-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಅನು ಪ್ರಭಾಕರ್ ಮುಖರ್ಜಿ ರಿಯಾಲಿಟಿ ಶೋಗಾಗಿ ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಎಂದಿನಂತೆ ಸೀರೆಯಲ್ಲಿ ಕಾಣಿಸಿಕೊಂಡಿರುವ ಇವರ ಲುಕ್‌ಗೆ (Stars Fashion) ಟ್ರೆಡಿಷನಲ್ ಬ್ಲಾಕ್ ಮೆಟಲ್ ಜ್ಯುವೆಲರಿಗಳು ಸಾಥ್ ನೀಡಿವೆ. ಅವರನ್ನು ಮತ್ತಷ್ಟು ಸುಂದರವಾಗಿ ಬಿಂಬಿಸಿವೆ.
ರಿಯಾಲಿಟಿ ಶೋವೊಂದರ ಲುಕ್ಕನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅನಾವರಣ ಮಾಡಿರುವ ಅನು ಅವರು ಎವರ್‌ಗ್ರೀನ್ ಸೀರೆ ಸುಂದರಿ ಎಂದರೂ ಅತಿಶಯೋಕ್ತಿಯಾಗದು. ಮೊದಲಿನಿಂದಲೂ ಸೀರೆಯಲ್ಲಿ ಮನಮೋಹಕವಾಗಿ ಕಾಣಿಸುವ ಇವರ ಈ ಬಾರಿ ಕೊಂಚ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಸೀರೆಯ ಸ್ಟೈಲಿಂಗನ್ನು ಸ್ಟೈಲಿಸ್ಟ್ ಶಿಲ್ಪಾ ಹೆಗಡೆ ಹಾಗೂ ರೋಷನ್ ಅಯ್ಯಪ್ಪ ಮಾಡಿದ್ದಾರೆ. ರಾಕೇಶ್ ಅವರ ಸುಂದರ ಫೋಟೋಗ್ರಫಿ ಇದಕ್ಕಿದೆ.
ಇದನ್ನೂ ಓದಿ | Stars Fashion | ನೈಕಾ ಬ್ಯೂಟಿ ಅವಾರ್ಡ್‌ನಲ್ಲಿ ಬಾಲಿವುಡ್ ತಾರೆಯರು ಹೇಗೆಲ್ಲ ಮಿನುಗಿದರು!
ಸಾದಾ ಸೀರೆಯಲ್ಲೂ ಸುಂದರ
ಸಾದಾ ರೆಡ್ ಸೀರೆಗೆ ಗ್ರೇ ವರ್ಣದ ಸ್ವಿಕ್ವಿನ್ಸ್ ಬ್ಲೌಸ್ ಧರಿಸಿರುವ ಅನು ಮುಖರ್ಜಿ ಸಾದಾ ಸಿಂಪಲ್ ಸೀರೆಯಲ್ಲೂ ಮನಮೋಹಕವಾಗಿ ಕಾಣಿಸಿದ್ದಾರೆ. ಅಂದಹಾಗೆ, ಅನು ಮುಖರ್ಜಿ ಸೀರೆಯಲ್ಲಿ ಸುಂದರವಾಗಿ ಕಾಣಿಸುವುದು ಇದು ಮೊದಲೇನಲ್ಲ! ಹೆಚ್ಚಾಗಿ ಅವರು ವೆಸ್ಟರ್ನ್ ಉಡುಪುಗಳಿಗಿಂತ ಸೀರೆಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ. ಸೀರೆಗಳಲ್ಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.
ಸೌಂದರ್ಯಕ್ಕೆ ಸಾಥ್ ನೀಡಿದ ಬ್ಲ್ಯಾಕ್ ಮೆಟಲ್ ಜ್ಯುವೆಲರಿ
ಅನು ಅವರ ಸೀರೆಗೆ ಹಾಗೂ ಅವರ ಸೌಂದರ್ಯಕ್ಕೆ ಅವರು ಧರಿಸಿರುವ ಬ್ಲ್ಯಾಕ್ ಮೆಟಲ್ ಜ್ಯುವೆಲರಿಗಳು ಸಾಥ್ ನೀಡಿವೆ. ನೋಡಲು ಆಕರ್ಷಕವಾಗಿ ಬಿಂಬಿಸಿವೆ. ಫ್ಲೋರಲ್ ಮೂಗಿನ ಬೊಟ್ಟು, ಕೈಗಳಿಗೆ ಧರಿಸಿರುವ ಅಗಲವಾದ ಎಥ್ನಿಕ್ ಲುಕ್ ನೀಡುವ ಉಂಗುರ ಹಾಗೂ ಕಿವಿಗೆ ಧರಿಸಿರುವ ಚಿಕ್ಕ ಮಿರರ್‌ಗಳಿರುವಂತೆ ಭಾಸವಾಗುವ ಬಿಗ್ ಜುಮ್ಕಾ, ಹಣೆಗಿಟ್ಟ ಬಿಂದಿ ಅವರ ಲುಕ್ ಅನ್ನು ಇಮ್ಮಡಿಗೊಳಿಸಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಅವರ ಮುಗುಳ್ನಗೆ ಇಡೀ ಸ್ಟೈಲ್ ಸ್ಟೇಟ್‌ಮೆಂಟನ್ನು ಆಕರ್ಷಕವಾಗಿಸಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಖಾಸಗಿ ವಾಹಿನಿಯೊಂದರ ಕಾರ್ಯಕ್ರಮಕ್ಕಾಗಿ ಈ ಔಟ್‌ಲುಕ್‌ನಲ್ಲಿ ಕಾಣಿಸಿಕೊಂಡಿರುವ ಅನು ಅವರ ಈ ಟ್ರೆಡಿಷನಲ್ ಲುಕ್‌ಗೆ ಫ್ಯಾಷನ್ ವಿಮರ್ಶಕರು ಫುಲ್ ಮಾರ್ಕ್ಸ್ ನೀಡಿದ್ದಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ | Fashion News | ಬೆರಗು ಮೂಡಿಸಿದ ಮಿಲಾನ್ ಫ್ಯಾಷನ್ ವೀಕ್‌ನ ಡಿಸೈನರ್‌ವೇರ್ಸ್