Site icon Vistara News

Deepinder Goyal:  ಮೆಕ್ಸಿಕನ್ ಮಾಡೆಲ್‌ ಜತೆ ವಿವಾಹವಾದ ಜೊಮಾಟೊ ಸಿಇಒ!

Zomato CEO Deepinder Goyal

ಬೆಂಗಳೂರು: ಜೊಮಾಟೊ ಸಿಇಒ ದೀಪಿಂದರ್ ಗೋಯಲ್ (Deepinder Goyal ) ಅವರು ಮಾಡೆಲ್ ಗ್ರೀಸಿಯಾ ಮುನೋಝ್ (Grecia Munoz) ಅವರನ್ನು ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ. ಫುಡ್‌ ಡೆಲವರಿ ಪ್ಲ್ಯಾಟ್‌ಫಾರ್ಮ್‌ ಸಂಸ್ಥಾಪಕ ಗೋಯಲ್ ಮತ್ತು ಮೆಕ್ಸಿಕನ್ ಮೂಲದ ಗ್ರೀಸಿಯಾ ಫೆಬ್ರವರಿಯಲ್ಲಿ ತಮ್ಮ ಹನಿಮೂನ್‌ನಿಂದ ಹಿಂತಿರುಗಿದ್ದಾರೆ ಎಂದು ವರದಿಯಾಗಿದೆ.

ಗ್ರೀಸಿಯಾ ಮುನೋಝ್ ಸದ್ಯ ಭಾರತದಲ್ಲಿ ಇದ್ದು, ಟೆಲಿವಿಷನ್‌ ಹೋಸ್ಟ್‌ ಕೂಡ ಆಗಿದ್ದಾರೆ ಎನ್ನಲಾಗಿದೆ. ಜನವರಿಯಲ್ಲಿ, ಮುನೋಝ್ ಅವರು ದೆಹಲಿಯ ಪ್ರಸಿದ್ಧ ಸ್ಥಳಗಳ ಪ್ರವಾಸದ ಫೋಟೊಗಳನ್ನು ಹಂಚಿಕೊಂಡಿದ್ದರು. 2022ರಲ್ಲಿ ಅಮೆರಿಕದಲ್ಲಿ ನಡೆದ ಮೆಟ್ರೋಪಾಲಿಟನ್ ಫ್ಯಾಶನ್ ವೀಕ್‌ನ ವಿಜೇತ ಕೂಡ ಮುನೋಝ್ ಆಗಿದ್ದರು. ವರದಿ ಪ್ರಕಾರ ದೀಪಿಂದರ್ ಗೋಯಲ್ ಅವರ ಎರಡನೇ ಮದುವೆ ಇದಾಗಿದೆ.

ಗುರ್ಗಾಂವ್ ಮೂಲದ ದೀಪಿಂದರ್ ಗೋಯಲ್ ಅವರಿಗೆ 41 ವರ್ಷ. 2008ರಲ್ಲಿ ಕನ್ಸಲ್ಟಿಂಗ್ ಫರ್ಮ್ ಬೈನ್ & ಕಂಪನಿಯಲ್ಲಿ ಕೆಲಸ ಬಿಟ್ಟ ನಂತರ ರೆಸ್ಟೋರೆಂಟ್ ಅಗ್ರಿಗೇಟರ್ ಮತ್ತು ಫುಡ್ ಡೆಲಿವರಿ ಕಂಪನಿ ಜೊಮಾಟೊ ಸ್ಥಾಪಿಸಿದರು.

ಇದನ್ನೂ ಓದಿ: Zomato Pure Veg: ʼಜೊಮ್ಯಾಟೋ ಪ್ಯೂರ್‌ ವೆಜ್‌ʼ ಡೆಲಿವರಿಗೆ ಅಪಹಾಸ್ಯ? ʼಜಾಹೀರಾತು ಮಾಲೀಕ ನಾನಲ್ಲʼ ಎಂದ ಸ್ವಿಗ್ಗಿ!

ಜೊಮಾಟೊ ಪ್ಯೂರ್‌ ವೆಜ್‌ ಫು‌ಡ್!

ʼಪ್ಯೂರ್‌ ವೆಜ್‌ʼ ಹೊಸ ಸೇವೆಯ ಅಡಿಯಲ್ಲಿ, ಸಸ್ಯಾಹಾರಿಗಳಿಗೆ ಆಹಾರವನ್ನು ವಿತರಿಸುವವರಿಗೆ ಹಸಿರು ಸಮವಸ್ತ್ರವನ್ನು ಅಳವಡಿಸುವ ತನ್ನ ನಿರ್ಧಾರವನ್ನು ಜೊಮಾಟೊ ಹಿಂತೆಗೆದುಕೊಂಡಿತ್ತು. ತನ್ನ ಎಲ್ಲಾ ಡೆಲಿವರಿ ಬಾಯ್ಸ್‌ ಕೆಂಪು ಬಣ್ಣದ ಸಮವಸ್ತ್ರವನ್ನೇ (red uniform) ಧರಿಸಲಿದ್ದಾರೆ ಎಂದು ಜೊಮಾಟೊ ಹೇಳಿದೆ. ಆದರೆ ಶುದ್ಧ ಸಸ್ಯಾಹಾರ ಪ್ರತ್ಯೇಕ ವಿತರಣೆ ಮುಂದುವರಿಯಲಿದೆ.

ಇದನ್ನು ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ಒಪ್ಪಿದ್ದು, ಹಸಿರು ಸಮವಸ್ತ್ರ ರದ್ದು ಮಾಡಿರುವ ಬಗ್ಗೆ ಸ್ಪಷ್ಟನೆ ನೀಡಿದ್ದರು. “ನಮ್ಮ ಡೆಲಿವರಿ ಬಾಯ್‌ಗಳ ಸುರಕ್ಷತೆಯು ನಮಗೆ ಅತ್ಯಂತ ಮಹತ್ವದ್ದು. ಕೆಂಪು ಸಮವಸ್ತ್ರದಿಂದಾಗಿ ಅವರು ಸಮಸ್ಯೆಗೀಡಾಗದಂತೆ, ಅಥವಾ ಯಾವುದೇ ಹೌಸಿಂಗ್‌ ಸೊಸೈಟಿಗಳಿಂದ ನಿರ್ಬಂಧಕ್ಕೊಳಗಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ. ನಮ್ಮ ಕೆಲವು ಗ್ರಾಹಕರು ಸಹ ಇದರಿಂದ ತೊಂದರೆಗೆ ಸಿಲುಕಬಹುದು ಎಂದು ನಾವು ಈಗ ಅರ್ಥ ಮಾಡಿಕೊಂಡಿದ್ದೇವೆ. ನಮ್ಮ ಕಾರಣದಿಂದಾಗಿ ಅದು ಸಂಭವಿಸಿದರೆ ಅದು ಒಳಿತಲ್ಲ” ಎಂದು ಗೋಯಲ್ ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದರು.

Exit mobile version