–ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಿಶಾ ಉಮಾಶಂಕರ್ ಮಾಡೆಲ್ (Weekend Style) ಮಾತ್ರವಲ್ಲ, ಜತೆಗೆ ಫ್ಯಾಷನ್ ಗ್ರೂಮರ್, ಫ್ಯಾಷನ್ ಇನ್ಸ್ಟಾ ಸಂಸ್ಥಾಪಕಿ. ಮಿಸ್ ಪ್ರೊ ಫ್ಯಾಷನಲ್, ಬೆಸ್ಟ್ ಸ್ಮೈಲ್ ಟೈಟಲ್ ವಿಜೇತೆ. ಫ್ಯಾಷನ್ ಜಗತ್ತಿನಲ್ಲಿ ಮಾಡೆಲಿಂಗ್ ಮಾಡುತ್ತಲೇ ತಮ್ಮದೇ ಆದ ಸಂಸ್ಥೆಯನ್ನು ಕಟ್ಟಿ, ಶೋಗಳನ್ನು ನಡೆಸಿದವರು. ಈ ಬಾರಿಯ ವೀಕೆಂಡ್ ಸ್ಟೈಲ್‌ನಲ್ಲಿ ತಮ್ಮ ಫ್ಯಾಷನ್, ಸ್ಟೈಲ್ ಸ್ಟೇಟ್‌ಮೆಂಟ್ ಹಾಗೂ ಫ್ಯಾಷನ್ ಜಗತ್ತಿನ ಬಗ್ಗೆ ವಿಸ್ತಾರದೊಂದಿಗೆ ಮಾತನಾಡಿದ್ದಾರೆ.
ಮೂಲತಃ ಮಾಡೆಲ್ ಆದ ನಿಮ್ಮ ಫ್ಯಾಷನ್ ಸ್ಟೇಟ್‌ಮೆಂಟ್ ಏನು?
ಪ್ರತಿದಿನವೂ ನನ್ನ ಬೆಸ್ಟ್ ಡೇ ಎಂದುಕೊಂಡು ನನ್ನ ಫ್ಯಾಷನ್ ಸ್ಟೇಟ್‌ಮೆಂಟ್‌ಗೆ ಸೈ ಎನ್ನುತ್ತೇನೆ. ಈ ಸೀಸನ್‌ಗೆ ಸೂಟ್ ಆಗುವಂತಹ ಜೀನ್ಸ್, ಟ್ಯಾಂಕ್ ಟಾಪ್ಸ್, ಶರ್ಟ್ ಜತೆಗೆ ಕ್ಲಾಸಿ ಲುಕ್ ನೀಡುವ ಶ್ರಗ್ಸ್ ಹಾಗೂ ಕೋಟ್ ನನ್ನ ಸದ್ಯದ ಫ್ಯಾಷನ್ ಸ್ಟೇಟ್‌ಮೆಂಟ್‌ನಲ್ಲಿದೆ. ಸೀಸನ್‌ಗೆ ತಕ್ಕಂತೆ ಬದಲಾಗುತ್ತೇನೆ.
ಸ್ಟೈಲ್ ಸ್ಟೇಟ್‌ಮೆಂಟ್ ಬಗ್ಗೆ ಏನು ಹೇಳುವಿರಿ?
ಇತರರಿಗಿಂತ ಭಿನ್ನವಾಗಿ ಕಾಣುವಂತೆ ಬಿಂಬಿಸುವ ಸ್ಟೈಲ್ ನನ್ನದು. ನೋಡಲು ಯೂನಿಕ್ ಆಗಿ ಕಾಣುವಂಥದ್ದನ್ನು ಹೆಚ್ಚಾಗಿ ಪ್ರಿಫರ್ ಮಾಡುತ್ತೇನೆ. ನನ್ನ ಪ್ರತಿದಿನದ ಲುಕ್‌ಗೆ ಸೂಟ್ ಆಗುವಂತಹ ಪ್ರೊಫೆಷನಲ್ ಲುಕ್ ನನಗಿಷ್ಟ. ಬ್ಯುಸಿನೆಸ್‌ವೇರ್ ನನ್ನ ಸ್ಟೈಲ್ ಸ್ಟೇಟ್‌ಮೆಂಟಲ್ಲಿದೆ.
ಮುಂಬರುವ ಫೆಸ್ಟೀವ್ ಸೀಸನ್‌ಗೆ ಹೇಗೆ ಬದಲಾಗುತ್ತೀರಾ?
ಇಂಡೋ-ವೆಸ್ಟರ್ನ್ ಫ್ಯಾಷನ್‌ಗೆ ಶರಣಾಗುತ್ತೇನೆ. ಕ್ರಾಪ್‌ಟಾಪ್, ಶರ್ಟ್‌ನೊಂದಿಗೆ ಸೀರೆ ಪ್ರಯೋಗಿಸುತ್ತೇನೆ. ಇನ್ನು ಬನ್ ಹೇರ್‌ಸ್ಟೈಲ್‌ಗೆ ಮಲ್ಲಿಗೆ ಸುತ್ತಿ ಸಿಂಗರಿಸಿಕೊಳ್ಳುತ್ತೇನೆ. ಫೆಸ್ಟೀವ್ ಮೇಕಪ್‌ನೊಂದಿಗೆ ಸಿಲ್ವರ್ ಇಲ್ಲವೇ ಟ್ರೆಡಿಷನಲ್ ಜ್ಯುವೆಲರಿ ಧರಿಸುತ್ತೇನೆ.
ಫ್ಯಾಷನ್ ಜಗತ್ತಿನಲ್ಲಿ ಮಾಡೆಲ್‌ಗಳು ಎದುರಿಸುವ ಸಾಮಾನ್ಯ ಸಂಗತಿಗಳೇನು? ಅದಕ್ಕೇನು ಮಾಡಬೇಕು?
ಪ್ರತಿ ರೂಪದರ್ಶಿಯರು ತಮ್ಮ ಫಿಟ್ನೆಸ್ ಹಾಗೂ ತ್ವಚೆಯ ಸೌಂದರ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಇಲ್ಲವಾದಲ್ಲಿ ಇತರರಿಂದ ಟೀಕೆಗೆ ಒಳಗಾಗಬಹುದು. ಹಾಗಾಗಿ ಮೊದಲು ತಮ್ಮನ್ನು ತಾವು ಪ್ರೀತಿಸುವುದು ಅತ್ಯಗತ್ಯವಾಗುತ್ತದೆ. ಅಲ್ಲದೇ, ಪರಿಸ್ಥಿತಿ ಹೇಗೆ ಇರಲಿ, ನೋಡಲು ಸದಾ ಪರ್ಫೆಕ್ಟ್ ಆಗಿ ಕಾಣುವಂತೆ ಬಿಂಬಿಸಿಕೊಳ್ಳುವುದು ಈ ಕ್ಷೇತ್ರದ ಅವಶ್ಯಕತೆಯಾಗಿದೆ ಎಂಬುದನ್ನು ಮರೆಯಬಾರದು.
ಇದನ್ನೂ ಓದಿ | Holiday Fashion | ಬಂತು ದಸರಾ ಹಾಲಿಡೇ ಫ್ಯಾಷನ್