ಬೆಂಗಳೂರು: ಬಂಗಾರದ ದರದಲ್ಲಿ ಕಳೆದ ಎರಡು ದಿನಗಳಿಂದ ದರ ಅಲ್ಪ ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ 24 ಕ್ಯಾರಟ್ ಚಿನ್ನದ ದರ 52,090 ರೂ.ಗೆ ಇಳಿಕೆಯಾಗಿದೆ. ಭಾನುವಾರಕ್ಕೆ ಹೋಲಿಸಿದರೆ 10 ರೂ. ಇಳಿಕೆಯಾಗಿದೆ. 22 ಕ್ಯಾರಟ್ ಬಂಗಾರದ ದರ 47,740 ರೂ.ಗೆ ಇಳಿದಿದೆ. ಬೆಳ್ಳಿಯ ದರ ಪ್ರತಿ ಕೆಜಿಗೆ 67,500 ರೂ.ಗೆ ಹಾಗೂ ಪ್ಲಾಟಿನಮ್ ದರ 10 ಗ್ರಾಮ್ಗೆ 25,250 ರೂ.ನಷ್ಟಿತ್ತು.
.ಭಾರತ ತನ್ನ ಬೇಡಿಕೆಯ ಚಿನ್ನಕ್ಕೆ ಆಮದನ್ನು ಅವಲಂಬಿಸಿರುವುದರಿಂದ ಜಾಗತಿಕ ದರಗಳು ನೇರವಾಗಿ ಪ್ರಭಾವಿಸುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ದರ 1,835 ಡಾಲರ್ಗೆ ಮುಟ್ಟಿದೆ.
ಒಟ್ಟಾರೆಯಾಗಿ ಬಂಗಾರದ ದರ ಉನ್ನತ ಮಟ್ಟದಲ್ಲಿದ್ದರೂ, ಜ್ಯುವೆಲ್ಲರ್ಸ್ ತಮ್ಮ ಗ್ರಾಹಕರಿಗೆ ಡಿಸ್ಕೌಂಟ್ಗಳು ಹಾಗೂ ಇತರ ಸೌಲಭ್ಯಗಳನ್ನು ನೀಡುತ್ತಿವೆ.