Site icon Vistara News

Independence day Fashion: ಸ್ವಾತಂತ್ರ್ಯ ದಿನಚಾರಣೆಯ ದೇಸಿ ಲುಕ್‌ಗಾಗಿ ಬಂತು ತಿರಂಗಾ ಶೇಡ್ಸ್ ಸೀರೆಗಳು

Tiranga Shades sarees

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ದೇಸಿ ಲುಕ್‌ಗೆ ಸಾಥ್‌ ನೀಡುವ ತ್ರಿವರ್ಣ ಶೇಡ್ಸ್ ಸೀರೆಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಹೌದು. ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ದೇಸಿ ಲುಕ್‌ ಬಯಸುವ ಸೀರೆ ಪ್ರೇಮಿಗಳಿಗಾಗಿ ಸಾಕಷ್ಟು ಬ್ರಾಂಡ್‌ಗಳು, ಕೇಸರಿ, ಬಿಳಿ ಮತ್ತು ಹಸಿರು ವರ್ಣಗಳನ್ನು ಹೊಂದಿರುವಂತಹ ತಿರಂಗಾ ಶೇಡ್‌ನ ಸೀರೆಗಳನ್ನು ಬಿಡುಗಡೆಗೊಳಿಸಿವೆ.

ದೇಸಿ ಲುಕ್‌ ಸೀರೆಗಳಿಗೆ ಹೆಚ್ಚಾದ ಬೇಡಿಕೆ

ಹ್ಯಾಂಡ್‌ಲೂಮ್‌ ಸೀರೆಗಳು, ಸೆಮಿ ಕಾಟನ್‌, ಅರ್ಗಾನ್ಜಾ, ಕ್ರೇಪ್‌, ಕಾಟನ್‌ ಸಿಲ್ಕ್ ಹೀಗೆ ದೇಸಿ ಲುಕ್‌ ನೀಡುವ ಫ್ಯಾಬ್ರಿಕ್‌ನಲ್ಲಿ ಸಿದ್ಧಗೊಂಡಿರುವ ಸೀರೆಗಳು ನಾನಾ ವಿನ್ಯಾಸದಲ್ಲಿ ಬಂದಿವೆ. ತ್ರಿವರ್ಣಗಳನ್ನೊಳಗೊಂಡಿರುವ ಪಾಸ್ಟೆಲ್‌ ಶೇಡ್‌ನವು, ಅಬ್‌ಸ್ಟ್ರಾಕ್ಟ್‌ ಶೇಡ್‌ನವು ಹಾಗೂ ಕಲರ್‌ ಮಿಕ್ಸ್‌ ಇರುವಂತಹ ಚಿತ್ತಾರದವು ಲಭ್ಯ. ಅದರಲ್ಲೂ ನೋಡಲು ತಿರಂಗಾ ಶೇಡ್‌ನಂತಿರುವ ದೇಸಿ ಲುಕ್‌ ನೀಡುವ ಸೀರೆಗಳು ಈಗಾಗಲೇ ಬಿಡುಗಡೆಗೊಂಡಿದ್ದು, ಬೇಡಿಕೆ ಹೆಚ್ಚಿಸಿಕೊಂಡಿದೆ ಎನ್ನುತ್ತಾರೆ ಪರಂಪರಾ ಸಂಸ್ಥಾಪಕರಾದ ಪಾಯಲ್‌ ಸೇನ್‌. ಅವರ ಪ್ರಕಾರ, ಪ್ರತಿ ವರ್ಷ ಪರಂಪರಾ, ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಾನಾ ವಿನ್ಯಾಸದ ಸೀರೆಗಳನ್ನು ಬಿಡುಗಡೆಗೊಳಿಸುತ್ತದೆ. ಈ ಬಾರಿಯೂ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮೊದಲಿಗಿಂತ ಆನ್‌ಲೈನ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ.

ದೇಸಿ ಲುಕ್‌ ನೀಡುವ ಸೀರೆಗಳ ಡ್ರೇಪಿಂಗ್‌ ಹೀಗಿರಲಿ

ಇದನ್ನೂ ಓದಿ: Fashion Pageant News: ಚೆನ್ನೈನಲ್ಲಿ ನಡೆದ ಫ್ಯಾಷನ್‌ ಪೇಜೆಂಟ್‌ನಲ್ಲಿ ವಿಜೇತರಾದ ಕನ್ನಡಿಗರು

ದೇಸಿ ಲುಕ್‌ ನೀಡುವ ಸೀರೆಗಳ ಡ್ರೇಪಿಂಗ್‌ ಡೀಸೆಂಟ್‌ ಆಗಿರಬೇಕು. ಅದರಲ್ಲೂ ಗೌರವ ಭಾವನೆ ಮೂಡಿಸಬೇಕು. ಗ್ಲಾಮರಸ್‌ ಲುಕ್‌ಗೆ ಆದ್ಯತೆ ನೀಡಬಾರದು. ನೋಡಿದಾಕ್ಷಣ ದೇಶ ಪ್ರೇಮ ಉಕ್ಕಿಸಬೇಕೇ ಹೊರತು ಸಿಟ್ಟು ತರಿಸುವಂತಿರಬಾರದು. ಇದಕ್ಕಾಗಿ ಒಂದಿಷ್ಟು ಫ್ಯಾಷನ್‌ ರೂಲ್ಸ್‌ ಫಾಲೋ ಮಾಡುವುದು ಉತ್ತಮ ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್‌ ದಾಮಿನಿ. ಅವರ ಪ್ರಕಾರ, ಇನ್ನೀತರೇ ಸಂದರ್ಭದಲ್ಲಿ ಉಡುವಂತಹ ಸೀರೆ ಪ್ರಯೋಗಗಳನ್ನು ಮಾಡಬಾರದು. ನಮ್ಮ ಸಂಸ್ಕೃತಿಗೆ ಪೂರಕವಾಗುವಂತೆ ಸೀರೆ ಡ್ರೇಪ್‌ ಮಾಡಬೇಕು ಎಂದು ಸಲಹೆ ನೀಡುತ್ತಾರೆ.

ತಿರಂಗಾ ಶೇಡ್ಸ್‌ ಸೀರೆ ಪ್ರಿಯರಿಗೆ ಟಿಪ್ಸ್‌

( ಲೇಖಕಿ : ಫ್ಯಾಷನ್‌ ಪತ್ರಕರ್ತೆ)

Exit mobile version