-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪಾಂಡುರಂಗ ವಿಠ್ಠಲ, ಚರಣದಾಸಿ, ಮುತ್ತೈದೆ, ಸೇರಿದಂತೆ ಸಾಕಷ್ಟು ಧಾರವಾಹಿಗಳ ಮೂಲಕ ಜನರಿಗೆ ಪರಿಚಯವಾದ ಕಿರುತೆರೆ ನಟಿ, ನಿರೂಪಕಿ ಶ್ರೀಮಯ್ಯ ಸಾಕಷ್ಟು ವೆಬ್ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. ಈ ಬಾರಿಯ ವೀಕೆಂಡ್ ಸ್ಟೈಲ್‌ನಲ್ಲಿ (Weekendstyle) ತಮ್ಮ ರೆಟ್ರೋ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್‌ಗಳ ಬಗ್ಗೆ ಮಾತನಾಡಿದ್ದಾರೆ.
ಕಿರುತೆರೆ ನಟಿಯಾಗಿರುವ ನಿಮ್ಮ ಫ್ಯಾಷನ್ ಮಂತ್ರ ಏನು ?
ನನ್ನದು ಸಿಂಪಲ್ ಫ್ಯಾಷನ್. ನಾನು ಆದಷ್ಟೂ ನ್ಯಾಚುರಲ್ ಫ್ಯಾಷನ್ ಫಾಲೋ ಮಾಡುತ್ತೇನೆ. ಅದರಲ್ಲೂ ರೆಟ್ರೋ ಫ್ಯಾಷನ್ ನನಗಿಷ್ಟ. ಹಳೆಯ ಕಾಲದ ಉಡುಗೆ ತೊಡುಗೆಗಳನ್ನು ಧರಿಸಲು ಇಷ್ಟಪಡುತ್ತೇನೆ.
ಸ್ಟೈಲ್ ಸ್ಟೇಟ್‌ಮೆಂಟ್ ಬಗ್ಗೆ ಏನು ಹೇಳುತ್ತೀರಾ?
ಹೊಸ ಸ್ಟೈಲ್ ಸ್ಟೇಟ್‌ಮೆಂಟ್ಸ್ ಬಗ್ಗೆ ನನಗೆ ಅಷ್ಟಾಗಿ ಇಷ್ಟವಿಲ್ಲ. ರೆಟ್ರೋ ಫ್ಯಾಷನ್‌ನ ಸ್ಟೈಲ್ ಸ್ಟೇಟ್‌ಮೆಂಟ್‌ಗಳನ್ನು ಇಷ್ಟ ಪಟ್ಟು ಪಾಲೋ ಮಾಡುತ್ತೇನೆ. ರೆಟ್ರೋ ಲುಕ್ ನನಗಿಷ್ಟ. ಎಲ್ಲದಕ್ಕಿಂತ ಹೆಚ್ಚಾಗಿ ಹಳೆಯ ಕಾಲದ ಉಡುಗೆ ತೊಡುಗೆಗಳ ಫ್ಯಾಷನ್‌ನಲ್ಲಿ ಹೊಸ ಸ್ಟೈಲ್ ಕ್ರಿಯೇಟ್ ಮಾಡುವ ಸ್ಟೈಲ್ ನನ್ನದು.
ಇದನ್ನೂ ಓದಿ| Jacket Saree Fashion | ಚಳಿಗಾಲದಲ್ಲಿ ಟ್ರೆಂಡಿಯಾದ ಜಾಕೆಟ್ ಸೀರೆ ಫ್ಯಾಷನ್
ವಿಂಟರ್ ಸೀಸನ್ ಫ್ಯಾಷನ್ ಫಾಲೋ ಮಾಡುತ್ತೀರಾ?
ಖಂಡಿತಾ. ದೇಹವನ್ನು ಬೆಚ್ಚಗಿಡುವ ಉಲ್ಲನ್ ಡ್ರೆಸ್‌ಗಳನ್ನು ಪ್ರಿಫರ್ ಮಾಡುತ್ತೇನೆ. ಈ ಸೀಸನ್‌ನಲ್ಲಿ ನಾನು ಸೀರೆಗಳನ್ನು ಧರಿಸಲು ಇಷ್ಟ ಪಡುತ್ತೇನೆ. ಫುಲ್ ಸ್ಲೀವ್ ಬ್ಲೌಸ್ ಜತೆ ಕಾಟನ್ ಸೀರೆಗಳನ್ನು ಧರಿಸಲು ಆಯ್ಕೆ ಮಾಡುತ್ತೇನೆ. ಇನ್ನು ಹೇರ್‌ಸ್ಟೈಲ್ ಕೂಡ ಅಷ್ಟೇ ಫ್ರೀ ಹೇರ್‌ಸ್ಟೈಲ್ ಬದಲು ಟೈ ಮಾಡುತ್ತೇನೆ. ನನ್ನ ಪ್ರಕಾರ, ವಿಂಟರ್‌ಗೆ ಆದಷ್ಟೂ ಸ್ಕಿನ್ ಫ್ರೆಂಡ್ಲಿ ಫ್ಯಾಷನ್‌ಗೆ ಸೈ ಎನ್ನಬೇಕು.
ಈ ಸಾಲಿನ ಇಯರ್ ಎಂಡ್ ಫ್ಯಾಷನ್ ಬಗ್ಗೆ ಹೇಳಿ ?
ಹಳೆಯ ಫ್ಯಾಷನ್ ಅನ್ನು ಹೊಸದಾಗಿ ಪ್ರೆಸೆಂಟ್ ಮಾಡುವುದು ಹಾಗೂ ಡಿಫರೆಂಟ್ ಆಗಿ ಬಿಂಬಿಸುವುದು. ಅದರಲ್ಲೂ ಸೀರೆಯನ್ನು ಇಂಡೋ-ವೆಸ್ಟರ್ನ್ ಸ್ಟೈಲ್‌ನಲ್ಲಿ ಸೀರೆಗಳನ್ನು ಉಡುವುದನ್ನು ಮುಂದೆ ರೂಢಿಸಿಕೊಳ್ಳಬೇಕೆಂದುಕೊಂಡಿದ್ದೇನೆ. ಇದು ಸೀರೆಗೆ ಹೊಸ ಸ್ಟೈಲ್ ಹೊಸ ರೂಪ ನೀಡಬಲ್ಲದು ಎಂಬುದು ನನ್ನ ನಂಬಿಕೆ.
ಫ್ಯಾಷನ್‌ಪ್ರಿಯರಿಗೆ ರೆಟ್ರೋ ಲುಕ್ ಫಾಲೋ ಮಾಡುವುದರ ಬಗ್ಗೆ ನೀವು ಹೇಳುವುದೇನು?
ಫ್ಯಾಷನ್ ಹಳತಾದರೂ ಅದಕ್ಕೆ ಕೊಂಚ ಹೊಸ ರೂಪ ನೀಡಿದಲ್ಲಿ ನಯಾ ಲುಕ್ ದೊರೆಯುವುದು. ಅಷ್ಟೇಕೆ! ಆಕರ್ಷಕವಾಗಿಯೂ ಕಾಣುವುದು. ಅದಕ್ಕೆ ಒಂದಿಷ್ಟು ಫ್ಯಾಷನ್ ಟ್ರಿಕ್ಸ್ ಫಾಲೋ ಮಾಡಬೇಕಷ್ಟೇ!
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ | Winter Fashion | ವಿಂಟರ್ ಫ್ಯಾಷನ್‌ನಲ್ಲಿ ಯುವತಿಯರ ಮನಗೆದ್ದ ಲಾಂಗ್ ಶ್ರಗ್ಸ್