Site icon Vistara News

7th Pay Commission : ಸರ್ಕಾರಿ ನೌಕರರಿಗೆ ಬಂಪರ್‌; 7ನೇ ವೇತನ ಆಯೋಗದ ಶಿಫಾರಸುಗಳ ಫುಲ್‌ ಲಿಸ್ಟ್‌

7th Pay commission Recommendations

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ರಚಿಸಲಾಗಿದ್ದ 7ನೇ ರಾಜ್ಯ ವೇತನ ಆಯೋಗವು (7th Pay Commission) ಶನಿವಾರ ತನ್ನ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಸಲ್ಲಿಸಿದೆ. ಈ ವರದಿಯಲ್ಲಿ ಈ ವರದಿಯಲ್ಲಿ ರಾಜ್ಯ ಸರ್ಕಾರಿ (Government Employees) ನೌಕರರ ವೇತನವನ್ನು ಶೇ. 27ರಷ್ಟು ಹೆಚ್ಚಿಸಲು ಶಿಫಾರಸು (Recommendation for Salary hike) ಮಾಡಲಾಗಿದೆ. ಇದರ ಜತೆಗೆ ಮೂಲ ವೇತನವನ್ನು (Basic salary) 27,000 ರೂ.ಗಳಿಗೆ ಹೆಚ್ಚಿಸುವಂತೆಯೂ ಶಿಫಾರಸು ಮಾಡಲಾಗಿದೆ. ಇಷ್ಟು ಮಾತ್ರವಲ್ಲ, ಆಯೋಗವು ಇನ್ನೂ ಹಲವಾರು ಶಿಫಾರಸುಗಳನ್ನು ಮಾಡಿದೆ.

ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಅಧ್ಯಕ್ಷತೆಯ ರಾಜ್ಯದ ಏಳನೇ ವೇತನ ಆಯೋಗವು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವರದಿ ಸಲ್ಲಿಸಿತು. ವರದಿಯನ್ನು ಸ್ವೀಕರಿಸಿದ ಸಿದ್ದರಾಮಯ್ಯ ಅವರು ವರದಿಯಲ್ಲಿರುವ ಅಂಶಗಳನ್ನು ಆರ್ಥಿಕ ಇಲಾಖೆಯ (Finance department) ಪರಿಶೀಲನೆ ಒಪ್ಪಿಸಲಾಗುವುದು, ಬಳಿಕ ವೇತನ ಹೆಚ್ಚಳದ (Recommendation for salary hike) ಸಂಬಂಧಿತ ಶಿಫಾರಸನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ : 7th Pay Commission : 7ನೇ ವೇತನ ಆಯೋಗದ ವರದಿ ಸಲ್ಲಿಕೆ; 27.5 % ವೇತನ ಹೆಚ್ಚಳಕ್ಕೆ ಶಿಫಾರಸು

7ನೇ ವೇತನ ಆಯೋಗದ 40 ಪ್ರಮುಖ ಶಿಫಾರಸುಗಳು ಇಲ್ಲಿವೆ

7ನೇ ರಾಜ್ಯ ವೇತನ ಆಯೋಗ ಶಿಫಾರಸ್ಸುಗಳ ಸಾರಾ೦ಶ ಇಲ್ಲಿದೆ

1. 7ನೇ ರಾಜ್ಯ ವೇತನ ಆಯೋಗವು ಶೇ.31 ತುಟ್ಟಿಭತ್ಯೆಯನ್ನು ವಿಲೀನಗೊಳಿಸುವ ಮೂಲಕ ಮತ್ತು ಶೇ.27.50 ರಷ್ಟು ಫಿಟ್‌ಮೆಂಟ್‌ ಪ್ರಯೋಜನವನ್ನು ಒದಗಿಸುವ ಮೂಲಕ ರಾಜ್ಯ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನವನ್ನು ತಿಂಗಳಿಗೆ ಅಸ್ತಿತ್ವದಲ್ಲಿರುವ ರೂ.17,000 ರಿ೦ದ ರೂ.27,000 ಕ್ಕೆ ಪರಿಷ್ಕರಿಸಲು ಶಿಫಾರಸ್ಸು ಮಾಡುತ್ತದೆ (ಅಧ್ಯಾಯ 5.37).

2. ವೇತನ ರಚನೆಯಲ್ಲಿ ಕನಿಷ್ಠ ಮತ್ತು ಗರಿಷ್ಠ ವೇತನದ ನಡುವೆ ಅಸ್ತಿತ್ವದಲ್ಲಿರುವ 1:8.86 ರ ಅನುಪಾತವನ್ನು ಹೆಚ್ಚು-ಕಡಿಮೆ ಹಾಗೇ ಉಳಿಸಿಕೊಳ್ಳುವುದು ಮತ್ತು ಗರಿಷ್ಠ ವೇತನವನ್ನು ರೂ.2,41,200ಕ್ಕೆ ನಿಗದಿಪಡಿಸಲು ಆಯೋಗವು ಶಿಫಾರಸ್ಸು ಮಾಡುತ್ತದೆ (ಅಧ್ಯಾಯ 5.37).

3.ಹೊಸ ವೇತನ ಶ್ರೇಣಿಗಳನ್ನು ದಿನಾ೦ಕ: 01.07.2022 ರಿ೦ದ ಕಾಲ್ಪನಿಕವಾಗಿ ಅನ್ವಯಿಸುತ್ತದೆ. ಅನುಷ್ಠಾನಗೊಳಿಸುವ ನೈಜ್ಯ ದಿನಾ೦ಕವನ್ನು ರಾಜ್ಯ ಸರ್ಕಾರವು ನಿರ್ಧರಿಸುವುದೆ೦ದು ಆಯೋಗವು ಶಿಫಾರಸ್ಸು ಮಾಡುತ್ತದೆ (ಅಧ್ಯಾಯ 5.57).

4.ನೌಕರರ ಕುಟುಂಬದ ಕನಿಷ್ಠ ಬಳಕೆ ವೆಚ್ಚದ ಲೆಕ್ಕಾಚಾರಕ್ಕಾಗಿ ಬಳಸಲಾಗುವ ಅಕ್ರೋಯ್ದ್ನಾ ಸೂತ್ರವನ್ನು ಚಾಲ್ತಿಯಲ್ಲಿರುವ ‘1’ ಮತ್ತು ‘0.8, ರ ಪ್ರಮಾಣದ ಬದಲಿಗೆ ಪ್ರಾತಿನಿಧಿಕ ಕುಟು೦ಬದ ವಯಸ್ಕ ಪುರುಷ ಮತ್ತು ಮಹಿಳಾ ಸದಸ್ಯರಿಗೆ ‘1’ ಸಮಾನ ಪ್ರಮಾಣವನ್ನು ನೀಡುವ ಮೂಲಕ, ಎರಡೂ ಲಿ೦ಗಗಳನ್ನು ಸಮಾನವಾಗಿ ಪರಿಗಣಿಸಿ, ಸ್ವಲ್ಪ ಮಟ್ಟಿಗೆ ಮಾರ್ಪಡಿಸಲಾಗಿದೆ (ಅಧ್ಯಾಯ 5.33).

5. ಪರಿಷ್ಕೃತ ಪ್ರತ್ಯೇಕ 1761/1602) ವೇತನ ಶ್ರೇಣಿಗಳೊ೦ದಿಗೆ, ಪರಿಷ್ಕತ ಮುಖ್ಯ ಶ್ರೇಣಿಯನ್ನು ರೂಪಿಸಲಾಗಿದೆ. ಚಾಲ್ತಿಯಲ್ಲಿರುವ ರೂ.400 ರಿ೦ದ ರೂ.3,100 ರ ಬದಲಿಗೆ ವಾರ್ಷಿಕ ಬಡ್ತಿ ದರಗಳು ಮುಖ್ಯ ಶ್ರೇಣಿಯಾದ್ಯ೦ತ ರೂ.650 ರಿ೦ದ ರೂ.5,000 ರದವರೆಗೆ ಆಗಿರುತ್ತದೆ (ಅಧ್ಯಾಯ 5.43).

6.ಪ್ರಸ್ತುತ ಜಾರಿಯಲ್ಲಿರುವಂತೆ, ಒ೦ದು ಕ್ಯಾಲೆ೦ಡರ್‌ ವರ್ಷದಲ್ಲಿ 1ನೇ ಜನವರಿ ಅಥವಾ 1ನೇ ಜುಲೈನಲ್ಲಿ ವಾರ್ಷಿಕ ಬಡ್ತಿ ದರಗಳನ್ನು ಮ೦ಜುರೂ ಮಾಡುವುದನ್ನು ಮುಂದುವರೆಸಲು ಆಯೋಗವು ಶಿಫಾರಸ್ಸು ಮಾಡಿರುತ್ತದೆ (ಅಧ್ಯಾಯ 5.44).

7.ಕೇಂದ್ರದ ತುಟ್ಟಿಭತ್ಯೆ ಸೂತ್ರ ಮತ್ತು ಮಾದರಿಯನ್ನು ಅಳವಡಿಸಿಕೊಳ್ಳುವುದನ್ನು ಮುಂದುವರಿಸಲಾಗುತ್ತದೆ. ದಿನಾ೦ಕ: 01.07.2022 ರ೦ತೆ. 361704 ಸೂಚ್ಯಂಕ ಮಟ್ಟದಲ್ಲಿ ಸಂಪೂರ್ಣವಾಗಿ ತಟಸ್ಮಗೊ೦ಡಿರುವ ತುಟ್ಟಿಭತ್ಯೆಯೊಂದಿಗೆ, ದಿನಾ೦ಕ: 01.07.2022 ರಿ೦ದ, ಭಾರತ ಸರ್ಕಾರವು ಮ೦ಜೂರು ಮಾಡಿದ ಪ್ರತಿ ಶೇ.1 ರಷ್ಟು ತುಟ್ಟಿಭತ್ಯೆಗೆ, ರಾಜ್ಯ ಸರ್ಕಾರಿ ನೌಕರರಿಗೆ ಮ೦ಜೂರು ಮಾಡಬೇಕಾದ ತುಟ್ಟಿಭತ್ಯೆಯು ಪರಿಷ್ಕೃತ ಮೂಲ ವೇತನದ ಶೇ.0.722 ರಷ್ಟು ಆಗಿರುತ್ತದೆ (ಅಧ್ಯಾಯ 5.65).

8.ಅನುದಾನಿತ ಶಿಕ್ಷಣ ಸ೦ಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳ ಬೋಧಕೇತರ ಸಿಬ್ಬಂದಿಗಳ ವೇತನ ಶ್ರೇಣಿಗಳನ್ನು ರಾಜ್ಯ ಸರ್ಕಾರಿ ನೌಕರರಿಗೆ ಪರಿಷ್ಕರಿಸಿದ ರೀತಿಯಲ್ಲಿಯೇ ಪರಿಷ್ಕರಿಸಬೇಕು (ಅಧ್ಯಾಯ 5.54).

9.ರಾಜ್ಯ ಸರ್ಕಾರವು, ಕೇಂದ್ರದ ವೇತನ ರಚನೆಯನ್ನು ಅಳವಡಿಸಿಕೊಳ್ಳಲು ಒಂದು ವಿಧಾನವನ್ನು ಆಯೋಗವು ರೂಪಿಸಿದೆ. ಆದಾಗ್ಯೂ ಪ್ರಸ್ತುತ, ರಾಜ್ಯ ಸರ್ಕಾರವು ಮುಖ್ಯ ಶ್ರೇಣಿ ಮತ್ತು ವಿಭಜಿತ ಪ್ರತ್ಯೇಕ ವೇತನ ಶ್ರೇಣಿಗಳನ್ನು ಒಳಗೊ೦ಡಿರುವ ಅಸ್ತಿತ್ವದಲ್ಲಿರುವ ವೇತನದ ಮಾದರಿಯನ್ನು ರಾಜ್ಯ ಸರ್ಕಾರವು ಉಳಿಸಿಕೂಳ್ಳುವುದು ಸೂಕ್ತವೆಂದು ಅಭಿಪ್ರಾಯಪಟ್ಟಿದೆ. ಭಾರತ ಸರ್ಕಾರವು ತನ್ನ ನೌಕರರಿಗೆ ಮುಂದಿನ ವೇತನವನ್ನು ಪರಿಷ್ಕರಿಸಿದಾಗ ರಾಜ್ಯ ಸರ್ಕಾರವು ಕೇಂದ್ರೀಯ ವೇತನ ರಚನೆಯ ಆಧಾರದ ಮೇಲೆ ಪರ್ಯಾಯ ರಚನೆಯನ್ನು ಅಳವಡಿಸಿಕೊಳ್ಳಲು ಸೂಕ್ತ ಸಮಯವಾಗಿರುತ್ತದೆ (ಅಧ್ಯಾಯ 6.14).

10.ಮಾಸಿಕ ಪಿಂಚಣಿ ಪ್ರಮಾಣವು ಅಂತಿಮವಾಗಿ ಪಡೆದ ಮೂಲ ವೇತನದ ಶೇ.50 ರಷ್ಟರಲ್ಲಿಯೇ ಮುಂದುವರೆಯುತ್ತದೆ ಮತ್ತು ಕುಟುಂಬ ಪಿ೦ಚಣಿಯು ಅಂತಿಮವಾಗಿ ಪಡೆದ ಮೂಲ ವೇತನದ ಶೇ.30 ರಷ್ಟರಲ್ಲಿ ಮುಂದುವರಿಯುತ್ತದೆ. ಅದರಂತೆ, ಕನಿಷ್ಠ ಪಿಂಚಣಿಯನ್ನು ರೂ.13,500 (ಕವಿಷ್ಠ ವೇತನ ರೂ. 27,000 ರ ಶೇ.50 ರಷ್ಟು) ಮತ್ತು ಗರಿಷ್ಠ ಪಿ೦ಚಣಿಯನ್ನು ರೂ.1,20,600 (ಗರಿಷ್ಠ ರೂ.2,41,200 ವೇತನದ ಶೇ.50 ರಷ್ಟು) ಪರಿಷ್ಕರಿಸುವುದು (ಅಧ್ಯಾಯ 8.18).

11.70-80 ವರ್ಷ ವಯಸ್ಸಿನ ಪಿ೦ಚಣಿದಾರರಿಗೆ ಮೂಲ ಪಿ೦ಚಣಿಯ ಹೆಚ್ಚುವರಿ ಶೇ.10 ರಷ್ಟನ್ನು ಆಯೋಗವು ಶಿಫಾರಸ್ಸು ಮಾಡುತ್ತದೆ (ಅಧ್ಯಾಯ 8.26).

12.ಆಯೋಗವು ಪಿಂಚಣಿದಾರರು ಮತ್ತು ಕುಟುಂಬ ಪಿ೦ಚಣಿದಾರರನ್ನು ಒಳಗೊಳ್ಳುವ ಉದ್ದೇಶಿತ “ಸಂಧ್ಯಾಕಿರಣ” ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಲು ಒತ್ತಾಯಿಸುತ್ತದೆ. ಮತ್ತು ಈ ಮಧ್ಯೆ, ರಾಜ್ಯ ಸರ್ಕಾರವು ಈ ಯೋಜನೆಯ ಅನುಷ್ಕಾನವನ್ನು ಪ್ರಾರ೦ಭಿಸುವವರೆಗೆ ಎಲ್ಲಾ ಪಿ೦ಚಣಿದಾರರು ಮತ್ತು ಕುಟುಂಬ ಪಿಂಚಣಿದಾರರಿಗೆ ವೈದ್ಯಕೀಯ ಭತ್ಯೆಯಾಗಿ ತಿಂಗಳಿಗೆ ರೂ.500 ಪಾವತಿಸುವಂತೆ ಶಿಫಾರಸ್ಸು ಮಾಡುತ್ತದೆ (ಅಧ್ಯಾಯ 8.37).

12.ಪಿಂಚಣಿದಾರರು ಆತ ಅಥವಾ ಆಕೆಯು ಮರಣದ ಹೊಂದಿದಲ್ಲಿ, ಅವರ ಅಂತ್ಯಕ್ರಿಯೆ ವೆಚ್ಚಗಳನ್ನು ಭರಿಸಲು ರೂ.10000. ಗಳ ಮೊತ್ತವನ್ನು ಪಿ೦ಚಣಿದಾರರ ನಾಮನಿರ್ದೇಶಿತನಿಗೆ ಪಾವತಿಸಲು ಶಿಫಾರಸ್ಸು ಮಾಡಲಾಗಿದೆ (ಅಧ್ಯಾಯ 8.39).

13.ಕರ್ನಾಟಕ ಸರ್ಕಾರಿ ನೌಕರರ (ಕುಟು೦ಬ ಪಿ೦ಚಣಿ) ನಿಯಮಗಳು, 2002 ರಲ್ಲಿ ಮಹಿಳಾ ಸರ್ಕಾರಿ ನೌಕರರು / ಪಿಂಚಣಿದಾರರು ತಮ್ಮ ಮಗು / ಮಕ್ಕಳನ್ನು ಕಲವು ಸಂದರ್ಭಗಳಲ್ಲಿ ಸ೦ಗಾತಿಯ ಬದಲಿಗೆ ಕುಟು೦ಬ ಪಿಂಚಣಿಗೆ ನಾಮನಿರ್ದೇಶನ ಮಾಡಲು ಅವಕಾಶ ಕಲ್ಪಿಸಬಹುದು ಎ೦ದು ಆಯೋಗವು ಪಸ್ತಾಪಿಸಿದೆ (ಅಧ್ಯಾಯ 8.66).

14.ಆಯೋಗವು ಅಸ್ತಿತ್ವದಲ್ಲಿರುವ ಎಲ್ಲಾ ಭತ್ಯೆಗಳ ದರಗಳನ್ನು ಪರಿಶೀಲಿಸಿ, ಕೆಲವು ಅಸ್ತಿತ್ವದಲ್ಲಿರುವ ಭತ್ಯೆಗಳನ್ನು ಹೊಸ ವರ್ಗದ ನೌಕರರಿಗೆ ವಿಸ್ತರಿಸಲು ಮತ್ತು ಹೊಸ ಭತ್ಯೆಗಳನ್ನು ನೀಡಲು ಈ ಕೆಳಕ೦ಡ ಪ್ರಮುಖ ಶಿಫಾರಸ್ಸುಗಳನ್ನು ಮಾಡಿದೆ (ಅಧ್ಯಾಯ 7.5).

15. ವೃಂದ ಸಿ ಮತ್ತು ಡಿ ನೌಕರರಿಗೆ ರಾಜ್ಯ ಗು೦ಪು ವಿಮಾ ಯೋಜನೆಯ ಮಾಸಿಕ ವಂತಿಗೆಯನ್ನು ಶೇ.100 ರಷ್ಟು ಮತ್ತು ವೃ೦ದ ಎ ಮತ್ತು ಬಿ ನೌಕರರಿಗೆ ಶೇ.50 ರಷ್ಟು ಹೆಚ್ಚಿಸುವುದು (ಅಧ್ಯಾಯ 8.44).

16.ಎ, ಬಿ ಮತ್ತು ಸಿ ಸ್ಥಳಗಳ ಮೂರು ವರ್ಗಗಳಿಗೆ ಅಸ್ತಿತ್ವದಲ್ಲಿರುವ ಶೇ.24, ಶೇ.16 ಮತ್ತು ಶೇ.8 ರಿ೦ದ ಪರಿಷ್ಕತ ಮೂಲ ವೇತನದ ಕನಿಷ್ಠ ಶೇ.20, ಶೇ.15 ಮತ್ತು ಶೇ. 75 ಕೈ ಅನುಕ್ರಮವಾಗಿ ಮನೆ ಬಾಡಿಗೆ ದರಗಳನ್ನು ಪರಿಷ್ಕರಿಸಲಾಗಿದೆ. ಶಿಫಾರಸ್ಸು ಮಾಡಲಾದ ಪರಿಷ್ಕೃತ ವೇತನ ಶ್ರೇಣಿಗಳ ಆಧಾರದ ಮೇಲೆ, ಇದು 3 ವರ್ಗಗಳಿಗೆ ತಿ೦ಗಳಿಗೆ. ರೂ.1,320, . ರೂ.1,330.. ಮತ್ತು ರೂ.690 ಅನುಕ್ರಮವಾಗಿ ಹೆಚ್ಚಳವಾಗಿರುವುದರಿ೦ದ ನಿಶ್ಚಳವಾಗಿ ಮನೆ ಬಾಡಿಗೆ ಭತ್ಯೆಯಲ್ಲಿ ಸುಮಾರು ಶೇ.40 ರಷ್ಟು ಹೆಚ್ಚಳವಾಗಿದೆ (ಅಧ್ಯಾಯ 7.18).

17. ಬಿಬಿಎಂಪಿ ವ್ಯಾಪ್ತಿಯೊಳಗಿನ ವೃ೦ದ ಎ ಮತ್ತು ಬಿ ನೌಕರರಿಗೆ ಮಾಸಿಕ ಅಸ್ತಿತ್ವದಲ್ಲಿರುವ ನಗರ ಪರಿಹಾರ ಭತ್ಯೆಯನ್ನು ರೂ.600 ರಿ೦ದ ರೂ.900 ಕ್ಕೆ ಮತ್ತು ವೃಂದ ಸಿ ಮತ್ತು ಡಿ ನೌಕರರಿಗೆ ಮಾಸಿಕ ರೂ.500 ರಿ೦ದ ರೂ.750 ಕ್ಕೆ ಹೆಚ್ಚಿಸಲಾಗಿದೆ. ನಗರ ಸಮುಚ್ಚಯಗಳಾದ ಬೆಳಗಾವಿ, ಮ೦ಗಳೂರು, ಮೈಸೂರು, ಹಾಗೂ ಪುರಸಭೆಳಾದ ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ನಗರಗಳ ವೃ೦ದ ಎ ಮತ್ತು ಬಿ ನೌಕರರಿಗೆ ಮಾಸಿಕ ರೂ.450 ರಿ೦ದ ರೂ.700 ಕ್ಕೆ ಮತ್ತು ವೃ೦ದ ಸಿ ಮತ್ತು ಡಿ ನೌಕರರಿಗೆ ಮಾಸಿಕ ರೂ.400 ರಿ೦ದ ರೂ.600 ಗಳಿಗೆ ನಗರ ಪರಿಹಾರ ಭತ್ಯೆಯನ್ನು ಪರಿಷ್ಕರಿಸಿದೆ (ಅಧ್ಯಾಯ 7.19).

18.ಸಮವಸ್ತ್ರ ಭತ್ಯೆ, ನಿಗದಿತ ಪ್ರಯಾಣ ಭತ್ಯೆ, ಸಾಗಣೆ ಭತ್ಯೆ, ರಾಜ್ಯದೊಳಗೆ ಮತ್ತು ಹೊರಗೆ ತ೦ಗವುದಕ್ಕಾಗಿ ದಿನ ಭತ್ಯೆ, ವರ್ಗಾವಣೆ ಅನುದಾನ ಮತ್ತು ಹೊರ ರಾಜ್ಯ ಭತ್ಯೆ (ದೆಹಲಿ ಹೊರತುಪಡಿಸಿ ಇತರ ಸ್ಥಳಗಳಿಗೆ) ಸಾಮಾನ್ಯವಾಗಿ ಅಸ್ತಿತ್ವದಲ್ಲಿರುವ ದರಗಳಿಗಿ೦ಂತ ಶೇ.25 ರಷ್ಟನ್ನು ಮೇಲ್ಮುಖವಾಗಿ ಹೆಚ್ಚಿಸಿ ಪರಿಷ್ಕರಿಸಲಾಗಿದೆ (ಅಧ್ಯಾಯ 7.20).

19. ಆರೋಗ್ಯ ಮತ್ತು ಕುಟು೦ಬ ಕಲ್ಯಾಣ ಇಲಾಖೆಯಲ್ಲಿನ ವೈದ್ಯರುಗಳಿಗೆ ನೀಡಲಾಗುತ್ತಿರುವ ವಿಶೇಷ ಭತ್ಯೆಯನ್ನು, ಪ್ರಸ್ತುತ ಇರುವ ವೈಪರೀತ್ಯಗಳನ್ನು ಸರಿಪಡಿಸುವ ಮೂಲಕ ಇಎಸ್‌ಐ ವೈದ್ಯರುಗಳಿಗೆ ಅವರ ಅರ್ಹತೆಗಳು ಮತ್ತು ಸೇವಾ ವರ್ಷಗಳ ಆಧಾರದ ಮೇಲೆ ವಿಸ್ತರಿಸಲು ಶಿಫಾರಸ್ಸು ಮಾಡಲಾಗಿದೆ (ಅಧ್ಯಾಯ 7.43).

20. ಅಸ್ತಿತ್ವದಲ್ಲಿರುವ ಮೂಲ ವೇತನದ ಶೇ.5 ರಷ್ಟು ನಿಯೋಜನೆ ಭತ್ಯೆ / ವಿದೇಶಿ ಸೇವಾ ಭತ್ಯೆಯ ದರವನ್ನು ಹಾಗೇ ಉಳಿಸಿಕೂೊ೦ಡು, ಚಾಲ್ತಿಯಲ್ಲಿರುವ ರೂ.200 ಗಳ ಮಿತಿಯಿಂದ ಮಾಸಿಕ ರೂ.2000 ರದ ಗರಿಷ್ಠ ಮಿತಿಗೊಳಪಟ್ಟು ಹೆಚ್ಚಿಸುವುದು (ಅಧ್ಯಾಯ 7.50).

21.ಪರಿಷ್ಕೃತ ವೇತನ ಶ್ರೇಣಿಯಲ್ಲಿಯೂ ಶೇ.15 ರಷ್ಟು ಪ್ರಭಾರ ಭತ್ಯೆಯನ್ನು ಮುಂದುವರೆಸಲು ಆಯೋಗವು ಶಿಫಾರಸ್ಸು ಮಾಡುತ್ತದೆ (ಅಧ್ಯಾಯ 7.48).

22. ಇನ್ನು ಮು೦ದೆ ಸ೦ಬ೦ಧಿಸದ ಅಥವಾ ಅಗತ್ಯವಿಲ್ಲದ ಹಲವಾರು ಹುದ್ದೆಗಳಿಗೆ ವಿಶೇಷ ಭತ್ಯೆಗಳನ್ನು ರದ್ದುಪಡಿಸಲು ಪೊಲೀಸ್‌ ಇಲಾಖೆ ಮಾಡಿದ ಪುಸ್ತಾವನೆಗೆ ಆಯೋಗವು ಸಹಮತ ವ್ಯಕ್ತಪಡಿಸಿದೆ (ಅಧ್ಯಾಯ 7.39).

ವಿಶೇಷ ಚೇತನ ನೌಕರರಿಗಾಗಿ ಆಯೋಗವು ಕೆಳಗಿನ ಶಿಫಾರಸು

23. ವಾಹನ ಭತ್ಯೆಯನ್ನು ಕೇವಲ ಅಂಧ ಮತ್ತು ಚಲನವಲನ ವೈಕಲ್ಯತೆಯುಳ್ಳ ವಿಶೇಷ ಚೇತನ ನೌಕರರಿಗೆ ಸೀಮಿತಗೊಳಿಸುವ ಬದಲಾಗಿ ಎಲ್ಲಾ ವಿಶೇಷ ಚೇತನ ನೌಕರರಿಗೆ ಈ ಸೌಲಭ್ಯವನ್ನು ವಿಸ್ತರಿಸುವುದು.

24. ಸರ್ಕಾರಿ ನೌಕರರ ವಿಕಲಚೇತನ ಮಕ್ಕಳ ಶಿಕ್ಷಣ ಭತ್ಯೆಯನ್ನು ಪ್ರತಿ ಮಗುವಿಗೆ ತಿ೦ಗಳಿಗೆ ರೂ.1,000 ರಿ೦ದ ರೂ.2,000 ಕ್ಕೆ ಹೆಚ್ಚಿಸುವುದು.

25.ಬಡ್ಡಿ ರಹಿತ ರೂ.50,0000 ಮುಂಗಡ ಅಥವಾ ಸಲಕರಣೆಗಳ ಬೆಲೆ ಯಾವುದು ಕಡಿಮೆಯೋ ಅದನ್ನು 10 ಮಾಸಿಕ ಕಂತುಗಳಲ್ಲಿ ಮರುಪಡೆಯಬಹುದಾದ ಲ್ಯಾಪ್‌ಟಾಪ್‌ಗಳು, ಡಿಜಿಟಲ್‌ ಒತ್ತಾಸೆಗಳು, AI-ಚಾಲಿತ ಸ್ಮಾರ್ಟ್‌ ಗ್ಲಾಸ್‌ಗಳು ಮತ್ತು ಇತರ ಸಾಧನಗಳನ್ನು ಖರೀದಿಸಲು ಒದಗಿಸಲಾಗುತ್ತದೆ.

26.ವಿಶೇಷ ಚೇತನ ಯಉದ್ಯೋಗಿಗಳಿಗಾಗಿ. ವಿಶೇಷವಾಗಿ ವಿನ್ಯಾಸಗೊಳಿಸಲಾದ ಯಾವುದೇ ವಾಹನದ ಖರೀದಿಗೆ ಅಸ್ತಿತ್ವದಲ್ಲಿರುವ ಶೇ.30 ರಿ೦ದ ಶೇ.40ಕ್ಕ ವಾಹನ ದರದ ಗರಿಷ್ಠ ರೂ.60,000 ಕ್ಕ ಒಳಪಟ್ಟು ಸಬ್ಸಿಡಿಯನ್ನು ಹೆಚ್ಚಿಸುವುದು.

ವಾಹನಗಳ ಖರೀದಿ ಮುಂಗಡಗಳಿಗೆ ಸ೦ಬಂಧಿಸಿದ ಶಿಫಾರಸುಗಳು

27.ಆಂತರಿಕ ದಹನ (ಐಸಿ) ಎ೦ಜಿನ್‌ ಹೊ೦ದಿರುವ ನಾಲ್ಕು ಚಕ್ರದ ವಾಹನಗಳಿಗೆ ಮುಂಗಡವನ್ನು ಈಗಿರುವ ರೂ.3 ಲಕ್ಷದಿ೦ದ ಗರಿಷ್ಠ ರೂ.6 ಲಕ್ಷಕ್ಕೆ ಹೆಚ್ಚಿಸುವುದು (ಅಧ್ಯಾಯ 7.66).

28.ಐಸಿ ಇ೦ಜಿನ್‌ಗಳನ್ನು ಹೊಂದಿರುವ ದ್ವಿಚಕ್ರ ವಾಹನಗಳಿಗೆ ಮುಂಗಡವನ್ನು ಈಗಿರುವ ರೂ.50,000 ದಿ೦ದ ಗರಿಷ್ಠ ರೂ.80,000 ಹೆಚ್ಚಿಸುವುದು (ಅಧ್ಯಾಯ 7.69).

29. ಬೈಸಿಕಲ್‌. ಮು೦ಗಡವನ್ನು ಗರಿಷ್ಠ ರೂ.10,000. ಕ್ಕೆ. ಹೆಚ್ಚಿಸುವುದು (ಅಧ್ಯಾಯ 7.72)
ವಿದ್ಯತ್‌ ಚಾಲಿತ ಬೈಸಿಕಲ್‌ಗಳಿಗೆ ಮು೦ಗಡವನ್ನು ಗರಿಷ್ಠ ರೂ.30,000 ಕ್ಕೆ ಹೆಚ್ಚಿಸುವುದು (ಅಧ್ಯಾಯ 7.73).
ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನಗಳಿಗೆ ಮು೦ಗಡವನ್ನು ಗರಿಷ್ಠ ರೂ.1.25 ಲಕ್ಷಕ್ಕೆ ಹೆಚ್ಚಿಸುವುದು (ಅಧ್ಯಾಯ 7.70)
ವಿದ್ಯುತ್‌ ಚಾಲಿತ ನಾಲ್ಕು ಚಕ್ರದ ವಾಹನಗಳಿಗೆ ಮು೦ಗಡವನ್ನು ಗರಿಷ್ಠ ರೂ.10 ಲಕ್ಷಕ್ಕೆ ಹೆಚ್ಚಿಸುವುದು (ಅಧ್ಯಾಯ 7.67.)

30.ಗಣಕಯಂತ್ರ ಮುಂಗಡವನ್ನು ಗರಿಷ್ಠ ರೂ.60,000 ಕ್ಕೆ. ಪರಿಷ್ಕರಿಸುವುದು (ಅಧ್ಯಾಯ 7.79).

31.ಸೋಲಾರ್‌ ವಾಟರ್‌ ಹೀಟರ್‌, ಸೋಲಾರ್‌ ಕುಕ್ಕರ್‌, ಮೊಪೆಡ್‌ ಮತ್ತು ಮೋಟಾರು ವಾಹನಗಳ ದುರಸ್ಮಿ ಮತ್ತು ಉಪಕರಣಗಳಿಗೆ ಮು೦ಗಡಗಳನ್ನು ಸ್ಥಗಿತಗೊಳಿಸುವುದು (ಅಧ್ಯಾಯ 7.76).

32. ವೃ೦ದ ಎ ನೌಕರರಿಗೆ ಗರಿಷ್ಠ ರೂ.65 ಲಕ್ಷ ಮತ್ತು ಇತರ ನೌಕರರಿಗೆ ರೂ.40 ಲಕ್ಷಗಳ ಗೃಹ ನಿರ್ಮಾಣ ಭತ್ಯೆಯನ್ನು ಪರಿಷ್ಕರಿಸಿದೆ (ಅಧ್ಯಾಯ 7.78).

33.ನೌಕರರ ಸೇವಾವಧಿಯಲ್ಲಿ ರje ಪ್ರಯಾಣ ಭತ್ಯೆಯ ಪ್ರಯೋಜನವನ್ನು ಎರಡು ಬಾರಿಯಿ೦ದ ಮೂರು ಬಾರಿಗೆ ಹೆಚ್ಚಿಸುವುದು (ಅಧ್ಯಾಯ 7.84).

34.ಸರ್ಕಾರಿ ನೌಕರರ ತರಬೇತಿಯ ಗುಣಮಟ್ಟವನ್ನು ಸುಧಾರಿಸುವುದಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕೆಂದು ಗುರುತಿಸಿ, ತರಬೇತಿ ಸ೦ಸ್ಥೆಗಳಲ್ಲಿನ ಅಧ್ಯಾಪಕರ ಗುಣಮಟ್ಟವನ್ನು ಹೆಚ್ಚಿಸಲು, ಎಲ್ಲಾ ಸರ್ಕಾರಿ ತರಬೇತಿ ಸಂಸ್ಥೆಗಳಲ್ಲಿ ನಿಯೋಜಿತ ಅಥವಾ ಅಧ್ಯಾಪಕರಾಗಿ ನೇಮಕಗೊ೦ಡ ನೌಕರರಿಗೆ ಅಸ್ತಿತ್ವದಲ್ಲಿರುವ ವಿಶೇಷ ಭತ್ಯೆಯನ್ನು ಶೇ.25 ಕ್ಕ ಹೆಚ್ಚಿಸುವುದು (ಅಧ್ಯಾಯ 7.562.

35. ಇಲಾಖೆಗೆ ಸ೦ಬ೦ಧಿಸಿದ ಅಸ್ತಿತ್ವದಲ್ಲಿರುವ ಭತ್ಯೆಗಳನ್ನು ನಿಯಮಿತವಾಗಿ ಪರಿಶೀಲಿಸಲು ಮತ್ತು ಖಾತರಿಯಿಲ್ಲದವುಗಳನ್ನು ತೆಗೆದುಹಾಕಲು, ಆರ್ಥಿಕ ಇಲಾಖೆ, ಡಿಪಿಎಆರ್‌ ಮತ್ತು ಸ೦ಬ೦ಧಪಟ್ಟ ಆಡಳಿತ ಇಲಾಖೆಗಳು ಸ್ಥಾಯಿ ಸಮಿತಿಯನ್ನು ರಚಿಸುವ ಅಗತ್ಯತೆಯನ್ನು ಪುಸ್ತಾಪಿಸಿದೆ. ಯಾವುದೇ ಸ೦ದರ್ಭದಲ್ಲಿ, ಈ ಸ್ಮಾಯಿ ಸಮಿತಿಯು ನಿರ್ದಿಷ್ಟವಾಗಿ ಶಿಫಾರಸು ಮಾಡದ ಹೊರತು ಯಾವುದೇ ಹೊಸ
ಭತ್ಯೆಯನ್ನು ಪರಿಚಯಿಸತಕ್ಕದಲ್ಲ (ಅಧ್ಯಾಯ 7.7).

36.ಪೋಷಕರು ಅಥವಾ ಅತ್ತೆ/ಮಾವಂ೦ದಿರು ಅಥವಾ ಕುಟು೦ಬದ ಹಿರಿಯರು ಅಥವಾ ಗ೦ಭೀರ ಅನಾರೋಗ್ಯದಿ೦ದ ಬಳಲುತ್ತಿರುವ ಸಣ್ಣ ಮಕ್ಕಳನ್ನು ಆರೈಕೆ ಮಾಡಲು ನೌಕರರಿಗೆ ಆರೈಕೆ ರಜೆ ಎ೦ಬ ಹೊಸ ಪ್ರಯೋಜನವನ್ನು ಒದಗಿಸಬೇಕೆಂದು ಹಾಗೂ ರಜೆಯ ಅವಧಿಯಲ್ಲಿ ಶೇ.50 ರಷ್ಟು ವೇತನದೊಂದಿಗೆ ಈ ರಜೆಯ ಗರಿಷ್ಠ ಅವಧಿಯು 180 ದಿನಗಳಿಗೆ (6 ತಿ೦ಗಳುಗಳು) ನಿಗದಿಪಡಿಸಲು ಆಯೋಗವು ಶಿಫಾರಸ್ಸು ಮಾಡಿದೆ
(ಅಧ್ಯಾಯ 7.89).

37. ಸೇವೆಗೆ ಸೇರುವ 60 ದಿನಗಳ ಮೊದಲು ಮಗುವಿಗೆ ಜನ್ಮ ನೀಡಿದ ಮಹಿಳಾ ಸರ್ಕಾರಿ ನೌಕ ರಿಗೆ ಸೇವೆಗೆ ಸೇರುವ ಸಮಯದಲ್ಲಿ ನವಜಾತ ಶಿಶುವಿನ ಆರೈಕೆಯ ಅವಧಿಯಲ್ಲಿ ಇರುವವರಿಗೆ 18 ವಾರಗಳ ಹೆರಿಗೆ ರಜಿಯನ್ನು ಶಿಫಾರಸ್ಸು ಮಾಡಿದೆ (ಅಧ್ಯಾಯ 7.92)

38.ಕೆಲಸ-ವಿರಾಮ ಸಮತೋಲನವನ್ನು ಸುಧಾರಿಸಲು ಮತ್ತು ಆ ಮೂಲಕ ಸರ್ಕಾರಿ ನೌಕರರ ಕೆಲಸದ ಗುಣಮಟ್ಟವನ್ನು ಸುಧಾರಿಸಲು ಸರ್ಕಾರವು ಐದು ದಿನಗಳ ಕೆಲಸದ ವಾರವನ್ನು ಪರಿಚಯಿಸಬೇಕೆಂದು ಆಯೋಗವು ಶಿಫಾರಸ್ಸು ಮಾಡಿದೆ (ಅಧ್ಯಾಯ 9.42).

39. ಆಡಳಿತಕ್ಕೆ ಸ೦ಬ೦ಧಿಸಿದ ಪರಿಸರ ಸಾಮಾಜಿಕ ಮತ್ತು ಆಡಳಿತ (ESG) ತತ್ವಗಳು ಮತ್ತು ಸುಸ್ಥಿರ. ತಂತ್ರಜ್ಞಾನದಲ್ಲಿನ ಇತ್ತೀಚಿನ ಬೆಳವಣಿಗೆಗಳೊ೦ದಿಗೆ ಪ್ರತಿಯೊಬ್ಬ ಉದ್ಯೋಗಿಗಳಿಗೆ ಪರಿಚಿತರಾಗಲು ಡಿಪಿಎಆರ್‌ ತೆಗೆದುಕೊಳ್ಳಬೇಕಾದ ಸಚಿವಾಲಯ ಮತ್ತು ಕ್ಷೇತ್ರ ಮಟ್ಟದ ಸರ್ಕಾರಿ ನೌಕರರ ಸ೦ಪೂರ್ಣ ಸ್ಪೆಕ್ಟ್ರಮ್‌ ಅನ್ನು ಒಳಗೊಂಡಿರುವ ಸಮಗ್ರ ತರಬೇತಿ ಕಾರ್ಯಕ್ರಮವನ್ನು ಆಯೋಗವು ಬಲವಾಗಿ ಶಿಫಾರಸ್ಸು ಮಾಡುತ್ತದೆ (ಅಧ್ಯಾಯ 9.56)

Exit mobile version