-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆ ಹೇರ್ ಸ್ಟೈಲ್ ಫ್ಯಾಷನ್‌ನಲ್ಲಿ ಇದೀಗ ಕಲರ್‌ಫುಲ್ ಹೇರ್ ಸ್ಟ್ರೀಕ್ಸ್ (Summer Hairstyle) ಎಂಟ್ರಿ ನೀಡಿದೆ. ನೋಡಲು ಫಂಕಿ ಲುಕ್‌ನೊಂದಿಗೆ ಬಿಂದಾಸ್ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ಸಾಥ್ ನೀಡುವ ಈ ಸ್ಟ್ರೀಕ್ಸ್ ಸದ್ಯಕ್ಕೆ ಬಿಂದಾಸ್ ಯುವತಿಯರ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ಸೇರಿದೆ.
ಸಮ್ಮರ್‌ಗೆ ಸೂಟ್ ಆಗುವಂತೆ ಹಾಗೂ ಸನ್‌ಡ್ರೆಸ್‌ಗಳಿಗೆ ಮ್ಯಾಚ್ ಆಗುವಂತೆ ಈ ಹೇರ್‌ಸ್ಟೈಲ್ ಟ್ರೆಂಡಿಯಾಗಿದೆ. ಸ್ವಲ್ಪ ಟ್ರೆಡಿಷನಲ್ ಆಗಿರುವ ಹುಡುಗಿಯರು ಬರ್ಗಾಂಡಿ, ಲೈಟ್ ರೆಡ್ ವೈನ್, ಬ್ರೌನಿಶ್ ಸ್ಟ್ರೀಕ್ಸ್‌ಗೆ ಮೊರೆ ಹೋದರೇ, ಸ್ಟೈಲಿಶ್ ಹುಡುಗಿಯರು ಪರ್ಪಲ್, ಪಿಂಕ್, ಡಾರ್ಕ್ ಪೀಚ್‌ನಂತಹ ಶೇಡ್ಸ್‌ಗೆ ಸೈ ಎಂದಿದ್ದಾರೆ ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್‌ಗಳು.
ಹೇರ್ ಸೈಡ್ ಸ್ಟ್ರೀಕ್ಸ್
ಕೇವಲ ಕ್ರೌನ್ ಏರಿಯಾದಲ್ಲಿ ಮಾತ್ರ ಸ್ಟ್ರೀಕ್ಸ್ ಮಾಡಿಸಿಕೊಂಡಲ್ಲಿ ಸೈಡ್ ಸ್ಟ್ರೀಕ್ಸ್‌ನಂತೆ ಕಾಣುವುದು. ನೀವು ಸ್ಟ್ರೀಕ್ಸ್ ಮಾಡಿಸುವಾಗ ಕಸ್ಟಮೈಸ್ ಕೂಡ ಮಾಡಬಹುದು ಎಂದು ಸಲಹೆ ನೀಡುತ್ತಾರೆ ಹೇರ್‌ಸ್ಟೈಲಿಸ್ಟ್ಸ್.
ಗ್ಲೋಬಲ್ ಸ್ಟ್ರೀಕ್ಸ್
ಇನ್ನು ಇಡೀ ಕೂದಲ ಮಧ್ಯೆ ಮಧ್ಯೆ ಸ್ಟ್ರೀಕ್ಸ್ ಕಾಣಿಸಬೇಕಾದಲ್ಲಿ ಗ್ಲೋಬಲ್ ಕಲರಿಂಗ್‌ಗೆ ಸೂಟ್ ಆಗುವ ಸ್ಟ್ರೀಕ್ಸ್‌ಗೆ ಮೊರೆ ಹೋಗಬಹುದು. ಅಷ್ಟೇಕೆ! ನಿಮ್ಮ ಚಾಯ್ಸ್‌ನ ಕಲರ್ ಕೂಡ ಸೆಲೆಕ್ಟ್ ಮಾಡಬಹುದು ಎನ್ನುತ್ತಾರೆ ಹೇರ್ ಸ್ಟೈಲಿಸ್ಟ್ ರಾಣಿ. ಅವರ ಪ್ರಕಾರ, ಆಯಾಕೂದಲಿನ ಕಲರ್ ಟೋನ್‌ಗೆ ಮ್ಯಾಚ್ ಆಗುವಂತೆ ಸ್ಟ್ರೀಕ್ಸ್ ಕಲರಿಂಗ್ ಮಾಡಿದಲ್ಲಿ ನೋಡಲು ಆಕರ್ಷಕವಾಗಿ ಕಾಣುವುದು ಎನ್ನುತ್ತಾರೆ.
ಪಾಪುಲರ್ ಆದ ಪಿಂಕ್-ಪರ್ಪಲ್ ಸ್ಟ್ರೀಕ್ಸ್
ಬಿಂದಾಸ್ ಹುಡುಗಿಯರು ಹಾಗೂ ಫ್ಯಾಷೆನಬಲ್ ಹುಡುಗಿಯರು ಕೂದಲಿನ ಮಧ್ಯೆ ಪಿಂಕ್ ಹಾಗೂ ಪರ್ಪಲ್ ಸ್ಟ್ರೀಕ್ಸ್ ಮಾಡಿಸುವುದು ಇದೀಗ ಸ್ಟೈಲಿಂಗ್‌ನಲ್ಲಿ ಸೇರಿದೆ. ಇದು ಅಲ್ಟ್ರಾ ಮಾಡರ್ನ್ ಹುಡುಗಿಯರ ಚಾಯ್ಸ್ ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್‌ಗಳು.
ಇದನ್ನೂ ಓದಿ: Pervez Musharraf : ಧೋನಿಯ ಹೇರ್‌ಸ್ಟೈಲ್ ಹೊಗಳಿದ್ದ ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್
ಸ್ಟ್ರೀಕ್ಸ್ ಪ್ರಿಯರು ಗಮನದಲ್ಲಿಟ್ಟುಕೊಳ್ಳಬೇಕಾದ 5 ಅಂಶಗಳು
- ಕೂದಲಿನ ಅಳತೆಗೆ ತಕ್ಕಂತೆ ಸ್ಟ್ರೀಕ್ಸ್ ಸೈಡ್‌ನಲ್ಲಿಕಾಣುವಂತೆ ಮಾಡಿ. ನಡುವೆ ಅಂತರವಿರಲಿ.
- ಹಣೆಯ ಭಾಗದಲ್ಲಿಬಿಡುವ ಕೂದಲು ಗಿಡ್ಡ ಹಾಗೂ ಆಕರ್ಷಕವಾಗಿರಬೇಕು. ಸ್ಟ್ರೀಕ್ಸ್ ಹೈಲೈಟ್ ಆಗಬೇಕು.
- ಸ್ಟ್ರೀಕ್ಸ್ ಸೈಡ್ ಲಾಕ್‌ಗಳು ವೈಬ್ರೆಂಟ್ ಆಗಿ ಕಾಣಬೇಕು.
- ಓವಲ್ ಹಾಗೂ ಉದ್ದ ಮುಖದವರಿಗೆ ನೋಡಲು ಇವು ಚೆನ್ನಾಗಿ ಕಾಣುತ್ತವೆ. ತೀರಾ ಅಗಲ ಮುಖದವರು ಆದಷ್ಟು ಹಣೆಯ ಭಾಗದಲ್ಲಿ ಒಂದಿಷ್ಟು ಲೆಯರ್ ಚಾಪ್ ಕಟ್ ಮಾಡಿಸಿ. ಟ್ರೆಂಡಿಯಾಗಿಸಿ.
- ಸ್ಟ್ರೀಕ್ಸ್ ಸೂರ್ಯನ ಕಿರಣಗಳಿಗೆ ಗ್ಲೋ ಆಗಬೇಕು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)