Site icon Vistara News

Star Fashion: ಸ್ಟ್ರೀಟ್ ವೇರ್‌ಗೆ ಮರಳಿದ ರೆಟ್ರೊ ಸ್ಟೈಲ್‌ ಬ್ಯಾಗಿ ಹಿಪ್‌ ಹಾಪ್‌ ಹೈ ರೈಸ್‌ ಬ್ಲಾಕ್‌ ಜೀನ್ಸ್‌

Retro Style Baggy Hip Hop High Rise Black Jeans Back To Streetwear

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಫ್ಯಾಷನ್‌ನಲ್ಲಿ ಮರೆಯಾಗಿದ್ದ ಬ್ಯಾಗಿ ಹಿಪ್‌ ಹಾಪ್‌ ಹೈ ರೈಸ್‌ ಬ್ಲಾಕ್‌ ಕಾರ್ಗೋ ಜೀನ್ಸ್‌ ಸ್ಟ್ರೀಟ್‌ವೇರ್‌ ಫ್ಯಾಷನ್‌ ಮರಳಿದೆ. ಹೌದು. ಇದಕ್ಕೆ ಸಾಕ್ಷಿ ಎಂಬಂತೆ, ನಟಿ ಪೂಜಾ ಹೆಗ್ಡೆ (Star Fashion), ಈ ಸೀಸನ್‌ನ ಬಿಂದಾಸ್‌ ಫ್ಯಾಷನ್‌ನಲ್ಲಿ ಹಿಪ್‌ ಹಾಪ್‌ ಬ್ಲಾಕ್‌ ಕಾರ್ಗೋ ಜೀನ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಹಳಷ್ಟು ವರ್ಷಗಳಿಂದ ತೆರೆಮರೆಗೆ ಸರಿದಿದ್ದ ಈ ಸ್ಟೈಲ್‌ ಸ್ಟೇಟ್‌ಮೆಂಟ್‌ ಮತ್ತೊಮ್ಮೆ ರೀ ಎಂಟ್ರಿ ನೀಡಿದೆ ಎನ್ನುತ್ತಿದ್ದಾರೆ ಸ್ಟೈಲಿಸ್ಟ್‌ಗಳು.

ಎಲ್ಲದಕ್ಕಿಂತ ಹೆಚ್ಚಾಗಿ ನಟಿ ಪೂಜಾ ಹೆಗ್ಡೆ, ತಮ್ಮದೇ ಆದ ಹೊಸ ಕಾನ್ಸೆಪ್ಟ್‌ನಲ್ಲಿ ಹಾಲ್ಟೆರ್‌ ನೆಕ್‌ನ ಯೆಲ್ಲೋ ಕ್ರಾಪ್‌ ಟಾಪ್‌ ಮ್ಯಾ ಚ್‌ ಮಾಡಿ ಹಿಪ್‌ ಹಾಪ್‌ ಕಾರ್ಗೋ ಜೀನ್ಸ್‌ಗೆ ಹೊಸ ರೂಪ ಕಲ್ಪಿಸಿದ್ದಾರೆ. ಈ ಮೂಲಕ ಯುವತಿಯರನ್ನು ಸ್ಟ್ರೀಟ್‌ವೇರ್‌ ಫ್ಯಾಷನ್‌ನತ್ತ ಸೆಳೆದಿದ್ದಾರೆ.

ರೆಟ್ರೋ ಫ್ಯಾಷನ್‌ನಲ್ಲಿ ಬ್ಯಾಗಿ ಹಿಪ್‌ ಹಾಪ್‌ ಕಾರ್ಗೋ ಜೀನ್ಸ್‌

ಕಳೆದ 80ರ ದಶಕದಲ್ಲಿ ರೆಟ್ರೋ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿದ್ದ ಬ್ಯಾಗಿ ಪ್ಯಾಂಟ್‌ ಹಿಪ್‌ ಹಾಪ್‌ ಕಾರ್ಗೋ ಜೀನ್ಸ್‌ ಸಾಕಷ್ಟು ಹಂಗಾಮ ಎಬ್ಬಿಸಿತ್ತು. ಆಗಷ್ಟೇ ಬೆಲ್‌ಬಾಟಮ್‌ ಪ್ಯಾಂಟ್‌ಗಳು ಟ್ರೆಂಡಿಯಾಗಿ ಮರೆಯಾಗಿದ್ದವು. ವೆಸ್ಟರ್ನ್ ಸಿನಿಮಾಗಳ ಮೂಲಕ ಜೀನ್ಸ್‌ ಹಾಗೂ ಕಾರ್ಗೋ ಪ್ಯಾಂಟ್‌ಗಳು ಭಾರತದ ಸಿನಿಮಾ ನಟ –ನಟಿಯರ ಮೂಲಕ ಎಂಟ್ರಿ ನೀಡಿದ್ದವು. ಆ ಸಮಯದಲ್ಲಿ ಈ ಬ್ಯಾಗಿ ಕಾರ್ಗೋ ಪ್ಯಾಂಟ್‌ಗಳು ಹಾಗೂ ಹೈ ರೈಸ್‌ ಪ್ಯಾಂಟ್‌ಗಳು ನಟಿಯರ ಮೂಲಕ ಚಾಲ್ತಿಗೆ ಬಂದಿದ್ದವು. ರೆಟ್ರೋ ಫ್ಯಾಷನ್‌ನಲ್ಲಿ ತಮ್ಮ ಸ್ಥಾನ ಗಟ್ಟಿಯಾಗಿಸಿಕೊಂಡಿದ್ದವು.

ಇದನ್ನೂ ಓದಿ: Star Fashion: ‘ಜೆಂಡರ್‌ ಬಾರ್ಡರ್‌’ ಮುರಿದ ನಟ ಮಾಡೆಲ್‌ ವಿಜಯ್‌ ವರ್ಮಾ ಮೆಟಲ್‌ ಸೀರೆ ಕಹಾನಿ!

Star Fashion

ಬ್ಲಾಕ್‌ ಜೀನ್ಸ್‌ಗೆ ಸ್ಟ್ರೀಟ್ ವೇರ್‌ನಿಂದ ಹೊಸ ರೂಪ

ರೆಟ್ರೋ ಫ್ಯಾಷನ್‌ನಲ್ಲಿದ್ದ ಈ ಕಾರ್ಗೋ ಪ್ಯಾಂಟ್‌ಗಳು ಇದೀಗ ಡಿಸೈನರ್‌ಗಳ ಕೈಗೆ ಸಿಲುಕಿ ಹೊಸ ರೂಪ ಪಡೆದುಕೊಂಡಿವೆ. ಸೈಡ್‌ ಸ್ಲಿಟ್‌ ನೀಡಿ ಹೊಸ ಟಚ್‌ ನೀಡಲಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಹಾಗಾಗಿ ಇದು ರೆಟ್ರೋ ಹಾಗೂ ಇತ್ತೀಚಿನ ಸ್ಟೈಲ್‌ಸ್ಟೇಟ್‌ಮೆಂಟ್‌ ಮಿಕ್ಸ್‌ ಮ್ಯಾಚ್‌ ಆಗಿದೆ ಎನ್ನಬಹುದು ಎನ್ನುತ್ತಾರೆ ಡಿಸೈನರ್‌ಗಳು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

Exit mobile version