ಬೆಂಗಳೂರು: ಬಂಗಾರದ ದರದಲ್ಲಿ ಕಳೆದ ಎರಡು ದಿನಗಳಿಂದ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ 24 ಕ್ಯಾರಟ್ ಚಿನ್ನದ ದರದಲ್ಲಿ ಗುರುವಾರ 10 ಗ್ರಾಮ್‌ಗೆ 270 ರೂ. ಹೆಚ್ಚಳವಾಗಿದೆ. (52,310 ರೂ.) 22 ಕ್ಯಾರಟ್ ಚಿನ್ನದ ದರದಲ್ಲಿ 250 ರೂ. ಏರಿದ್ದು 47,950 ರೂ.ಗೆ ವೃದ್ಧಿಸಿದೆ.
ಬೆಂಗಳೂರಿನಲ್ಲಿ 1 ಕೆಜಿ ಬೆಳ್ಳಿಯ ದರ 68,000 ರೂ. ಇತ್ತು. ಆದರೆ ಪ್ಲಾಟಿನಮ್ ದರದಲ್ಲಿ 10 ಗ್ರಾಮ್‌ಗೆ 20 ರೂ. ಏರಿಕೆಯಾಗಿದ್ದು, 25,120 ರೂ. ನಷ್ಟಿತ್ತು.
.ಭಾರತ ತನ್ನ ಬೇಡಿಕೆಯ ಚಿನ್ನಕ್ಕೆ ಆಮದನ್ನು ಅವಲಂಬಿಸಿರುವುದರಿಂದ ಜಾಗತಿಕ ದರಗಳು ನೇರವಾಗಿ ಪ್ರಭಾವಿಸುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ದರ 1,835 ಡಾಲರ್‌ಗೆ ಮುಟ್ಟಿದೆ.
ಒಟ್ಟಾರೆಯಾಗಿ ಬಂಗಾರದ ದರ ಉನ್ನತ ಮಟ್ಟದಲ್ಲಿದ್ದರೂ, ಜ್ಯುವೆಲ್ಲರ್ಸ್ ತಮ್ಮ ಗ್ರಾಹಕರಿಗೆ ಡಿಸ್ಕೌಂಟ್‌ಗಳು ಹಾಗೂ ಇತರ ಸೌಲಭ್ಯಗಳನ್ನು ನೀಡುತ್ತಿವೆ.