Site icon Vistara News

Star Style | ಟ್ರೆಂಡ್‌ ಸೆಟ್‌ ಮಾಡಿದ ಅಲಿಯಾ ಪ್ರೆಗ್ನೆನ್ಸಿ ಫ್ಯಾಷನ್‌

Star Style

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರೆಗ್ನೆನ್ಸಿ ಫ್ಯಾಷನ್‌ನಲ್ಲಿ ಆಕರ್ಷಕವಾಗಿ ಕಾಣುತ್ತಿರುವ ಬಾಲಿವುಡ್‌ ನಟಿ ಅಲಿಯಾ ಭಟ್ ಸ್ಟೈಲ್‌ (Star Style) ಸ್ಟೇಟ್‌ಮೆಂಟ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಪ್ರೆಗ್ನೆಂಟ್‌ ಎಂದಾಕ್ಷಣ ಹೊರಗೆ ಬರದೇ, ಮೈತುಂಬಾ ಹೊದ್ದುಕೊಂಡು ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ ಮರೆತುಬಿಡುವುದಲ್ಲ! ಆಯಾ ವ್ಯಕ್ತಿಯ ಐಡೆಂಟಿಟಿಗೆ ತಕ್ಕಂತೆ ಫ್ಯಾಷನ್‌ ಮೈಗೂಡಿಸಿಕೊಳ್ಳುವುದು ಎಂಬುದನ್ನು ನಟಿ ಅಲಿಯಾ ಈಗಾಗಲೇ ಪ್ರೂವ್‌ ಮಾಡಿದ್ದಾರೆ. ಇದು ಅವರ ಇತ್ತೀಚಿನ ಇನ್ಸ್ಟಾಗ್ರಾಮ್‌ ಫೋಟೋಗಳ ಮೂಲಕ ಸಾಬೀತಾಗಿದೆ ಕೂಡ.

ವ್ಯಕ್ತಿತ್ವಕ್ಕೆ ತಕ್ಕಂತೆ ಫ್ಯಾಷನ್‌

ಫ್ಯಾಷನ್‌ ವಿಮರ್ಶಕಿ ವಿದ್ಯಾ ಹೇಳುವಂತೆ, ಜನರೇಷನ್‌ ಬದಲಾದಂತೆ ಮಹಿಳೆಯ ಸ್ಟೈಲ್‌ಸ್ಟೇಟ್‌ಮೆಂಟ್‌ಗಳು ಬದಲಾಗುತ್ತಿವೆ. ಆಕೆಯ ಒಂದೊಂದು ಸ್ಟೇಜ್‌ಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳು ಬದಲಾಗುತ್ತಿರುತ್ತವೆ. ಆದರೆ, ಮೊದಲಿನಂತೆ ಈಗ ಮಹಿಳೆಯ ಫ್ಯಾಷನ್‌ ಕೊನೆವರೆಗೂ ಒಂದೇ ತರಹದ್ದಾಗಿರುವುದಿಲ್ಲ. ಬದಲಿಗೆ ಆಕೆಯ ಬೆಳವಣಿಗೆ, ಪ್ರೊಫೆಷನ್‌ ಹಾಗೂ ಆಕೆಯ ವೈಯುಕ್ತಿಕ ಜೀವನದ ಆಧಾರದ ಮೇಲೆ ನಿರ್ಧರಿತಗೊಳ್ಳುತ್ತವೆ. ಉದಾಹರಣೆಗೆ, ಪ್ರೊಫೆಷನ್‌ನಲ್ಲಿದ್ದಾಗ ಅದಕ್ಕೆ ತಕ್ಕಂತಹ ಉಡುಪುಗಳು, ಮದುವೆಯಾದ ನಂತರ ಇನ್ನೊಂದು, ಇನ್ನು ಗರ್ಭಿಣಿಯಾದಾಗ ಅದಕ್ಕೆ ತಕ್ಕಂತಹ ಕಂಫರ್ಟಬಲ್‌ ಉಡುಪುಗಳಿಗೆ ಹೊಂದುಕೊಳ್ಳುವುದು, ಮಗುವಾದ ನಂತರ ಮತ್ತೊಂದು ಹೀಗೆ ನಾನಾ ಸ್ಟೇಜ್‌ಗಳಲ್ಲಿ ಮಾನಿನಿಯರ ಫ್ಯಾಷನ್‌ ಸ್ಟೇಟ್‌ಮೆಂಟ್‌ಗಳು ಬದಲಾಗುತ್ತಾ ಹೋಗುತ್ತದೆ. ಇದು ಇಂದಿನ ಅಗತ್ಯ ಕೂಡ ಎನ್ನುತ್ತಾರೆ. ಇನ್ನು ತಾರೆಯರಿಗೆ ಇವುಗಳ ಜಂಜಾಟ ಇಲ್ಲವಾದರೂ ಅವರ ವ್ಯಕ್ತಿತ್ವ ಹಾಗೂ ಅಭಿರುಚಿಗೆ ತಕ್ಕಂತೆ ಫ್ಯಾಷನ್‌ ಕೂಡ ಬದಲಾಗುತ್ತದೆ. ಇದರಲ್ಲಿ ಅಚ್ಚರಿ ಪಡುವಂತದ್ದು ಏನೂ ಇಲ್ಲ ಎನ್ನುತ್ತಾರೆ.

ಇದನ್ನೂ ಓದಿ | Celebrity Fashion | ಪುರುಷರಲ್ಲೂ ಇರಬೇಕು ಫ್ಯಾಷನ್‌ ಸೆನ್ಸ್‌

ಬದಲಾದ ಅಲಿಯಾ ಡ್ರೆಸ್‌ಕೋಡ್

ಇತ್ತೀಚೆಗೆ ಅಲಿಯಾ ಧರಿಸಿದ್ದ ಬಹುತೇಕ ಉಡುಪುಗಳು ಫ್ಯಾಷೆನಬಲ್‌ ಆಗಿದ್ದವು ಮಾತ್ರವಲ್ಲ, ಪ್ರೆಗ್ನೆನ್ಸಿ ಸಮಯಕ್ಕೆ ಹೇಳಿಮಾಡಿಸಿದಂತಿದ್ದವು. ಉದಾಹರಣೆಗೆ, ಸಿನಿಮಾ ಪ್ರಮೋಷನ್‌ವೊಂದರಲ್ಲಿ ಧರಿಸಿದ್ದ ಕುರ್ತಾ ಕೂಡ ಪ್ರೆಗ್ನೆನ್ಸಿ ಬಂಪನ್ನು ಹೈಲೈಟ್‌ ಮಾಡದಂತಿತ್ತು. ದೊಗಲೆಯಾಗಿತ್ತು ಮಾತ್ರವಲ್ಲದೇ ಸೆಂಟರ್‌ನಲ್ಲಿ ಫ್ಲೀಟ್ಸ್‌ ಹೊಂದಿತ್ತು. ಇನ್ನೊಮ್ಮೆ ಧರಿಸಿದ್ದ ಟೈಯಿಂಗ್‌ ಶರ್ಟ್ ಕೂಡ ಫ್ರೀ ಸೈಝ್‌ನದ್ದಾಗಿತ್ತು. ಕ್ಯಾಶುವಲ್‌ ಲುಕ್‌ಗಾಗಿ ಧರಿಸಿದ್ದ ಓವರ್‌ ಸೈಝ್‌ನ ಡೆನೀಮ್‌, ಟ್ಯಾಟರ್ಡ್ ಜೀನ್ಸ್‌ ಅಲಿಯಾಗೆ ಕಂಫರ್ಟಬಲ್‌ ಫೀಲ್‌ ನೀಡಿತ್ತು. ಇವೆಲ್ಲದರ ನಡುವೆ ಧರಿಸಿದ್ದ ಸೀಕ್ವಿನ್ಸ್‌ ಡ್ರೆಸ್‌ ಅದರ ಮೇಲೆ ಧರಿಸಿದ ಜಾಕೆಟ್‌ ಕಂಪ್ಲೀಟ್‌ ಪ್ರೆಗ್ನೆನ್ಸಿ ಲುಕ್‌ಗೆ ಸಾಥ್‌ ನೀಡಿತ್ತು. ಸಿನಿಮಾ ಪ್ರಮೋಷನ್‌ ಟೈಮ್‌ನಲ್ಲಿ ಕಂಡುಬಂದ ವ್ರಾಪ್‌ ಡ್ರೆಸ್‌ನಲ್ಲಿ ಪ್ರೆಗ್ನೆನ್ಸಿ ಹೈಲೈಟಾದರೂ ಅಲಿಯಾಗೆ ಎಲಿಗೆಂಟ್‌ ಲುಕ್‌ ನೀಡಿತ್ತು.

ಕರೀನಾ ನಂತರ ಅಲಿಯಾ

ಪ್ರೆಗ್ನೆನ್ಸಿ ಸಮಯದಲ್ಲಿ ನಟಿ ಕರೀನಾ ಕಪೂರ್‌ ಖಾನ್‌ ಕೂಡ ಹೀಗೆಯೇ ತಮ್ಮದೇ ಆದ ಔಟ್‌ಫಿಟ್‌ ಟ್ರೆಂಡ್‌ ಹುಟ್ಟುಹಾಕಿ ಟ್ರೆಂಡ್‌ ಸೆಟ್ಟರ್‌ ಆಗಿದ್ದರು. ಇದೀಗ ಅಲಿಯಾ ಭಟ್‌ ಸರದಿ. ಈ ಸಮಯದಲ್ಲಿ ಎಲ್ಲಿಯವರೆಗೂ ಕಂಫರ್ಟಬಲ್‌ ಆಗಿರುತ್ತೇನೋ ಅಲ್ಲಿಯವರೆಗೂ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿರುವ ಅಲಿಯಾ, ಇದೀಗ ತಮ್ಮದೇ ಆದ ಪ್ರೆಗ್ನೆನ್ಸಿ ಫ್ಯಾಷನ್‌ ಹುಟ್ಟುಹಾಕಿ ಟ್ರೆಂಡ್‌ ಸೆಟ್ಟರ್‌ ಆಗಿದ್ದಾರೆ.

ಇದನ್ನೂ ಓದಿ | Celebrity Fashion | ಪುರುಷರಲ್ಲೂ ಇರಬೇಕು ಫ್ಯಾಷನ್‌ ಸೆನ್ಸ್‌

Exit mobile version