Site icon Vistara News

Gold price | ಬಂಗಾರದ ದರದಲ್ಲಿ ಯಥಾಸ್ಥಿತಿ, ಬೆಳ್ಳಿ 4 ದಿನಗಳಲ್ಲಿ 2,300 ರೂ. ಅಗ್ಗ

gold bond

ಬೆಂಗಳೂರು: ಚಿನ್ನದ ದರದಲ್ಲಿ ಸೋಮವಾರ ಯಥಾಸ್ಥಿತಿ ಇದ್ದು, ಬೆಂಗಳೂರಿನಲ್ಲಿ (Gold price) 24 ಕ್ಯಾರಟ್‌ನ ಪ್ರತಿ 10 ಗ್ರಾಮ್‌ ಬಂಗಾರದ ದರ 50,240 ರೂ. ಇತ್ತು. ( Gold price) ಬೆಳ್ಳಿಯ ದರ ಕೂಡ ಕೆಲವು ವರ್ಷಗಳ ಹಿಂದಿನ ದರಕ್ಕೆ ಹೋಲಿಸಿದರೆ ಈಗ ಕೆಳ ಮಟ್ಟದಲ್ಲಿದೆ. ಕಳೆದ ನಾಲ್ಕು ದಿನಗಳಿಂದ ಪ್ರತಿ ಕೆ.ಜಿ ದರದಲ್ಲಿ 2,300 ರೂ. ಇಳಿಕೆಯಾಗಿದ್ದು, ಕೆ.ಜಿಗೆ 60,700 ರೂ.ಗೆ ತಗ್ಗಿದೆ.

ಆಭರಣ ಚಿನ್ನ ಅಥವಾ 22 ಕ್ಯಾರಟ್‌ ಬಂಗಾರದ ದರ 46,050 ರೂ.ಗೆ ಇತ್ತು. ಪ್ಲಾಟಿನಮ್‌ ದರದಲ್ಲಿ 310 ರೂ. ಏರಿಕೆಯಾಗಿದ್ದು, 10 ಗ್ರಾಮ್‌ ದರ 22,620 ರೂ.ಗೆ ಏರಿಕೆಯಾಗಿದೆ.

ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ ಮತ್ತಷ್ಟು ಬಡ್ಡಿ ದರ ಇಳಿಕೆ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸ್ವರ್ಣ ದರ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ದರ ಮತ್ತು ಡಾಲರ್‌ ಎದುರು ರೂಪಾಯಿಯ ಮೌಲ್ಯವನ್ನು ಆಧರಿಸಿ ಬಂಗಾರದ ದರದಲ್ಲಿ ಏರಿಳಿತವಾಗುತ್ತದೆ. ಚಿನ್ನದ ದರ ಇಳಿಕೆ ತಾತ್ಕಾಲಿಕವಾಗಿದ್ದು, ಮುಂಬರುವ ದಿನಗಳಲ್ಲಿ ದರ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

Exit mobile version