ಬೆಂಗಳೂರು: ಕಳೆದ ಮೂರು ದಿನಗಳಲ್ಲಿ ಚಿನ್ನದ ದರದಲ್ಲಿ ಒಟ್ಟು 850 ರೂ. ಏರಿಕೆಯಾಗಿದೆ.
ಬೆಂಗಳೂರಿನಲ್ಲಿ 24 ಕ್ಯಾರಟ್‌ನ 10 ಗ್ರಾಮ್ ಸ್ವರ್ಣ ದರದಲ್ಲಿ ಗುರುವಾರ 160 ರೂ. ಹೆಚ್ಚಳವಾಗಿದೆ. 22 ಕ್ಯಾರಟ್ ಚಿನ್ನದ ದರದಲ್ಲಿ 150 ರೂ. ಏರಿಕೆಯಾಗಿದೆ.
ಬೆಳ್ಳಿಯ ದರದಲ್ಲಿ ಕೆ.ಜಿಗೆ 400 ರೂ. ಹೆಚ್ಚಳವಾಗಿದ್ದು, 66,500 ರೂ.ಗೆ ವೃದ್ಧಿಸಿದೆ. ಪ್ಲಾಟಿನಮ್ ದರ ಯಥಾಸ್ಥಿತಿಯಲ್ಲಿದ್ದು, 10 ಗ್ರಾಮ್ ಗೆ 23,740 ರೂ.ಗೆ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರವನ್ನು ಆಧರಿಸಿ ಭಾರತದಲ್ಲಿ ಸ್ಥಳೀಯ ದರಗಳು ವ್ಯತ್ಯಾಸವಾಗುತ್ತವೆ. ಚಿನ್ನದ ಬೇಡಿಕೆಗೆ ಆಮದನ್ನು ಅವಲಂಬಿಸಿರುವುದು ಇದಕ್ಕೆ ಕಾರಣ.
ದೇಶದಲ್ಲಿ ಬಂಗಾರದ ಉತ್ಪಾದನೆ ಅತ್ಯಲ್ಪ. ಇತ್ತೀಚೆಗೆ ವಿದೇಶಿ ಮಾರುಕಟ್ಟೆಯಲ್ಲಿ ದರಗಳು ಏರುಗತಿಯಲ್ಲಿದೆ.
ಇದನ್ನೂ ಓದಿ: GOLD PRICE: ಅಂಬರಕ್ಕೇರಿದ ಬಂಗಾರದ ದರ, ದಿಢೀರ್ 660 ರೂ. ಜಿಗಿತ, ಬೆಳ್ಳಿ, ಪ್ಲಾಟಿನಂ ಅಗ್ಗ