-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್ ಸೀಸನ್‌ನ ಹಾಲಿಡೇಗೆ ಮ್ಯಾಚ್ ಆಗುವಂತಹ ನಾನಾ ಬಗೆಯ ಹಾಲಿಡೇ ಫ್ಯಾಷನ್‌ವೇರ್‌ಗಳು ಮಾರುಕಟ್ಟೆಗೆ ಈಗಾಗಲೇ ಲಗ್ಗೆ ಇಟ್ಟಿದ್ದು, ಟ್ರಾವೆಲ್ ಪ್ರಿಯರನ್ನು ಸೆಳೆದಿವೆ. ಯೂನಿಸೆಕ್ಸ್ ಡಿಸೈನ್‌ನ ಶಾರ್ಟ್ಸ್, ಪ್ಯಾಂಟ್ಸ್, ಟೀ ಶರ್ಟ್ಸ್, ಹುಡುಗಿಯರ ಸ್ಲಿಟ್ ಸ್ಕರ್ಟ್ಸ್, ಗಿಡ್ಡನಾದ ಪಲ್ಹಾಜೊ ಪ್ಯಾಂಟ್ಸ್, ಸ್ಲಿವ್‌ಲೆಸ್ ಟಾಪ್-ಕುರ್ತಾ , ಕ್ರಾಪ್ ಟಾಪ್ಸ್, ಹುಡಗ-ಹುಡುಗಿಯರು ಧರಿಸಬಹುದಾದ ಗಿಂಗ್ನಂ ಸ್ಟೈಲ್‌ನ ಬರ್ಮುಡಾ, ಸ್ಲಿವ್‌ಲೆಸ್ ಬನಿಯನ್ ಶೈಲಿಯ ಟೀ ಶರ್ಟ್ಸ್, ಗೋವಾ ಸ್ಟೈಲ್ ಶಾರ್ಟ್ಸ್‌ಗಳು ಬಿಡುಗಡೆಯಾಗಿ, ಬೇಡಿಕೆ ಹೆಚ್ಚಿಸಿಕೊಂಡಿವೆ. ಎಥ್ನಿಕ್ ಸ್ಟೈಲ್‌ನ ಉಡುಪುಗಳಿಗಿಂತ ಕ್ಯಾಶುವಲ್ ಔಟ್‌ಫಿಟ್‌ಗಳಿಗೆ ಮಾನ್ಯತೆ ಹೆಚ್ಚಾಗಿದೆ.
ಲಾಂಗ್ ಹಾಲಿಡೇ ಫ್ಯಾಷನ್ ವೇರ್ಸ್
ಇನ್ನು ಲಾಂಗ್ ಹಾಲಿಡೇಸ್ ಟೂರ್‌ಗೆ ಹೋಗುವುದಾದಲ್ಲಿಆದಷ್ಟೂ ಲೈಟ್‌ವೇಟ್ ಉಡುಪುಗಳನ್ನು ಆಯ್ಕೆ ಮಾಡಿ. ಟೂರ್ ಸ್ಪಾಟ್‌ಗಳಲ್ಲಿ ಸಮ್ಮರ್ ಸೀಸನ್‌ಗೆ ಹೊಂದುವಂತಹ ಉಡುಪುಗಳು ದೊರಕುತ್ತವೆ. ಅಲ್ಲಿಯೂ ಕೊಳ್ಳಬಹುದು. ಹುಡುಗಿಯರು ಹೆಚ್ಚು ಪ್ರಿಪೇರ್ ಆಗಬೇಕಾಗುತ್ತದೆ. ಆದರೆ, ಹುಡುಗರ ವಿಷಯದಲ್ಲಿ ಹಾಗಿಲ್ಲ, ಹೋದೆಡೆಯೇ ಒಂದೆರೆಡು ಟೀ ಶರ್ಟ್ಸ್ ಹಾಗೂ ಬರ್ಮುಡಾ ಕೊಂಡರಾಯಿತು, ಹೆಚ್ಚು ತೆಲೆ ಬಿಸಿಯಿಲ್ಲ ಎನ್ನುತ್ತಾರೆ ಫ್ಯಾಷನಿಸ್ಟಾ ರಾಜ್.
ಪಿಕ್‌ನಿಕ್ ಹಾಲಿಡೇ ವೇರ್ಸ್
ಇದೀಗ ಟ್ರೆಂಡಿಯಾಗಿರುವ ಬಣ್ಣ ಬಣ್ಣದ ರೆಸಾರ್ಟ್‌ವೇರ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ, ಹುಡುಗಿಯರು ಉದ್ದುದ್ದದ ಲಾಂಗ್ ಸ್ಕರ್ಟ್ಸ್ ಆವಾಯ್ಡ್ ಮಾಡಿ. ಫುಲ್ ಸ್ಲೀವ್ ಬೇಡ. ಲೇಯರ್ ಲುಕ್‌ಗೆ ಬೈ ಹೇಳಿ. ಬೇಸಿಗೆಯಲ್ಲಿ ಬ್ರೈಟ್ ಹಾಗೂ ಪಾಸ್ಟೆಲ್ ಕಲರ್ಸ್ ಆಯ್ಕೆ ಮಾಡಿ.
ವಾಟರ್ ಫಾಲ್ ಅಥವಾ ಅಮ್ಯೂಸ್‌ಮೆಂಟ್ ಸ್ಪಾಟ್‌ಗಳಿಗೆ ಆದಷ್ಟೂ ಮೈಗೆ ಅಂಟದಂತಹ ವಾಟರ್ ಪ್ರೂಫ್ ಶಾಟ್ರ್ಸ್, ಟೈಟ್ಸ್ ಹಾಗೂ ಟೀ ಶಟ್ರ್ಸ್ ಆಯ್ಕೆ ಮಾಡಿ. ಕೇಪ್ರೀಸ್, ಕ್ಯೂಲೆಟ್ಸ್ ಕೂಡ ಬೆಸ್ಟ್.
ಇದನ್ನೂ ಓದಿ: Summer Tips: ಬೇಸಿಗೆಯ ಸಾಥಿ: ಮಣ್ಣಿನ ಮಡಕೆಯ ತಂಪು ನೀರು ಕುಡಿದು ಆರೋಗ್ಯ ಹೆಚ್ಚಿಸಿ!
ಫ್ರೆಶ್ ಕಲರ್ಸ್ ಡ್ರೆಸ್‌ಗೆ ಆದ್ಯತೆ ನೀಡಿ
ಹಾಲಿಡೇಗೆ ಹೋಗುವಾಗ ಆದಷ್ಟೂ ಮನಸ್ಸಿಗೆ ಉಲ್ಲಾಸ ನೀಡುವಂತಹ ಕಲರ್ ಉಡುಪುಗಳ ಆಯ್ಕೆ ಮಾಡಿ. ಯಾವುದೇ ಕಾರಣಕ್ಕೂ ಬ್ಲಾಕ್, ಕಾಫಿ ಕಲರ್, ಡೀಪ್ ಬ್ಲ್ಯೂ ವರ್ಣದ ಉಡುಪುಗಳು ಬೇಡ. ಇವು ಬಿಸಿಲ ಶಾಖವನ್ನು ಹೀರುತ್ತವೆ. ನಿತ್ರಾಣಗೊಳಿಸುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಫ್ಲೋರಲ್ ಹಾಗೂ ಗಿಂಗ್ನಂ ಔಟ್‌ಫಿಟ್‌ಗಳು ಫ್ರೆಶ್ ಫೀಲಿಂಗ್ ನೀಡುತ್ತವೆ.
ಕಂಫರ್ಟಬಲ್ ಫುಟ್‌ವೇರ್ ಆಯ್ಕೆ
ಹಿಲ್ ಸ್ಟೇಷನ್ ಅಥವಾ ಹೆಚ್ಚು ನಡೆಯುವಂತಹ ಜಾಗಗಳಿಗೆ ಹೋಗುತ್ತಿರುವುರಾದರೇ ಶೋ ಪ್ರಿಫರ್ ಮಾಡಿ. ಹೈ ಹೀಲ್ಸ್ ಆವಾಯ್ಡ್ ಮಾಡಿ. ಆದಷ್ಟೂ ಫ್ಲಿಪ್ ಫ್ಲಾಪ್‌ನಂತಹ ಆರಾಮ ಎನಿಸುವ ಹೊಸ ಬಗೆಯ ಫುಟ್‌ವೇರ್‌ಗೆ ಸೈ ಎನ್ನಿ.
ಹಾಲಿಡೇ ಎಂಜಾಯ್ ಮಾಡಲು ಹೀಗೆ ಮಾಡಿ
- ಔಟ್ಫಿಟ್ಗೆ ಹೆಚ್ಚು ಆಕ್ಸೆಸರೀಸ್ ಧರಿಸುವುದು ಬೇಡ.
- ಹಾಲಿ ಡೇ ಔಟ್ಫಿಟ್ ಸೀಸನ್‌ಗೆ ತಕ್ಕಂತಿರಲಿ.
- ಬೆಲೆಬಾಳುವ ಜ್ಯುವೆಲರಿ ಧರಿಸಬೇಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)