Site icon Vistara News

Stars Festival fashion: ಗಣೇಶ ಹಬ್ಬದ ಸೆಲೆಬ್ರೇಷನ್‌ಗೆ ಟ್ರೆಡಿಷನಲ್‌ ಲುಕ್‌ನಲ್ಲಿ ಮಿನುಗಿದ ತಾರೆಯರು

sharmila mandre Bhavya gowda

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಗಣೇಶನ ಹಬ್ಬದಂದು ತಾರೆಯರೆಲ್ಲರೂ (Stars Festival fashion) ಕಂಪ್ಲೀಟ್‌ ಟ್ರೆಡಿಷನಲ್‌ ಲುಕ್‌ನಲ್ಲಿ ಮಿಂಚಿದ್ದಾರೆ. ಹೌದು, ಬಾಲಿವುಡ್‌, ಸ್ಯಾಂಡಲ್‌ವುಡ್‌ ಸೇರಿದಂತೆ ಕಿರುತೆರೆ ಸೆಲೆಬ್ರೆಟಿಗಳು, ಗಣೇಶ ಚತುರ್ಥಿ ಸೆಲೆಬ್ರೇಷನ್‌ನಲ್ಲಿ ನಾನಾ ಬಗೆಯ ಸಾಂಪ್ರದಾಯಿಕ ರೇಷ್ಮೆ ಸೀರೆ, ಲಂಗ-ದಾವಣಿ ಸೇರಿದಂತೆ ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಟ್ರೆಡಿಷನಲ್‌ ಸೀರೆ-ಲಂಗ-ದಾವಣಿಯಲ್ಲಿ ಮಿನುಗಿದ ತಾರೆಯರಿವರು

ನಟಿಯರಾದ ಅಮೂಲ್ಯ, ಹರ್ಷಿಕಾ ಪೊಣಚ್ಚ, ಶರ್ಮಿಳಾ ಮಾಂಡ್ರೆ, ಪ್ರಿಯಾಂಕಾ ಉಪೇಂದ್ರ, ಭವ್ಯಾ ಗೌಡ, ಸ್ಪಂದನಾ ಸೋಮಣ್ಣ, ನಿಶಾ, ಜ್ಯೋತಿ ರೈ, ಮೋಕ್ಷಿತಾ ಪೈ, ಶಿಲ್ಪಾ ಮಂಜುನಾಥ್‌ ಸೇರಿದಂತೆ ನಾನಾ ಹಿರಿ ತೆರೆ ಹಾಗೂ ಕಿರುತೆರೆ ನಟಿಯರು ಗ್ರ್ಯಾಂಡ್‌ ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಂಡು ಸೆಲೆಬ್ರೇಟ್‌ ಮಾಡಿದರು. ಹೆಚ್ಚಿನ ನಟಿಯರು ಬಾರ್ಡರ್‌ ರೇಷ್ಮೆ ಸೀರೆ ಜೊತೆಗೆ ಟ್ರೆಡಿಷನಲ್‌ ಲುಕ್‌ ನೀಡುವ ಜಡೆಯಲ್ಲಿ ಹಾಗೂ ಎಥ್ನಿಕ್‌ ಹೇರ್‌ಸ್ಟೈಲ್‌ನಲ್ಲಿ ಸುಂದರವಾಗಿ ಕಾಣಿಸಿಕೊಂಡರು. ಎಥ್ನಿಕ್‌ ಮೇಕಪ್‌ ಜತೆಗೆ ಹಣೆಗೆ ಕುಂಕುಮ ಇಟ್ಟು ಭಾರತೀಯ ನಾರಿಯರಂತೆ ಕಾಣಿಸಿಕೊಂಡರು. ಕೆಲವರು ಗಣೇಶನೊಂದಿಗೆ ಪೂಜೆ ಮಾಡುವ ಹಾಗೂ ನಿಂತಿರುವ ಫೋಟೊಗಳಲ್ಲಿ ಕಾಣಿಸಿಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು, ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು. ಇನ್ನು ಬಾಲನಟಿ ಅಂಕಿತಾ ಜಯರಾಮ್‌, ಅನ್ಯಾ ಶೆಟ್ಟಿ ಸೇರಿದಂತೆ ಸಾಕಷ್ಟು ಹಿರಿ ತೆರೆ ಹಾಗೂ ಕಿರಿತೆರೆ ನಟಿಯರು ಹಬ್ಬದ ಲುಕ್‌ ನೀಡುವ ಬ್ಯೂಟಿಫುಲ್‌ ಲಂಗ-ದಾವಣಿಯಲ್ಲಿ ಕಂಗೊಳಿಸಿದರು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ʼಭಾರತʼ ಕೇವಲ ಹೆಸರಲ್ಲ, ಅದೊಂದು ಭಾವನೆ, ಅನನ್ಯ ಪರಂಪರೆ

ಅನನ್ಯಾ ಪಾಂಡೆ, ಶಿಲ್ಪಾ ಶೆಟ್ಟಿ

ಬಾಲಿವುಡ್‌ ನಟಿಯರ ಎಥ್ನಿಕ್‌ವೇರ್ಸ್‌

ಗಣೇಶನ ಹಬ್ಬ ಬಾಲಿವುಡ್‌ನಲ್ಲಿ ತೀರಾ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದಕ್ಕೆ ಪೂರಕ ಎಂಬಂತೆ, ನಟಿ ಶಿಲ್ಪಾ ಶೆಟ್ಟಿ, ಅನನ್ಯಾ ಪಾಂಡೇ, ಶಮಿತಾ ಶೆಟ್ಟಿ, ಸೋನಾಲಿ, ಗುರ್‌ಮಿತ್‌, ಇಶಾ, ಶ್ರದ್ದಾ, ಕೃತಿ, ಸಲ್ಮಾನ್‌ ಖಾನ್‌ ಕುಟುಂಬದ ಅರ್ಪಿತಾ ಖಾನ್‌ ಬಳಗ, ನಿರ್ದೇಶಕಿ ಏಕ್ತಾ ಕಪೂರ್‌ ಸೇರಿದಂತೆ ಬಹುತೇಕರು ಸೆಲೆಬ್ರೇಷನ್‌ನಲ್ಲಿ, ಪ್ರಯೋಗಾತ್ಮಕ ಎಥ್ನಿಕ್‌ವೇರ್‌ಗಳನ್ನು ಧರಿಸಿ, ನಯಾ ಫ್ಯಾಷನ್‌ ಟ್ರೆಂಡ್‌ಗೆ ನಾಂದಿಯಾಡಿದರು.

ಮೋಕ್ಷಿತಾ ಪೈ, ಗುರ್ಮೀತ್ ಚೌಧರಿ

ತಾರೆಯರಿಂದ ಸ್ಪೂರ್ತಿ

“ಗಣೇಶನ ಹಬ್ಬದ ಸಂಭ್ರಮ ತಾರೆಯರನ್ನು ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣುವಂತೆ ಮಾಡಿದೆ. ಇದು ಸ್ಪೂರ್ತಿದಾಯಕ. ಇದನ್ನು ನೋಡಿದ ಅಭಿಮಾನಿಗಳು ತಾವು ಕೂಡ ಇದೇ ರೀತಿ ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ ಹಾಗೂ ಕಾಣಿಸಿಕೊಳ್ಳುತ್ತಾರೆ. ಇದು ನಮ್ಮ ಸಂಸ್ಕೃತಿಯನ್ನು ಮುನ್ನೆಡೆಸಲು ಸಹಕಾರಿ. ಹಾಗಾಗಿ ಹಬ್ಬಗಳು ನಮ್ಮತನ ಹಾಗೂ ಕಲ್ಚರ್‌ ಎತ್ತಿ ಹಿಡಿಯುತ್ತವೆ. ತಾರೆಯರ ಮೂಲಕ ಟ್ರೆಡಿಷನಲ್‌ ಸೀರೆ ಹಾಗೂ ಉಡುಗೆ-ತೊಡುಗೆಗಳನ್ನು ಪ್ರಮೋಟ್‌ ಮಾಡುತ್ತವೆ. ಇದು ಶ್ಲಾಘನೀಯ” ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕಿ ವಿದ್ಯಾ ವಿವೇಕ್‌.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

Exit mobile version