Site icon Vistara News

Govt Employees News : ಸರ್ಕಾರಿ ನೌಕರರಿಗೆ ಶೇ.17 ವೇತನ ಹೆಚ್ಚಳಕ್ಕೆ ಅನುದಾನ; ಆರ್ಥಿಕ ಇಲಾಖೆ ಸೂಚನೆ

Karnataka Election Results- 217 Crorepatis In 224 Member Karnataka Assembly

ಬೆಂಗಳೂರು : ವಿಧಾನಸಭಾ ಚುನಾವಣೆಯ ಕೆಲಸದಲ್ಲಿ ತೊಡಗಿಸಿಕೊಂಡಿರುವ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ (Govt Employees News) ಇಲ್ಲಿದೆ. ಈಗಾಗಲೇ ರಾಜ್ಯ ಸರ್ಕಾರ ಪ್ರಕಟಿಸಿದಂತೆ ಶೇ.17 ರಷ್ಟು ವೇತನ ಹೆಚ್ಚಳವು ಏಪ್ರಿಲ್‌ 1 ರಿಂದಲೇ ಜಾರಿಗೆ ಬಂದಿದ್ದು, ವೇತನ ಹೆಚ್ಚಿಸಲು ಅಗತ್ಯವಾಗಿರುವ ಅನುದಾನಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯು ವಿವಿಧ ಇಲಾಖೆಗಳಿಗೆ ಅಗತ್ಯ ಸೂಚನೆ ನೀಡಿದೆ.

ವೇತನ ಹೆಚ್ಚಳ ಮಾಡುವಂತೆ ಕಳೆದ ಮಾರ್ಚ್‌ 1 ರಂದು ಸರ್ಕಾರಿ ನೌಕರರು ಮುಷ್ಕರ (Govt Employees Strike) ನಡೆಸಿದ ಸಂದರ್ಭದಲ್ಲಿ , ನೌಕರರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರವು ಶೇ. 17 ರಷ್ಟು ವೇತನ ಹೆಚ್ಚಳ ಮಾಡಿ ಅಧಿಕೃತ ಆದೇಶ ಹೊರಡಿಸಿತ್ತು. ಏಪ್ರಿಲ್‌ 1 ರಿಂದ ಇದು ಜಾರಿಗೆ ಬರಲಿದೆ ಎಂದು ಪ್ರಕಟಿಸಲಾಗಿತ್ತು. ಆದರೆ ಚುನಾವಣಾ ಪ್ರಕ್ರಿಯೆ ನಡೆಯುತ್ತಿರುವುದರಿಂದ ಏಪ್ರಿಲ್‌ ತಿಂಗಳ ವೇತನದಲ್ಲಿಯೇ ಈ ಹೆಚ್ಚಳ ಜಾರಿಗೆ ಬರುತ್ತದೆಯೇ ಎಂಬುದರ ಕುರಿತು ನೌಕರರಲ್ಲಿ ಸಣ್ಣ ಆತಂಕವೂ ಇತ್ತು. ಆದರೆ ಇದೀಗ ಆರ್ಥಿಕ ಇಲಾಖೆ ಹೊರಡಿಸಿದ ಸುತ್ತೋಲೆಯಿಂದಾಗಿ ಈ ಆತಂಕ ದೂರವಾಗಿದೆ.

ʻʻಪ್ರಸ್ತುತ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳ ಹಿನ್ನಲೆಯಲ್ಲಿ, ಸರ್ಕಾರದ ನೀತಿ ನಿರ್ಣಯದಂತೆ 7ನೇ ರಾಜ್ಯ ವೇತನ ಆಯೋಗದ (7th Pay Commission) ಅಂತಿಮ ವರದಿಯನ್ನು ಕಾಯ್ದಿರಿಸಿ, ರಾಜ್ಯ ಸರ್ಕಾರಿ ನೌಕರರಿಗೆ, ಸ್ಥಳೀಯ ಸಂಸ್ಥೆಗಳ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಾಗೂ ವಿಶ್ವವಿದ್ಯಾನಿಲಯಗಳ ಬೋಧಕೇತರ ಸಿಬ್ಬಂದಿಗಳಿಗೆ ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ಸರ್ಕಾರವು ನಿರ್ಧರಿಸಿರುತ್ತದೆʼʼ ಎಂದು ಅಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿತ್ತು.

ಏಪ್ರಿಲ್‌ ತಿಂಗಳಿನಿಂದಲೇ ಶೇ.17 ತಾತ್ಕಾಲಿಕ ಪರಿಹಾರವಾಗಿ ವೇತನವನ್ನು ಹೆಚ್ಚಿಸಲು 2023-24 ನೇ ಸಾಲಿನ ಬಜೆಟ್‌ನಲ್ಲಿ ಉದ್ದೇಶಿತ ಶೀರ್ಷಿಕೆಯಡಿಯಲ್ಲಿ ಯಾವುದೇ ಬೇಡಿಕೆಯಡಿ ಅನುದಾನವನ್ನು ಒದಗಿಸಲಾಗಿರಲಿಲ್ಲ. ಹೀಗಾಗಿ ವೇತನವನ್ನು ಹೇಗೆ ಹೆಚ್ಚಿಸಬೇಕೆಂದು ಆರ್ಥಿ ಇಲಾಖೆಯು ಎಲ್ಲ ಇಲಾಖೆಗಳಿಗೆ ಸುತ್ತೋಲೆಯಲ್ಲಿ ಮಾರ್ಗದರ್ಶನ ಮಾಡಿದೆ.

ಆರ್ಥಿಕ ಇಲಾಖೆ ಹೊರಡಿಸಿದ ಸುತ್ತೋಲೆ ನೋಡಲು ಇಲ್ಲಿ ಕ್ಲಿಕ್‌ (Click Here) ಮಾಡಿ.

ವೇತನ ಹೆಚ್ಚಳ ಮಾಡಲು ಅಗತ್ಯವಾಗಿರುವ ಅನುದಾನವನ್ನು ಇತರೆ ಭತ್ಯೆಗಾಗಿ ಒದಗಿಸಲಾಗಿರುವ ಅನುದಾನದಿಂದ ಪಡೆದು ಹೆಚ್ಚಳ ಮಾಡಬೇಕು. ಅನುದಾನದಲ್ಲಿ ಕೊರತೆಯಾದಲ್ಲಿ ವಿವಿಧ ಬೇಡಿಕೆಗಳಡಿ ಖಾಲಿ ಹುದ್ದೆಗಳಿಗಾಗಿ ಒದಗಿಸಿರುವ ಅನುದಾನದಿಂದ ಪುನರ್ವಿನಿಯೋಗ ಮಾಡಲಾಗುವುದು ಎಂದು ಎಲ್ಲ ಇಲಾಖೆಗಳಿಗೆ ತಿಳಿಸಲಾಗಿದೆ.

ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಈ ವೇತನ ಹೆಚ್ಚಳವು ಸರ್ಕಾರಿ ನೌಕರ ಮೂಲ ವೇತನದ ಮೇಲೆ 17% ಆಗಿರುತ್ತದೆ. ಅದರ ಆಧಾರದಲ್ಲಿ ಯಾವ ಶ್ರೇಣಿಯ ನೌಕರರಿಗೆ ಎಷ್ಟು ಹೆಚ್ಚಿನ ವೇತನ ಲಭಿಸಲಿದೆ ಎಂಬ ಲೆಕ್ಕಾಚಾರ ಇಲ್ಲಿದೆ;

Govt Employees News
Govt Employees News

ಇದನ್ನೂ ಓದಿ : Govt Employees Strike : ಎನ್‌ಪಿಎಸ್‌ ರದ್ದು ಪರಿಶೀಲನೆಗೆ ವಿಶೇಷ ಸಮಿತಿ ರಚನೆ; ಸರ್ಕಾರಿ ಆದೇಶದಲ್ಲಿ ಹೇಳಿರುವುದೇನು?

Exit mobile version