ಬೆಂಗಳೂರು: ಬಂಗಾರದ ದರದಲ್ಲಿ ಕಳೆದ ಎರಡು ದಿನಗಳಲ್ಲಿ 660 ಏರಿಕೆಯಾಗಿದೆ. ಬೆಳ್ಳಿಯ ದರದಲ್ಲಿ ಕೆ.ಜಿಗೆ 600 ರೂ. ವೃದ್ಧಿಸಿದೆ. ಪ್ಲಾಟಿನಮ್ ದರ ಯಥಾಸ್ಥಿತಿಯಲ್ಲಿದೆ.
24 ಕ್ಯಾರಟ್ ಬಂಗಾರದ ದರ 52,760 ರೂ.ಗೆ ವೃದ್ಧಿಸಿದೆ. ಆಭರಣ ಚಿನ್ನ ಅಥವಾ 22 ಕ್ಯಾರಟ್ ಸ್ವರ್ಣ ದರ 48,360 ರೂ.ಗೆ ಏರಿದೆ. ಪ್ಲಾಟಿನಮ್ ದರ 10 ಗ್ರಾಮ್‌ಗೆ 24,420 ರೂ. ಆಗಿದೆ. ಬೆಳ್ಳಿಯ ದರ 67,500 ರೂ.ಗೆ ಏರಿದೆ.
.ಭಾರತ ತನ್ನ ಬೇಡಿಕೆಯ ಚಿನ್ನಕ್ಕೆ ಆಮದನ್ನು ಅವಲಂಬಿಸಿರುವುದರಿಂದ ಜಾಗತಿಕ ದರಗಳು ನೇರವಾಗಿ ಪ್ರಭಾವಿಸುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ದರ 1,848 ಡಾಲರ್‌ಗೆ ಮುಟ್ಟಿದೆ.
ಒಟ್ಟಾರೆಯಾಗಿ ಬಂಗಾರದ ದರ ಉನ್ನತ ಮಟ್ಟದಲ್ಲಿದ್ದರೂ, ಜ್ಯುವೆಲ್ಲರ್ಸ್ ತಮ್ಮ ಗ್ರಾಹಕರಿಗೆ ಡಿಸ್ಕೌಂಟ್‌ಗಳು ಹಾಗೂ ಇತರ ಸೌಲಭ್ಯಗಳನ್ನು ನೀಡುತ್ತಿವೆ.