Site icon Vistara News

Gold Rate Today: ಬಂಗಾರದ ದರದಲ್ಲಿ ತುಸು ಇಳಿಕೆ, ಬೆಳ್ಳಿ ಯಥಾಸ್ಥಿತಿ

gold rate today

ಬೆಂಗಳೂರು: 22 ಕ್ಯಾರೆಟ್‌ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆಗಳು (Gold Rate Today) ಸೋಮವಾರ ಪ್ರತಿ ಗ್ರಾಂಗೆ ₹ 10ರಷ್ಟು ಕಡಿಮೆಯಾಗಿದೆ. 22 ಕ್ಯಾರೆಟ್‌ ಚಿನ್ನದ ಬೆಲೆ ಒಂದು ಗ್ರಾಂಗೆ ₹ 5525, ಎಂಟು ಗ್ರಾಂಗೆ (ಪವನ್‌) ₹ 44,200, 10 ಗ್ರಾಂಗೆ ₹ 55,250ರಲ್ಲಿದೆ. 24 ಕ್ಯಾರೆಟ್‌ ಚಿನ್ನದ ಒಂದು ಗ್ರಾಂನ ಬೆಲೆ ₹ 6,028 ಆಗಿದ್ದರೆ, ಎಂಟು ಗ್ರಾಂಗೆ ₹ 48,224 ಹಾಗೂ 10 ಗ್ರಾಂಗೆ ₹ 60,28೦ ಆಗಿದೆ.

ಇದೇ ವೇಳೆ ಬೆಳ್ಳಿ ಬೆಲೆ ಹಿಂದಿನ ದಿನದಂತೆಯೇ ಇದೆ. ಒಂದು ಗ್ರಾಂ ಬೆಳ್ಳಿಯ ಬೆಲೆ ₹ 77ರಷ್ಟಿದ್ದರೆ, 10 ಗ್ರಾಂಗೆ ₹ 770 ಖರ್ಚು ಮಾಡಬೇಕಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ದರ ಶೇ.0.28ರಷ್ಟು ಕಡಿಮೆಯಾಗಿದ್ದು, ಪ್ರತಿ ಔನ್ಸ್‌ಗೆ 1,955 ಡಾಲರ್‌ಗಳಿಗೆ ತಲುಪಿದೆ. ನ್ಯೂಯಾರ್ಕ್‌ನಲ್ಲಿ ಬೆಳ್ಳಿ ಔನ್ಸ್‌ಗೆ ಶೇ.0.35ರಷ್ಟು ಇಳಿಕೆಯಾಗಿ 24.32 ಡಾಲರ್‌ಗಳಿಗೆ ತಲುಪಿದೆ.

ನಗರ 22 ಕ್ಯಾರಟ್ ‌24 ಕ್ಯಾರಟ್
ದಿಲ್ಲಿ 55,400 60,430
ಮುಂಬಯಿ 55,250 60,280
ಬೆಂಗಳೂರು 55,350 60,380
ಕೋಲ್ಕತಾ 55,250 60,280
ಲಖನೌ 55,500 60,530
ಜೈಪುರ 55,500 60,530
ಪಟನಾ 55,400 60,430
ಭುವನೇಶ್ವರ55,350 60,380
ಹೈದರಾಬಾದ್ ‌55,250 60,280

ಬಂಗಾರದ ದರದ ಮೇಲೆ ಪ್ರಭಾವ ಬೀರುವ ಅಂಶಗಳು: ಬೇಡಿಕೆ ಮತ್ತು ಪೂರೈಕೆಯು ಬಂಗಾರದ ದರವನ್ನು ನಿರ್ಧರಿಸುತ್ತದೆ. ಬೇಡಿಕೆ ಏರಿಕೆಯಾದಾಗ ದರ ಕೂಡ ವೃದ್ಧಿಸುತ್ತದೆ.

ಜಾಗತಿಕ ಆರ್ಥಿಕ ಪರಿಸ್ಥಿತಿ ಕೂಡ ಬಂಗಾರದ ದರದ ಮೇಲೆ ಪ್ರಭಾವ ಬೀರುತ್ತದೆ. ಉದಾಹರಣೆಗೆ ಜಾಗತಿಕ ಆರ್ಥಿಕತೆ ಮಂದಗತಿಯಲ್ಲಿ ಇದ್ದಾಗ ಹೂಡಿಕೆದಾರರು ಬಂಗಾರದಲ್ಲಿ ಹೂಡಿಕೆ ಮಾಡುತ್ತಾರೆ. ಆಗ ಅದರ ದರ ಏರುತ್ತದೆ. ರಾಜಕೀಯ ಅಸ್ಥಿರತೆ ಅಥವಾ ಸಂಘರ್ಷ ಇದ್ದಾಗ ಕೂಡ ಬಂಗಾರದ ದರ ವ್ಯತ್ಯಾಸವಾದೀತು. ಭಾರತ ಜಗತ್ತಿನ ಪ್ರಮುಖ ಬಂಗಾರ ಆಮದು ರಾಷ್ಟ್ರಗಳಲ್ಲೊಂದು.

ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚು ಚಿನ್ನದ ಗಟ್ಟಿ ಮತ್ತು ನಾಣ್ಯಗಳನ್ನು ತಯಾರಿಸುವ ದೇಶ. ಭಾರತೀಯರ ಮನೆಗಳಲ್ಲಿ 25,000 ಟನ್‌ ಬಂಗಾರ ಇರಬಹುದು ಎಂದು ಅಂದಾಜು ಮಾಡಲಾಗಿದೆ. ಆದ್ದರಿಂದ ಈ ಬಂಗಾರದಲ್ಲಿ ಕೆಲ ಭಾಗವನ್ನು ಆರ್ಥಿಕತೆಗೆ ತರಲು ಸರ್ಕಾರ ಆಸಕ್ತಿ ವಹಿಸಿದೆ. ಈ ನಿಟ್ಟಿನಲ್ಲಿ ಗೋಲ್ಡ್‌ ಮಾನಿಟೈಸೇಶನ್‌ ಸ್ಕೀಮ್ ಇದೆ. ಚಿನ್ನದ ಗಟ್ಟಿ ಮತ್ತು ಕಾಯಿನ್‌ ಮಾರುಕಟ್ಟೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. 2007ರಲ್ಲಿ ಗೋಲ್ಡ್‌ ಇಟಿಎಫ್‌ ಅನ್ನು ಬಿಡುಗಡೆಗೊಳಿಸಲಾಯಿತು.

ಕೋವಿಡ್‌ ಸಮಯದಲ್ಲಿ ಚಿನ್ನದ ಬೇಡಿಕೆ ಕುಸಿದಿತ್ತು. ಆದರೆ 2022ರಲ್ಲಿ ಮತ್ತೆ ಬಂಗಾರದ ವಹಿವಾಟು ಚೇತರಿಸಿದೆ. 2022ರಲ್ಲಿ ಗೋಲ್ಡ್‌ ಇಟಿಎಫ್‌ನಲ್ಲಿ 38 ಟನ್‌ ಬಂಗಾರ ಇತ್ತು. ಗೋಲ್ಡ್‌ ಮಾನಿಟೈಸೇಶನ್‌ ಸ್ಕೀಮ್‌ನಲ್ಲಿ ವಾರ್ಷಿಕ 2.25% ಬಡ್ಡಿ ದರ ಸಿಗುತ್ತದೆ. ಲಾಕ್‌ ಇನ್‌ ಅವಧಿ 5 ವರ್ಷಗಳು.

ಇದನ್ನೂ ಓದಿ: Gold rate today : ಬಂಗಾರದ ದರದಲ್ಲಿ 250 ರೂ. ಏರಿಕೆ

Exit mobile version