Site icon Vistara News

Wedding Jewellery Fashion | ವಿಂಟರ್‌ ವೆಡ್ಡಿಂಗ್ ಸೀಸನ್‌ನಲ್ಲಿ ಟ್ರೆಂಡಿಯಾಗುತ್ತಿದೆ ಮದುಮಗಳ ಡಿಸೈನರ್‌ ಮೂಗುತಿ

Wedding Jewellery Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ವಿಂಟರ್‌ ವೆಡ್ಡಿಂಗ್‌ ಸೀಸನ್‌ನಲ್ಲಿ ಮದುಮಗಳನ್ನು ಮತ್ತಷ್ಟು ಆಕರ್ಷಕವಾಗಿಸುವ ನಾನಾ ಬಗೆಯ ಡಿಸೈನರ್‌ ಮೂಗುತಿಗಳು ಟ್ರೆಂಡಿಯಾಗಿವೆ. ಮದುಮಗಳ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಅಷ್ಟು ಮಾತ್ರವಲ್ಲದೇ ವೆಡ್ಡಿಂಗ್‌ ಜ್ಯುವೆಲರಿ (Wedding Jewellery Fashion) ಫ್ಯಾಷನ್‌ನಲ್ಲಿ ಇತರೇ ಆಭರಣಗಳೊಂದಿಗೆ ಪ್ರಮುಖ ಸ್ಥಾನ ಪಡೆದಿವೆ.

ಯಾವ್ಯಾವ ವಿನ್ಯಾಸಕ್ಕೆ ಬೇಡಿಕೆ
ಹೂಪ್‌, ಡೈಮಂಡ್‌, ಜೆಮ್‌ಸ್ಟೋನ್‌, ಪರ್ಲ್, ಜರ್ಕೂನ್‌, ಟಕ್ರ್ಯೊಸ್‌, ವರ್ಮೈಲ್‌, ಕುಂದನ್‌, ಬೀಡ್ಸ್‌ ಸೇರಿದಂತೆ ನಾನಾ ಬಗೆಯ ವಿನೂತನ ಡಿಸೈನರ್‌ ಮೂಗುತಿಗಳು ಈ ವೆಡ್ಡಿಂಗ್‌ ಸೀಸನ್‌ನಲ್ಲಿ ಎಂಟ್ರಿ ನೀಡಿವೆ. ಇನ್ನು ಕೆಲವು ಡಿಸೈನರ್‌ ಮೂಗುತಿಗಳು ಮದುಮಗಳ ಡಿಸೈನರ್‌ ಸೀರೆ ಅಥವಾ ಲೆಹೆಂಗಾ ವರ್ಣಕ್ಕೆ ಸೂಟ್‌ ಆಗುವಂತಹ ಡಿಸೈನ್‌ನಲ್ಲೂ ಲಭ್ಯವಿದೆ. ಕಸ್ಟಮೈಸ್ಡ್‌ ಮೂಗುತಿಗಳು ಡಿಸೈನರ್‌ವೇರ್‌ಗೆ ತಕ್ಕಂತೆ ಮದುಮಗಳನ್ನು ಸಿಂಗರಿಸುತ್ತಿವೆ ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್‌ ಸರವಣ. ಅವರ ಪ್ರಕಾರ, ಈ ಹಿಂದೆ ಕೇವಲ ಡೈಮಂಡ್‌ ಹಾಗೂ ಸಿಂಗಲ್‌ ಹರಳಿನ ಸಿಂಪಲ್‌ ಮೂಗುತಿಗಳನ್ನು ಪ್ರಿಫರ್‌ ಮಾಡುತ್ತಿದ್ದರು. ಇದೀಗ ಟ್ರೆಂಡ್‌ ಬದಲಾಗಿದ್ದು, ಮೂಗನ್ನು ಎದ್ದು ಕಾಣುವಂತೆ ಮಾಡುವ ಡಿಸೈನರ್‌ ಮೂಗುತಿಗಳು ಪ್ರಚಲಿತದಲ್ಲಿವೆ ಎನ್ನುತ್ತಾರೆ ಅವರು.

ಇದನ್ನೂ ಓದಿ | Fashion Icon | ಬ್ರಿಟಿಷ್‌ ಫ್ಯಾಷನ್‌ ಅವಾರ್ಡ್ ಸಮಾರಂಭದಲ್ಲಿ ಗಮನ ಸೆಳೆದ ನತಾಶ ಪೂನಾವಾಲಾ ಫ್ಲವರ್‌ ಬ್ಲಾಕ್‌ ಗೌನ್‌

ಬಣ್ಣ ಬಣ್ಣದ ಹರಳಿನ ಮೂಗುತಿ
ಅಷ್ಟು ಮಾತ್ರವಲ್ಲ, ಇದೀಗ ಐದು ಹಾಗೂ ಏಳು ಕಲ್ಲಿನ ಬಂಗಾರದ ಹರಳಿನ ಹಾಗೂ ಡೈಮಂಡ್‌ನ ಮೂಗುತಿಗೂ ಬೇಡಿಕೆ ಹೆಚ್ಚಿದೆ. ಇನ್ನು ಅಮೆರಿಕನ್‌ ಡೈಮಂಡ್‌ನ ಬಣ್ಣ ಬಣ್ಣದ ಹರಳಿನ ಮೂಗುತಿಗಳನ್ನು ಕೂಡ ಖರೀದಿಸುವವರು ಹೆಚ್ಚಾಗಿದ್ದಾರೆ. ಮದುವೆಗೆ ಮದುಮಗಳು ಧರಿಸುವ ಉಡುಗೆ ತೊಡುಗೆಗಳನ್ನು ಇವಕ್ಕೆ ಮ್ಯಾಚ್‌ ಮಾಡಬಹುದು ಎಂಬ ಯೋಚನೆಯಿಂದ ಬಹಳಷ್ಟು ಮಂದಿ ಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್‌ ರಾಘವ್‌.

ಆಭರಣಗಳ ಸೆಟ್‌ ಜತೆಗೆ ಕೃತಕ ಮೂಗುತಿಗಳು
ಡಿಸೈನರ್‌ವೇರ್‌ಗೆ ತಕ್ಕಂತೆ ಧರಿಸುವ ಕೃತಕ ಆಭರಣಗಳೊಂದಿಗೆ ಇದೀಗ ಮ್ಯಾಚ್‌ ಡಿಸೈನರ್‌ ಮೂಗುತಿಗಳು ಆಗಮಿಸಿವೆ. ಇವು ಕೂಡ ಇಂದು ಹೆಚ್ಚು ಟ್ರೆಂಡಿಯಾಗಿವೆ.

ಪ್ರೆಸ್‌ ಆನ್‌ ಮೂಗುತಿ
ಬಂಗಾರದಲ್ಲಿ ಇಂತವು ಕಡಿಮೆ. ಆರ್ಟಿಫಿಷಿಯಲ್‌ ಅಥವಾ ಒನ್‌ ಗ್ರಾಮ್‌ ಗೋಲ್ಡ್‌ನಲ್ಲಿ ಪ್ರಸ್‌ ಆನ್‌ ಮೂಗುತಿಗಳು ದೊರೆಯುತ್ತಿದ್ದು, ಮೂಗು ಚುಚ್ಚಲು ಬಯಸದವರು ಇದರತ್ತ ಆಕರ್ಷಿತರಾಗುತ್ತಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ | Ramp News | ಭಾರತೀಯ ಸಿಟಿ ಮಾಲ್‌ನಲ್ಲಿ ವರ್ಣರಂಜಿತ ಫ್ಯಾಷನ್‌ ವೀಕ್‌

Exit mobile version