ಬೆಂಗಳೂರು: ಕಳೆದ ಮೂರು ದಿನಗಳಿಂದ ಯಥಾಸ್ಥಿತಿಯಲ್ಲಿದ್ದ ಬಂಗಾರದ ದರದಲ್ಲಿ 110 ರೂ. ಏರಿಕೆಯಾಗಿದೆ.
10 ಗ್ರಾಮ್‌ನ 24 ಕ್ಯಾರಟ್ ಚಿನ್ನದ ದರ 52,200 ರೂ.ಗೆ ವೃದ್ಧಿಸಿದೆ. 22 ಕ್ಯಾರಟ್ ಬಂಗಾರದ ದರ 47,850 ರೂ.ಗೆ ಹೆಚ್ಚಳವಾಗಿದೆ. ಒಂದು ಕೆಜಿ ಬೆಳ್ಳಿಯ ದರ 67,000 ರೂ.ಗೆ ನಿಗದಿಯಾಗಿದೆ. 10 ಗ್ರಾಮ್ ಪ್ಲಾಟಿನಮ್ ದರ 23,880 ರೂ.ಗೆ ಅಲ್ಪ ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ದರವನ್ನು ಅವಲಂಬಿಸಿ ಭಾರತದಲ್ಲಿ ಚಿನ್ನದ ದರ ನಿಗದಿಯಾಗುತ್ತದೆ. ಭಾರತ ಬಂಗಾರವನ್ನು ಆಮದು ಮಾಡಿಕೊಳ್ಳುವುದು ಅನಿವಾರ್ಯವಾದ್ದರಿಂದ ಡಾಲರ್ ಎದುರು ರೂಪಾಯಿ ಮೌಲ್ಯ, ಆಮದು ವೆಚ್ಚ ಕೂಡ ದರದ ಮೇಲೆ ಪ್ರಭಾವ ಬೀರುತ್ತದೆ.