Site icon Vistara News

Stars Festive Fashion | ಟ್ರೆಡಿಷನಲ್‌ ಉಡುಗೆಯಲ್ಲಿ ಓಣಂ ಹಬ್ಬ ಆಚರಿಸಿದ ತಾರೆಯರು

Stars Festive Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಓಣಂ ಹಬ್ಬವನ್ನು ತಾರೆಯರು ಸಾಂಪ್ರದಾಯಿಕ (Stars Festive Fashion) ಉಡುಗೆ ಧರಿಸಿ ಆಚರಿಸಿಕೊಂಡಿದ್ದಾರೆ. ನಟಿಯರಾದ ಸಾನಿಯಾ ಅಯ್ಯಪ್ಪನ್‌, ಮಂಜು ವಾರಿಯರ್‌, ಪ್ರಿಯಾ ವಾರಿಯರ್‌, ಶಮ್ನಾ ಕಾಸೀಮ್‌, ಪ್ರಿಯಾಮಣಿ, ಭಾವನಾ, ಇತಿ ಆಚಾರ್ಯಾ, ಅನುಪಮಾ ಪರಮೇಸ್ವರನ್‌ ಸೇರಿದಂತೆ ಕೇರಳದ ನಟಿಮಣಿಯವರು ಮಾತ್ರವಲ್ಲ ಬಹುತೇಕ ದಕ್ಷಿಣ ಭಾರತದ ತಾರೆಯರು ಕೇರಳದ ಟ್ರೆಡಿಷನಲ್‌ ಔಟ್‌ಫಿಟ್‌ ಹಾಗೂ ಸೀರೆಯಲ್ಲಿ ಓಣಂ ಹಬ್ಬವನ್ನು ಸೆಲೆಬ್ರೆಟ್‌ ಮಾಡಿದ್ದಾರೆ.

ನೆರಿಯುಟ್ಟುಮ್‌ನಲ್ಲಿ ಸಂಭ್ರಮ
ಕೇರಳದ ಟ್ರೆಡಿಷನಲ್‌ ಸೀರೆಗಳಲ್ಲಿಒಂದು ಮುಂಡುಂ ನೆರಿಯುಟ್ಟುಮ್‌. ಇದು ಟು ಪೀಸ್‌ ಸಾರಿ. ‘ಮುಂಡು’ ಅನ್ನು ಸೊಂಟಕ್ಕೆ ಸುತ್ತಿಕೊಂಡರೆ ಅದರ ಮೇಲೆ ಹಾಫ್‌ ಸಾರಿ ತರಹ ಹಾಕುವುದೇ ನೆರಿಯುಟ್ಟುಮ್‌. ಹಬ್ಬ ಹರಿದಿನಗಳ ಸಂದರ್ಭದಲ್ಲಿಗೋಲ್ಡನ್‌ ಇಲ್ಲವೇ ಇನ್ನಿತರ ಡಿಸೈನ್‌ ಬಾರ್ಡರ್‌ಗಳುಳ್ಳ ಮುಂಡುಂ ನೆರಿಯುಟ್ಟುಮ್‌ ಉಡುತ್ತಾರೆ. ಈ ಟು ಪೀಸ್‌ ಸೀರೆಯಲ್ಲಿ ನಟಿ ಶಮ್ನಾ ಕಾಸಿಂ ಸೇರಿದಂತೆ ನಾನಾ ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದಾರೆ.

ನಟಿ, ಇತಿ ಆಚಾರ್ಯಾ, ನಟಿ ಅನುಪಮಾ ಪರಮೇಸ್ವರನ್‌

ಕಸವು ಸೀರೆಯಲ್ಲಿ ನಟಿಯರು
ಇನ್ನು, ಶ್ವೇತ ವರ್ಣದ ಹಾಗೂ ಐವರಿ ಶೇಡ್‌ನ ಗೋಲ್ಡನ್‌ ಬಾರ್ಡರ್‌ನ ಕಸವು ಸೀರೆಯಲ್ಲಿ ಸ್ಯಾಂಡಲ್‌ವುಡ್‌ ನಟಿ ಇತಿ ಆಚಾರ್ಯ ಸೇರಿದಂತೆ ಸಾಕಷ್ಟು ಮಂದಿ ಸಂಭ್ರಮಿಸಿದ್ದಾರೆ.

ಸಿಲ್ಕ್‌ ಪಂಚೆಯಲ್ಲಿ ನಟರು
ಇನ್ನು ನಟರ ವಿಷಯಕ್ಕೆ ಬಂದಲ್ಲಿ, ಹಿರಿಯ ನಟ ಮೋಹನ್‌ಲಾಲ್‌ ಸಿಲ್ಕ್ ಶರ್ಟ್ ಹಾಗೂ ಪಂಚೆಯಲ್ಲಿ ಹಬ್ಬ ಆಚರಿಸಿದ್ದಾರೆ. ಇವರು ಮಾತ್ರವಲ್ಲ, ದಕ್ಷಿಣ ಭಾರತದ ಇತರೇ ಸಿನಿಮಾ ನಟರು ಕೂಡ ಎಥ್ನಿಕ್‌ ಉಡುಗೆ ಧರಿಸಿದ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿ ಅಭಿಮಾನಿಗಳಿಗೆ ಹಾರೈಸಿದ್ದಾರೆ.

ನಟ, ಮೋಹನ್‌ಲಾಲ್‌
Exit mobile version