ಬೆಂಗಳೂರು: ಬಂಗಾರದ ದರದಲ್ಲಿ ಶನಿವಾರ ದಿಢೀರ್ 540 ರೂ. ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ 10 ಗ್ರಾಮ್‌ನ 24 ಕ್ಯಾರಟ್ ಚಿನ್ನದ ದರ 52,470 ರೂ.ಗೆ ವೃದ್ಧಿಸಿದೆ. 22 ಕ್ಯಾರಟ್ ಬಂಗಾರದ ದರ 48,100 ರೂ.ಗೆ ಏರಿಕೆಯಾಗಿದೆ.
ಬೆಳ್ಳಿಯ ದರ ಪ್ರತಿ ಕೆ.ಜಿಗೆ 1,500 ರೂ. ಏರಿಕೆಯಾಗಿದ್ದು, 68,500 ರೂ.ಗೆ ಜಿಗಿದಿದೆ. ಪ್ಲಾಟಿನಮ್ ದರ 10 ಗ್ರಾಮ್‌ಗೆ 25,460 ರೂ.ಗೆ ವೃದ್ಧಿಸಿದೆ.
ಬಂಗಾರದ ದರದಲ್ಲಿ ಕಳೆದ ಎರಡು ದಿನಗಳಿಂದ ಏರುಗತಿ ಕಂಡು ಬಂದಿತ್ತು. ಬೆಂಗಳೂರಿನಲ್ಲಿ 24 ಕ್ಯಾರಟ್‌ನ 10 ಗ್ರಾಮ್ ಬಂಗಾರದ ದರ ಶುಕ್ರವಾರ 110 ರೂ. ವೃದ್ಧಿಸಿತ್ತು. ಶನಿವಾರ 540 ರೂ. ಏರಿದೆ.ಭಾರತ ತನ್ನ ಬೇಡಿಕೆಯ ಚಿನ್ನಕ್ಕೆ ಆಮದನ್ನು ಅವಲಂಬಿಸಿರುವುದರಿಂದ ಜಾಗತಿಕ ದರಗಳು ನೇರವಾಗಿ ಪ್ರಭಾವಿಸುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ದರ 1,835 ಡಾಲರ್‌ಗೆ ಮುಟ್ಟಿದೆ.