ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (Bengaluru Metropolitan Transport CorporationBMTC) ತನ್ನ ಸಿಬ್ಬಂದಿಗೆ ಹೊಸ ವರ್ಷದ ಉಡುಗೊರೆ ನೀಡಿದೆ. ಬಿಎಂಟಿಸಿ ಸಿಬ್ಬಂದಿ (BMTC Staff) ಮೇಲೆ ನಿಗಮದಲ್ಲಿ ದಾಖಲಾದ ಎಲ್ಲಾ ಕೇಸ್‌ಗಳನ್ನು ಖುಲಾಸೆಗೊಳಿಸಲು (All Cases settled) ನಿರ್ಧರಿಸಲಾಗಿದೆ. ಬಿಎಂಟಿಸಿಯ 25ನೇ ವರ್ಷಾಚರಣೆ (BMTC Silver Jubilee) ಹಿನ್ನೆಲೆಯಲ್ಲಿ ಈ ಗಿಫ್ಟ್ ನೀಡಲಾಗಿದೆ.
ಬಿಎಂಟಿಸಿಯಲ್ಲಿ ಬಹಳ ವರ್ಷಗಳಿಂದಲೂ ಡಿಪೋ ಮ್ಯಾನೇಜರ್‌ಗಳ ಕಿರುಕುಳ, ಸಣ್ಣಪುಟ್ಟ ಪ್ರಕರಣಗಳಿಗೂ ಕೇಸ್ ದಾಖಲಾಗುತ್ತದೆ ಎಂಬ ಆರೋಪ ಕೇಳಿಬರುತ್ತಿತ್ತು. ಹೀಗೆ ಸಿಬ್ಬಂದಿ ಮೇಲೆ ದಾಖಲಾದ 6,960 ಕೇಸ್‌ಗಳನ್ನು ಖುಲಾಸೆ ಮಾಡಲಾಗುತ್ತಿದೆ. ಬಸ್‌ಗಳ ಆಪರೇಷನ್ ಕಾರ್ಯಾಚರಣೆ, ಮಾನವ ಸಂಪನ್ಮೂಲಗಳ ಸದ್ಬಳಕೆಯಿಂದ ಹಾಗೂ ಕಾರ್ಮಿಕರ ಹಿತ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಎಂಟಿಸಿ ಹೇಳಿದೆ.
ಇದರಿಂದಾಗಿ ಸುಮಾರು ಏಳು ಸಾವಿರ ಡ್ರೈವರ್, ಕಂಡಕ್ಟರ್ ಗಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ದಂಡ ಕಟ್ಟುವ ಭಯ, ಇನ್‌ಕ್ರಿಮೆಂಟ್ ಕಡಿತದ ಆತಂಕಗಳಿಂದ ಅವರು ಪಾರಾಗಿದ್ದಾರೆ. ಸಣ್ಣ ಪುಟ್ಟ ತಪ್ಪು ಮಾಡಿದರೂ ತಮ್ಮ ಮಾತು ಕೇಳದ ಸಿಬ್ಬಂದಿಯನ್ನು ಕೇಸು ಜಡಿದು ಸತಾಯಿಸುವ ಪ್ರವೃತ್ತಿಯೂ ಬಿಎಂಟಿಸಿಯಲ್ಲಿದೆ ಎಂಬ ಆಪಾದನೆ ಇತ್ತು.
ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ರೂಲ್-23ರಲ್ಲಿ ಬರೋ 26 ಗೈರು ಹಾಜರಿ ಪ್ರಕರಣ, 284 ಅಶಿಸ್ತು ಪ್ರಕರಣ ಸೇರಿ ಒಟ್ಟು 544 ಗಂಭೀರ ಶಿಕ್ಷಾರ್ಹ ಪ್ರಕರಣಗಳು ಖುಲಾಸೆಯಾಗುತ್ತಿವೆ. ಇದರಲ್ಲಿ ಅಮಾನತು ಆಗಿ ಮರು ನೇಮಕವಾದ ಪ್ರಕರಣಗಳೂ ಸೇರಿವೆ. ಹಾಗೆಯೇ ಡಿಪೋಗಳಲ್ಲಿ ದಾಖಲಾದ ಒಟ್ಟು 2,276 ಗೈರು ಹಾಜರಿ, 4,140 ಅಶಿಸ್ತು ಪ್ರಕರಣಗಳು ಸೇರಿ ಒಟ್ಟು 6,416 ಪ್ರಕರಣಗಳನ್ನು ಕೈ ಬಿಡಲಾಗುತ್ತಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ತಿಳಿಸಿದ್ದಾರೆ.
ಇದನ್ನೂ ಓದಿ: Killer BMTC : ಪತ್ನಿ ಸೀಮಂತಕ್ಕೆ ಹೂ ತರಲು ಹೋದವನ ಬಲಿ ಪಡೆದ ಬಿಎಂಟಿಸಿ!
ಬಿಎಂಟಿಸಿಯಲ್ಲಿ ಯಾವೆಲ್ಲ ಕೇಸ್‌ಗಳು ದಾಖಲಾಗುತ್ತವೆ?
- ಟ್ರಾಫಿಕ್ ಸೆನ್ಸಾರ್ ಉಲ್ಲಂಘನೆ
- ಎಲ್ಲೆಂದರಲ್ಲಿ ಬಸ್ ನಿಲ್ಲಿಸುವುದು
- ಬಸ್ ಚಾಲನೆ ವೇಳೆ ಮೊಬೈಲ್ ಬಳಕೆ
- ಕರ್ತವ್ಯದ ವೇಳೆ ಸಮವಸ್ತ್ರ ಧರಿಸದೇ ಇರುವುದು.
- ಡೋರ್ ಹಾಕದೆ ಬಸ್ ಚಾಲನೆ