ಬೆಂಗಳೂರು: ಕಳೆದ ಮೂರು ದಿನಗಳಿಂದ ಬಂಗಾರ ಮತ್ತು ಬೆಳ್ಳಿಯ ದರದಲ್ಲಿ ಯಥಾಸ್ಥಿತಿ ಉಂಟಾಗಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್‌ನ 10 ಗ್ರಾಮ್ ಚಿನ್ನದ ದರ 52,090 ರೂ.ಗಳ ಯಥಾಸ್ಥಿತಿಯಲ್ಲಿ ಇದೆ. 22 ಕ್ಯಾರಟ್ ಚಿನ್ನದ ದರ 10 ಗ್ರಾಮ್‌ಗೆ 47,750 ರೂ. ಇತ್ತು. 1 ಕೆಜಿ ಬೆಳ್ಳಿಯ ದರ 67,000 ರೂ.ಇತ್ತು. ಪ್ಲಾಟಿನಮ್ ಲೋಹದ ದರ 10 ಗ್ರಾಮ್ ಗೆ 23,800 ರೂ. ಇತ್ತು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಚಿನ್ನದ ದರಗಳು ದೇಶಿ ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತದೆ. ಭಾರತ ತನ್ನ ಬಹುಪಾಲು ಬಂಗಾರವನ್ನು ಆಮದು ಮಾಡಿಕೊಳ್ಳಬೇಕಾಗಿರುವುದು ಇದಕ್ಕೆ ಕಾರಣ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ವಿನಿಮಯ ಬೆಲೆ ಕೂಡ ಪ್ರಭಾವ ಬೀರುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಚಿನ್ನದ ದರ ಮಂದಗತಿಯಲ್ಲಿದೆ.
ಇದನ್ನೂ ಓದಿ:ಬಿಹಾರದಲ್ಲೊಂದು KGF !: ಅನ್ವೇಷಣೆ ಮಾಡಲು ಸರ್ಕಾರ ಅನುಮತಿ