Site icon Vistara News

Streetwear Fashion: ಅಲ್ಟ್ರಾ ಮಾಡರ್ನ್ ಯುವತಿಯರ ವಾರ್ಡ್‌ರೋಬ್ ಸೇರಿದ ರಿವರ್ಸ್ ಪ್ಯಾಚ್‌ವರ್ಕ್ ಜೀನ್ಸ್‌ ಪ್ಯಾಂಟ್‌

Reverse Patchwork Jeans

ಶೀಲಾ ಸಿ. ಶೆಟ್ಟಿ, ಬೆಂಗಳೂರು

(ಫೋಟೋಗ್ರಫಿ: ವಿವೇಕ್‌ ದೇಸಾಯಿ)

ನೋಡಿದರೇ ಹರಿದ ಜಾಗಕ್ಕೆ ಪ್ಯಾಚ್‌ ಹಾಕಿದಂತೆ ಕಾಣುವ, ಚಿಂದಿ ಬಟ್ಟೆಯನ್ನು ಜೋಡಿಸಿದಂತೆ ಕಾಣುವ ಸ್ಟ್ರೀಟ್‌ವೇರ್‌ ರಿವರ್ಸ್ ಪ್ಯಾಚ್‌ವರ್ಕ್ (Streetwear Fashion) ಜೀನ್ಸ್‌ ಪ್ಯಾಂಟ್‌ಗಳು ಅಲ್ಟ್ರಾ ಮಾಡರ್ನ್ ಯುವತಿಯರ ಮನ ಗೆದ್ದಿದ್ದು, ಅವರನ್ನು ಸವಾರಿ ಮಾಡತೊಡಗಿವೆ. ಸದಾ ಸೀದಾ ಆಗಿದ್ದ ಜೀನ್ಸ್‌ ಪ್ಯಾಂಟ್‌ ಟೊರ್ನ್ ರೂಪದಲ್ಲಿ ಕೆಲವರನ್ನು ಒಲಿಸಿಕೊಂಡ ನಂತರ, ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಮಾಡರ್ನ್ ಯುವತಿಯರ ಕಾಲುಗಳನ್ನು ಬಳಸಿವೆ.

ಹೌದು. ಜಾಗತೀಕ ಮಟ್ಟದಲ್ಲಿ ಜೀನ್ಸ್‌ ಪ್ಯಾಂಟ್‌ ಎಂಬುದು ಯೂನಿವರ್ಸಲ್‌ ಡ್ರೆಸ್‌ಕೋಡ್‌ನಲ್ಲಿ ಮೊದಲಿನಿಂದಲೂ ಇದೆ. ಇದೀಗ ಫ್ಯಾಷನ್‌ಲೋಕ ಈ ಜೀನ್ಸ್‌ ಪ್ಯಾಂಟ್‌ಗಳಿಗೂ ಹೊಸ ಹೊಸ ರೂಪ ನೀಡುತ್ತಾ ಬಂದಿದ್ದು, ಸಾಕಷ್ಟು ಪ್ರಯೋಗಾತ್ಮಕ ಡಿಸೈನ್‌ಗಳನ್ನು ಕೂಡ ಪರಿಚಯಿಸಿದೆ. ಅವುಗಳಲ್ಲಿ ಕೆಲವು ಹಿಟ್‌ ಆಗಿದ್ದು, ಇನ್ನು ಕೆಲವು ಕಾಲ ಕಳೆದಂತೆ ತೆರೆಮರೆ ಸೇರಿವೆ. ಇವುಗಳಲ್ಲೆಲ್ಲಾ ಟೊರ್ನ್ ಜೀನ್ಸ್‌ ಹೊರತುಪಡಿಸಿದಲ್ಲಿ, ಇದೀಗ ಯುವತಿಯರನ್ನು ಸೆಳೆಯುತ್ತಿರುವ ಸಾಲಿಗೆ ರಿವರ್ಸ್ ಪ್ಯಾಚ್‌ವರ್ಕ್ ಜೀನ್ಸ್‌ ಪ್ಯಾಂಟ್‌ಗಳು ಸೇರಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ರಿವರ್ಸ್ ಪ್ಯಾಚ್‌ವರ್ಕ್ ಜೀನ್ಸ್‌ನಲ್ಲಿ ಮಾಳವಿಕಾ ರಾಜ್‌

ಇದಕ್ಕೆ ಪೂರಕ ಎಂಬಂತೆ, ಪ್ರಿಯಾಂಕಾ ಸ್ಟೈಲಿಂಗ್‌ನಲ್ಲಿ, ನಟಿ ಮಾಳವಿಕಾರಾಜ್‌ ಧರಿಸಿರುವ ಈ ಶೈಲಿಯ ಜೀನ್ಸ್‌ ಪ್ಯಾಂಟ್‌ಗಳು ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡಿವೆ.

ಇದನ್ನೂ ಓದಿ: Wedding Lehenga Fashion: ವೆಡ್ಡಿಂಗ್‌ ಸೀಸನ್‌ ಫ್ಯಾಷನ್‌ಗೆ ಲಗ್ಗೆ ಇಟ್ಟ ಆಫ್‌ ಶೋಲ್ಡರ್ ಬ್ಲೌಸ್‌ ಫ್ಲೋರಲ್‌ ಲೆಹೆಂಗಾ

ಏನಿದು ರಿವರ್ಸ್ ಪ್ಯಾಚ್‌ವರ್ಕ್ ಜೀನ್ಸ್‌ ಪ್ಯಾಂಟ್‌

ಜೀನ್ಸ್‌ ಪ್ಯಾಂಟ್‌ನ ಕಾಂಟ್ರಾಸ್ಟ್‌ ಶೇಡ್‌ಗಳ ತುಂಡು ಬಟ್ಟೆಗಳು ಆಯಾ ಆಕಾರಕ್ಕೆ ಅನುಗುಣವಾಗಿ ಪ್ಯಾಂಟನ್ನು ಆವರಿಸಿಕೊಂಡಿರುತ್ತವೆ. ನೋಡಲು ಇವು ಅಕ್ಕ-ಪಕ್ಕ ಇರಿಸಿ ಹೊಲೆದಂತಿರುತ್ತವೆ. ಕೆಲವು ಫುಲ್‌ ಸ್ಟ್ರೇಟ್‌ ಕಟ್‌ನಲ್ಲಿ ವಿನ್ಯಾಸಗೊಂಡಿದ್ದರೇ ಕೆಲವು ಚೌಕಾಕಾರ, ಕ್ರಿಸ್‌ ಕ್ರಾಸ್‌, ಹೀಗೆ ನಾನಾ ಶೇಪ್‌ಗಳಲ್ಲಿ ಇವುಗಳ ವಿನ್ಯಾಸ ಕಾಣಬಹುದು. ಈ ರಿವರ್ಸ್ ಪ್ಯಾಚ್‌ವರ್ಕ್ ಡಿಸೈನ್‌ನಲ್ಲಿ ಒಳಗಿನ ಫ್ಯಾಬ್ರಿಕ್‌ ಮೇಲೆ ಹೊಲೆದಿರುವಂತೆ ಕಾಣಿಸುತ್ತದೆ. ಆದರೆ, ಇದು ವಿನ್ಯಾಸ ಮಾತ್ರ, ಈ ಬಗೆಯ ಜೀನ್ಸ್‌ ಪ್ಯಾಂಟ್‌ಗಳು ಹೆಚ್ಚಾಗಿ ಅಲ್ಟ್ರಾ ಮಾಡರ್ನ್ ಹುಡುಗಿಯರು ಧರಿಸಲು ಇಷ್ಟಪಡುತ್ತಾರೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಇನ್ನು, ದೊಡ್ಡ ದೊಡ್ಡ ಬ್ರ್ಯಾಂಡ್‌ಗಳು ಈ ವಿನ್ಯಾಸದ ಜೀನ್ಸ್‌ ಪ್ಯಾಂಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡುತ್ತಿವೆ. ದುಬಾರಿ ಬೆಲೆ ನಮೂದಿಸಿವೆ. ಇನ್ನುಕೆಲವು ಲೋಕಲ್‌ ಬ್ರ್ಯಾಂಡ್‌ಗಳು ಕೈಗೆಟಕುವ ದರದಲ್ಲಿ ರಿಕ್ರಿಯೇಷನ್‌ ಹೆಸರಲ್ಲಿ ಬಿಡುಗಡೆಗೊಳಿಸಿವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

ರಿವರ್ಸ್ ಪ್ಯಾಚ್‌ವರ್ಕ್ ಜೀನ್ಸ್‌ ಪ್ಯಾಂಟ್‌ ಆಯ್ಕೆಗೆ 3 ಟಿಪ್ಸ್‌

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

Exit mobile version