ಬೆಂಗಳೂರು: ಬಂಗಾರದ ದರ ಕಳೆದ ಎರಡು ದಿನಗಳಿಂದ ಏರಿಕೆ ಉಂಟಾಗಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್ ಚಿನ್ನದ ದರದಲ್ಲಿ ಗುರುವಾರ 110 ರೂ. ಹೆಚ್ಚಳವಾಗಿದೆ. 22 ಕ್ಯಾರಟ್ ಚಿನ್ನದ ದರದಲ್ಲಿ 100 ರೂ. ಏರಿದ್ದು 47,700 ರೂ.ಗೆ ವೃದ್ಧಿಸಿದೆ.
ಬೆಂಗಳೂರಿನಲ್ಲಿ 1 ಕೆಜಿ ಬೆಳ್ಳಿಯ ದರದಲ್ಲಿ 300 ರೂ. ಹೆಚ್ಚಳವಾಗಿದ್ದು, 68,000 ರೂ. ವೃದ್ಧಿಸಿದೆ. ಆದರೆ ಪ್ಲಾಟಿನಮ್ ದರದಲ್ಲಿ 10 ಗ್ರಾಮ್‌ಗೆ 210 ರೂ. ಇಳಿಕೆಯಾಗಿದ್ದು, 25,230 ರೂ.ಗೆ ತಗ್ಗಿದೆ.
.ಭಾರತ ತನ್ನ ಬೇಡಿಕೆಯ ಚಿನ್ನಕ್ಕೆ ಆಮದನ್ನು ಅವಲಂಬಿಸಿರುವುದರಿಂದ ಜಾಗತಿಕ ದರಗಳು ನೇರವಾಗಿ ಪ್ರಭಾವಿಸುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ದರ 1,835 ಡಾಲರ್‌ಗೆ ಮುಟ್ಟಿದೆ.
ಒಟ್ಟಾರೆಯಾಗಿ ಬಂಗಾರದ ದರ ಉನ್ನತ ಮಟ್ಟದಲ್ಲಿದ್ದರೂ, ಜ್ಯುವೆಲ್ಲರ್ಸ್ ತಮ್ಮ ಗ್ರಾಹಕರಿಗೆ ಡಿಸ್ಕೌಂಟ್‌ಗಳು ಹಾಗೂ ಇತರ ಸೌಲಭ್ಯಗಳನ್ನು ನೀಡುತ್ತಿವೆ.