-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವೆಡ್ಡಿಂಗ್ ಮೆನ್ಸ್ ಜ್ಯುವೆಲರಿ ಫ್ಯಾಷನ್‌ನಲ್ಲಿ ಇದೀಗ ಆರ್ಟಿಫಿಶಿಯಲ್ ಪರ್ಲ್ ಹಾರಗಳು ಎಂಟ್ರಿ (Wedding mens jewel Fashion) ನೀಡಿವೆ. ಮದುವೆಯ ರಿಸಪ್ಷನ್‌ನಲ್ಲಿ ಯುವಕರು ಧರಿಸುವ ಶೆರ್ವಾನಿ, ಬಂದ್ಗಾಲ ಹಾಗೂ ಡಿಸೈನರ್ ಕುರ್ತಾಗಳಿಗೆ ಸಾಥ್ ನೀಡುತ್ತಿವೆ. ಅಷ್ಟು ಮಾತ್ರವಲ್ಲ, ರಾಯಲ್ ಲುಕ್ ಕಲ್ಪಿಸುತ್ತಿವೆ.
ರಾಯಲ್ ಲುಕ್‌ಗಾಗಿ ಪರ್ಲ್ ಹಾರ
ವೆಡ್ಡಿಂಗ್‌ನಲ್ಲಿ ಮದುಮಗನ ರಾಯಲ್ ಲುಕ್‌ಗಾಗಿ ಈ ಭಾರಿ ಡಿಸೈನ್‌ನ ಪರ್ಲ್ ಹಾರಗಳನ್ನು ಬಳಸಲಾಗುತ್ತಿದೆ. ಅದರಲ್ಲೂ ರಿಸಪ್ಷನ್ ಅಂದರೇ ಆರತಕ್ಷತೆಯಲ್ಲಿ ಮದುಮಗ ಧರಿಸುವ ಗ್ರ್ಯಾಂಡ್ ಔಟ್‌ಫಿಟ್‌ಗೆ ಮ್ಯಾಚ್ ಆಗುವಂತಹ ಡಿಸೈನ್‌ನವನ್ನು ಧರಿಸುವುದು ಕಂಡು ಬರುತ್ತಿದೆ. ಇದಕ್ಕಾಗಿ ಹೆಚ್ಚು ಬೆಲೆ ತೆತ್ತು ರಿಯಲ್ ಪರ್ಲ್ ಹಾರಗಳನ್ನು ಖರೀದಿಸುವುದರ ಬದಲು ಥೇಟ್ ಮುತ್ತಿನ ಹಾರಗಳಂತೆ ಕಾಣುವ ಆರ್ಟಿಫೀಶಿಯಲ್ ಪರ್ಲ್‌ವನ್ನು ಇತ್ತೀಚೆಗೆ ಹುಡುಗರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕೇವಲ ಒಂದು ದಿನಕ್ಕಾಗಿ ಧರಿಸುವ ಈ ಮೆನ್ಸ್ ಗ್ರ್ಯಾಂಡ್ ಮುತ್ತಿನ ಹಾರಗಳು ಮತ್ತೊಮ್ಮೆ ಬಳಕೆಯಾಗುವುದು ಕಡಿಮೆ. ಬಳಸಿದರೂ ಮತ್ತೊಮ್ಮೆ ಕುಟುಂಬದವರೇ ಧರಿಸಬೇಕಾಗುತ್ತದೆ. ಹಾಗಾಗಿ ಇವುಗಳನ್ನು ಆಯ್ಕೆ ಮಾಡುವವರು ಹೆಚ್ಚಾಗಿದ್ದಾರೆ ಎನ್ನುತ್ತಾರೆ ವೆಡ್ಡಿಂಗ್ ಜ್ಯುವೆಲರಿ ಡಿಸೈನರ್ಸ್.
ಇದನ್ನೂ ಓದಿ: Turbo Trailer Out: ಮಮ್ಮುಟ್ಟಿ ನಟನೆಯ ‘ಟರ್ಬೋ’ ಟ್ರೈಲರ್ ಔಟ್: ರಾಜ್ ಬಿ ಶೆಟ್ಟಿ ಖದರ್‌ಗೆ ಫ್ಯಾನ್ಸ್ ಫಿದಾ!
ಆರ್ಟಿಫಿಶಿಯಲ್ ಮುತ್ತಿನ ಹಾರಗಳ ವಿನ್ಯಾಸ
ವೆಡ್ಡಿಂಗ್ ಮೆನ್ಸ್ ಜ್ಯುವೆಲರಿ ಡಿಸೈನ್‌ಗಳಲ್ಲಿ ಇದೀಗ ನಾನಾ ಬಗೆಯ ಕೃತಕ ಪರ್ಲ್ ಹಾರಗಳು ಟ್ರೆಂಡಿಯಾಗಿದ್ದು, ಅವುಗಳಲ್ಲಿ ಮೂರು, ಐದು, ಏಳು ಎಳೆಯ ಹಾರಗಳು ಚಾಲ್ತಿಯಲ್ಲಿವೆ. ಇನ್ನು ಇವುಗಳಲ್ಲೆ ಮಿಕ್ಸ್ ಮ್ಯಾಚ್ ಮಾಡಿರುವ ಪ್ರಿಶಿಯಸ್ ಬೀಡ್ಸ್ನಂತೆ ಕಾಣುವ ಲೇಯರ್ ಮಣಿಗಳವು ಬಂದಿವೆ. ಇನ್ನು ಗೋಲ್ಡನ್ ಬೀಡ್ಸ್ ಜೊತೆಗೆ ಪರ್ಲ್‌ನಂತೆ ಕಾಣುವ ಆರ್ಟಿಫಿಶಿಯಲ್ ಪರ್ಲ್ ಹಾರಗಳು ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ.
ಕೈಗೆಟಕುವ ಬೆಲೆ
ಫ್ಯಾನ್ಸಿ ಶಾಪ್‌ಗಳಲ್ಲಿ ದೊರಕುವ ಈ ಮೆನ್ಸ್ ಆರ್ಟಿಫಿಶೀಯಲ್ ವೆಡ್ಡಿಂಗ್ ಜ್ಯುವೆಲರಿಗಳು ಅಂತಹ ದುಬಾರಿ ದರ ಹೊಂದಿರುವುದಿಲ್ಲ. ಬ್ರಾಂಡೆಡ್‌ನದ್ದಾದಲ್ಲಿ ದರ ಹೆಚ್ಚಿರುತ್ತವೆ. ಇನ್ನು ಲೋಕಲ್ ಬ್ರಾಂಡ್‌ಗಳದ್ದಾದಲ್ಲಿ ಸಾವಿರ ರೂ.ಗಳ ಒಳಗೆ ದೊರಕುತ್ತವೆ. ಕೆಲವು ಯೂನಿಸೆಕ್ಸ್ ಡಿಸೈನ್ ಹೊಂದಿರುತ್ತವೆ. ಇವನ್ನು ಮದುವೆಯ ಆರತಕ್ಷತೆಯ ನಂತರ ಕುಟುಂಬದ ಇತರೇ ಮಹಿಳೆಯರು ಧರಿಸಬಹುದು. ಮರು ಬಳಕೆ ಮಾಡಬಹುದು ಎಂದು ಟಿಪ್ಸ್ ನೀಡುತ್ತಾರೆ ಜ್ಯುವೆಲರಿ ಸ್ಟೈಲಿಸ್ಟ್ ಗಳು.
ಮದುಮಗನ ಪರ್ಲ್ ಹಾರ ಆಯ್ಕೆಗೆ 7 ಸೂತ್ರ:
- ಆರತಕ್ಷತೆಯಲ್ಲಿ ಧರಿಸುವ ಔಟ್‌ಫಿಟ್‌ಗೆ ಮ್ಯಾಚ್ ಆಗುವಂತಿರಬೇಕು.
- ಮರುಬಳಕೆ ಮಾಡುವಂತಹ ಪರ್ಲ್ ಹಾರವನ್ನು ಖರೀದಿಸಿ.
- ಒಂದೇ ಶೇಡ್ನದ್ದಾದಲ್ಲಿ ಯಾರೂ ಬೇಕಾದರೂ ಧರಿಸಬಹುದು.
- ಮಿಕ್ಸ್ ಮ್ಯಾಚ್ ಮಾಡಿರುವ ಬೀಡ್ಸ್ ಇರುವಂತಹ ಪರ್ಲ್ ಹಾರ ಎದ್ದು ಕಾಣುತ್ತವೆ.
- ಸಾದಾ ಡಿಸೈನ್‌ನ ಔಟ್‌ಫಿಟ್‌ಗೆ ಕಲರ್ ಬೀಡ್ಸ್ ಮಿಕ್ಸ್ ಮಾಡಿರುವಂತವನ್ನು ಧರಿಸುವುದು ಉತ್ತಮ.
- ಗ್ರ್ಯಾಂಡ್ ಡಿಸೈನ್ನವಕ್ಕೆ ಸಿಂಪಲ್ ಒಂದೇ ಕಲರ್ನವನ್ನು ಚೂಸ್ ಮಾಡಬೇಕು.
- ಆದಷ್ಟೂ ಉದ್ದ ಇರುವಂತಹ ಲೇಯರ್ ಹಾರ ಖರೀದಿಸುವುದು ಬೆಸ್ಟ್.
(ಲೇಖಕಿ ಫ್ಯಾಷನ್ ಪತ್ರಕರ್ತೆ)