Site icon Vistara News

Gold price | ಚಿನ್ನದ ದರದಲ್ಲಿ 110 ರೂ. ಇಳಿಕೆ, ಬೆಳ್ಳಿ 100 ರೂ. ಅಗ್ಗ

gold jewellery

ಬೆಂಗಳೂರು: ಅಮೂಲ್ಯವಾದ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಗುರುವಾರ ಅಲ್ಪ ಪ್ರಮಾಣದ (Gold price) ಇಳಿಕೆ ಉಂಟಾಗಿದೆ. ಬೆಂಗಳೂರಿನಲ್ಲಿ ೨೪ ಕ್ಯಾರಟ್‌ನ ೧೦ ಗ್ರಾಮ್‌ ಚಿನ್ನದ ದರ ಗುರುವಾರ ೧೧೦ ರೂ. ತಗ್ಗಿದ್ದು, ೫೨,೩೧೦ ರೂ.ನಷ್ಟಿತ್ತು. ಆಭರಣ ಚಿನ್ನ ಅಥವಾ ೨೨ ಕ್ಯಾರಟ್‌ ಬಂಗಾರದ ದರದಲ್ಲಿ ೧೦೦ ರೂ. ಇಳಿಕೆಯಾಗಿದ್ದು, ೧೦ ಗ್ರಾಮ್‌ ದರ ೪೭,೯೫೦ ರೂ.ನಷ್ಟು ಇತ್ತು. ಬೆಳ್ಳಿಯ ಪ್ರತಿ ಕೆ.ಜಿ ದರದಲ್ಲಿ ೧೦೦ ರೂ. ಇಳಿಕೆಯಾಗಿದ್ದು, ೬೩,೩೦೦ ರೂ.ನಷ್ಟಿತ್ತು.

ಪ್ಲಾಟಿನಮ್‌ ದರ ೧೦ ಗ್ರಾಮ್‌ಗೆ ೨೩,೮೫೦ ರೂ.ಗಳಾಗಿದ್ದು, ೨೩,೭೮೦ ರೂ.ನಷ್ಟು ಇತ್ತು. ಬಂಗಾರದ ದರದಲ್ಲಿ ಕಳೆದ ಎರಡು ದಿನಗಳಲ್ಲಿ ಒಟ್ಟು ೨೭೦ ರೂ. ತಗ್ಗಿದ್ದು, ಖರೀದಿದಾರರು ಇದರ ಉಪಯೋಗ ಪಡೆಯಬಹುದು

ಅಮೆರಿಕದಲ್ಲಿ ಡಾಲರ್‌ ಪ್ರಾಬಲ್ಯದ ಪರಿಣಾಮ ಹೂಡಿಕೆದಾರರು ಚಿನ್ನದಿಂದ ಹೂಡಿಕೆ ಹಿಂತೆಗೆದುಕೊಳ್ಳುತ್ತಿದ್ದು, ದರದ ಮೇಲೆ ಪ್ರಭಾವ ಬೀರಿತು. ಭಾರತ ತನ್ನ ಬೇಡಿಕೆಯ ಚಿನ್ನಕ್ಕೆ ಆಮದನ್ನು ಅವಲಂಬಿಸಿರುವುದರಿಂದ ಜಾಗತಿಕ ದರಗಳು ನೇರವಾಗಿ ಪ್ರಭಾವಿಸುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ ಚಿನ್ನದ ದರ 1,835 ಡಾಲರ್‌ಗೆ ಮುಟ್ಟಿದೆ.

Exit mobile version