುತಿ ಹಾಸನ್‌ರ ಈ ಲುಕ್ ವಿಶೇಷವಾಗಿ ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ನೋಡಲು ವಿಭಿನ್ನವಾಗಿ ಕಾಣುವುದರೊಂದಿಗೆ ಸಿಂಪಲ್ ಸ್ಟೈಲಿಂಗ್ ಇದಕ್ಕಿರುವುದು ಮೆಚ್ಚುಗೆ ಪಡೆಯಲು ಕಾರಣ ಎನ್ನುತ್ತಾರೆ ಫ್ಯಾಷನ್ ವಿಮರ್ಶಕಿ ರೀಟಾ. ಅವರ ಪ್ರಕಾರ, ಸದ್ಯಕ್ಕೆ ಸ್ಟಾರ್ ಸೀರೆ ಸ್ವಾಗ್ ಲಿಸ್ಟ್‌ನಲ್ಲಿ ಶ್ರುತಿ ಹಾಸನ್ ಟಾಪ್ ಲಿಸ್ಟ್‌ನಲ್ಲಿದ್ದಾರೆ ಎನ್ನುತ್ತಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ | Star Fashion | ನಟ ಹೃತಿಕ್ ರೋಷನ್ ಗ್ರೀಕ್ ಗಾಡ್ ಆಫ್ ಬಾಲಿವುಡ್ ಆಗಿದ್ದು ಹೇಗೆ?