Site icon Vistara News

GPF Interest Rate : ಸಾಮಾನ್ಯ ಭವಿಷ್ಯ ನಿಧಿಯ ಬಡ್ಡಿದರ ನಿಗದಿ; ರಾಜ್ಯ ಸರ್ಕಾರದ ಅಧಿಸೂಚನೆ

GPF Interest Rate

#image_title

ಬೆಂಗಳೂರು: ರಾಜ್ಯ ಸರ್ಕಾರವು ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ವಂತಿಕೆದಾರರ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಜಮೆಯಾಗಿರುವ ಶಿಲ್ಕಿನ ಮೇಲಿನ ಬಡ್ಡಿದವರನ್ನು (Govt Employees News) ನಿಗದಿಪಡಿಸಿದೆ. ಕಳೆದ ಜನವರಿ 1 ರಿಂದ ಮಾರ್ಚ್‌ 31 ರವರೆಗಿನ (ಮೂರು ತಿಂಗಳು) ಅವಧಿಗೆ ವಾರ್ಷಿಕ ಶೇ.7.1 ಬಡ್ಡಿದರ (GPF Interest Rate) ನಿಗದಿಪಡಿಸಲಾಗಿದೆ.

ಈ ಸಂಬಂಧ ರಾಜ್ಯ ಸರ್ಕಾರ ಜೂನ್‌ 12 ರಂದು ಅಧಿಸೂಚನೆ ಹೊರಡಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಸಾಮಾನ್ಯ ಭವಿಷ್ಯ ನಿಧಿಯ ಬಡ್ಡಿದರವನ್ನು ಮೂರು ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. 01-04-2006 ಕ್ಕಿಂತ ಮೊದಲು ರಾಜ್ಯದ ಸೇವೆಗೆ ಸೇರಿದ ರಾಜ್ಯ ಸರ್ಕಾರಿ ನೌಕರರು ಈ ಭವಿಷ್ಯ ನಿಧಿಯ ವಂತಿಕೆದಾರರಾಗಿರುತ್ತಾರೆ. ಈಗಾಗಲೇ ಕೇಂದ್ರ ಸರ್ಕಾರವು ತನ್ನ ಸೇವೆಯ ಸಾಮಾನ್ಯ ಭವಿಷ್ಯ ನಿಧಿಯ ಬಡ್ಡಿದರವನ್ನು ಶೇ.7.1 ಕ್ಕೆ ನಿಗದಿ ಪಡಿಸಿ ಆದೇಶ ಹೊರಡಿಸಿದೆ. ಏಪ್ರಿಲ್‌ ನಿಂದ ಜೂನ್‌ ಅವಧಿಗೂ ಇದೇ ಬಡ್ಡಿದರ ಅನ್ವಯಿಸಲಿದೆ ಎಂದು ಸಹ ಪ್ರಕಟಿಸಿದೆ.

ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು, 2016ರ ಅಡಿಯಲ್ಲಿ ರಾಜ್ಯ ಸರ್ಕಾರವು ಈ ಭವಿಷ್ಯ ನಿಧಿಯನ್ನು ಸ್ಥಾಪಿಸಿದೆ. ಪ್ರತಿ ನೌಕರರು ಮಾಸಿಕ ವಂತಿಗೆಯನ್ನು ಪಾವತಿಸುವ ಮೂಲಕ ಈ ನಿಧಿಯ ಚಂದಾದಾರಾಗಬಹುದು. ತಾವು ಹೊಂದಿರುವ ಹುದ್ದೆಯ ಗರಿಷ್ಠ ಮೂಲ ವೇತನಕ್ಕೆ ಒಳಪ್ಟಟ ಕನಿಷ್ಠ ಪ್ರಮಾಣಕ್ಕಿಂತ ಹೆಚ್ಚಿನ ವಂತಿಗೆಯನ್ನು ಆಯ್ಕೆಮಾಡಿಕೊಳ್ಳಬಹುದು.

ಸಾಮಾನ್ಯ ಭವಿಷ್ಯ ನಿಧಿಯು ರಾಜ್ಯ ಮತ್ತು ಕೇಂದ್ರ ಸರ್ಕಾರದ ಭವಿಷ್ಯ ನಿಧಿ ಯೋಜನೆಯಾಗಿದ್ದು, ಕೇವಲ ಸರ್ಕಾರಿ ನೌಕರರಿಗೆ (ಗ್ರೂಪ್‌ ಡಿ ಹೊರತುಪಡಿಸಿ) ಇದನ್ನು ಒದಗಿಸಲಾಗುತ್ತದೆ. ಪ್ರತಿ ತಿಂಗಳು ನೌಕರರು ಇಂತಿಷ್ಟು ಎಂದು ತಮ್ಮ ವೇತನದಲ್ಲಿ ಹಣವನ್ನು ಇದಕ್ಕೆ ತೆಗೆದಿರಿಸುತ್ತಾರೆ. ಹೀಗೆ ಸಂಗ್ರಹವಾದ ಮೊತ್ತವನ್ನು ಅಗತ್ಯವಿರುವಾಗ ನೌಕರರು ಮನೆ ಅಥವಾ ನಿವೇಶನ ಕೊಳ್ಳುವ ಸಂದರ್ಭದಲ್ಲಿ, ಮನೆ ಕಟ್ಟುವಾಗ, ಮದುವೆಯಾಗುವ, ಕಾರು ಕೊಳ್ಳುವಾಗ ಅಥವಾ ಮಕ್ಕಳ ಶೈಕ್ಷಣಿಕ ಉದ್ದೇಶಗಳಿಗಾಗಿ ಈ ಹಣವನ್ನು ಹಿಂದಕ್ಕೆ ಪಡೆಯಲು ಅವಕಾಶ ನೀಡಲಾಗಿರುತ್ತದೆ. ಪಡೆದುಕೊಳ್ಳಬಹುದು, ಇಲ್ಲವೇ, ನಿವೃತ್ತಿ ಸಂದರ್ಭದಲ್ಲಿ ಒಟ್ಟಾಗಿ ಪಡೆದುಕೊಳ್ಳಬಹುದಾಗಿದೆ. ಮಹಾಲೇಖಪಾಲಕರ ಕಚೇರಿಯು ಈ ನಿಧಿಯನ್ನು ನಿರ್ವಹಿಸುತ್ತದೆ.

ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ.

ಇತ್ತೀಚೆಗೆ ಕೇಂದ್ರ ಸರ್ಕಾರವು ಈ ನಿಧಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ಮಾಡಿದ್ದು, ಈಗ ಜಿಪಿಎಫ್‌ ಅನ್ನು ಕಾರು, ಸ್ಕೂಟರ್‌ನಂಥ ಗ್ರಾಹಕೋತ್ಪನ್ನಗಳ ಖರೀದಿ ಸಲುವಾಗಿಯೂ ಬಳಸಬಹುದಾಗಿದೆ. ಈ ಹೊಸ ನಿಯಮದ ಪ್ರಕಾರ ಜಿಪಿಎಫ್‌ನಿಂದ ಹಣ ತೆಗೆಯುವ ಸಂದರ್ಭದಲ್ಲಿ ಅದನ್ನು ಮಂಜೂರು ಮಾಡುವ ಮತ್ತು ಕೈಗೆ ನೀಡುವ ಅವಧಿಯನ್ನು 15 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಅನಾರೋಗ್ಯದಂಥ ತುರ್ತು ಸಂದರ್ಭಗಳಲ್ಲಿ 7 ದಿನದೊಳಗೆ ಹಣವನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: NPS News: ಈ ಬಾರಿ ಬಜೆಟ್‌ನಲ್ಲಿ NPS ರದ್ದು?: ಪದಾಧಿಕಾರಿಗಳನ್ನು ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ

Exit mobile version